ಥಾಮಸ್, ಅರ್. ಸೆಕ್ (1947--) ೧೯೮೯
ಅಸಂಸಂ-ಜೀವರಸಾಯನಶಾಸ್ತ್ರ-ಕಿಣ್ವಗಳ ರಾಸಾಯನಿಕ ಲಕ್ಷಣಗಳ ಅಧ್ಯಯನದ ಮುಂದಾಳು.
ಥಾಮಸ್‍ನ ತಾತ ಬೊಹೆಮಿಯಾದಲ್ಲಿ ಮೋಚಿಯಾಗಿದ್ದು ಉತ್ತಮ ಜೀವನ ಅರಸಿ 1913ರಲ್ಲಿ ಅಸಂಸಂಗಳಿಗೆ ವಲಸೆ ಬಂದಿದ್ದನು. ಥಾಮಸ್ ತಂದೆ ಪರಿಶ್ರಮದಿಂದ ವೈದ್ಯನಾಗಿದ್ದನು. 8ಡಿಸೆಂಬರ್ 1947 ರಂದು ಥಾಮಸ್ ಚಿಕಾಗೋದಲ್ಲಿ ಜನಿಸಿದನು. ತಂದೆಯಿಂದ ವಿಜ್ಞಾನದಲ್ಲಿ ಆಸಕ್ತಿ, ಕುತೂಹಲ ಬೆಳೆಸಿಕೊಂಡ ಥಾಮಸ್ ನಾನಾ ಬಗೆಯ ಶಿಲೆಗಳನ್ನು ಸಂಗ್ರಹಿಸಿ ಅವುಗಳ ಮೂಲ ಹಾಗೂ ಉಗಮಗಳನ್ನು ಅರಿಯಲು ಯತ್ನಿಸಿದನು. ಥಾಮಸ್‍ಗೆ ಸಾಹಿತ್ಯ, ವಿಜ್ಞಾನ ಎರಡೂ ವಿಷಯಗಳು ಸರಿ ಸಮಾನವಾಗಿ ಪ್ರಿಯವಾಗತೊಡಗಿದವು. 1970ರಲ್ಲಿಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದ ಪದವಿ ವಿದ್ಯಾರ್ಥಿಯಾದನು. ಇಲ್ಲಿ ಜಾನ್ ಹಿಯರ್ಸ್‍ಟು ಮಾರ್ಗದರ್ಶನದಲ್ಲಿ ವರ್ಣಕಾಯಗಳ (Chromosomes) ರಚನೆಯ ಬಗೆಗೆ ಅಪಾರ ಆಸಕ್ತಿ ತಳೆದನು. ಇದರ ಫಲಿತಾಂಶವಾಗಿ ಸಿಯೆರಾ ನೆವಾಡಾದ ಅಲ್ಪೈನ್ ಕಾಡುಗಳಿಗೆ ಆಗಾಗ್ಗೆ ಭೇಟಿಯಿತ್ತನು. 1975ರಲ್ಲಿ ಡಾಕ್ಟರೇಟ್ ಗಳಿಸಿದ ಥಾಮಸ್ ಎಂಐಟಿ ಸೇರಿ ಮೇರಿ ಲೌ ಪಡ್ರ್ಯೂ ಪ್ರಯೋಗಾಲಯದಲ್ಲಿ ಜೀವಶಾಸ್ತ್ರದ ಮೂಲ ತತ್ತ್ವಗಳನ್ನು ಅರಿತನು. ಇಲ್ಲಿ ಕಿಣ್ವ (Enzyme) ರಾಸಾಯನಿಕಶಾಸ್ತ್ರದಲ್ಲಿ ಥಾಮಸ್‍ನಿಂದ ಮಹತ್ತರವಾದ ಸಂಶೋಧನೆಗಳು ಹೊರ ಬಂದವು. ಇದಕ್ಕಾಗಿ 1989ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019