ಡುಡ್ಲೆ ,ರಾಬರ್ಟ್ ಹೆಷಬ್ಯಾಖ್ –(1932--) -೧೯೮೬
ಅಸಂಸಂ-ರಸಾಯನಶಾಸ್ತ್ರ- ರಾಸಾಯನಿಕ ಕ್ರಿಯಾಗತಿ ವಿನ್ಯಾಸದ ಅಧ್ಯಯನ ನಡೆಸಿದಾತ.
ಡುಡ್ಲೆಯ ತಂದೆ ಕಟ್ಟಡಗಳ ನಿರ್ಮಾಣದ ಗುತ್ತಿಗೆದಾರನಾಗಿದ್ದನು. 18 ಜೂನ್ 1932ರಂದು ಕ್ಯಾಲಿಫೊರ್ನಿಯಾದ ಸ್ಯಾನ್‍ಜೋಸ್‍ನಲ್ಲಿ ಡುಡ್ಲೆಯ ಜನನವಾಯಿತು. ಹಸುಗಳ ಹಟ್ಟಿಯಲ್ಲಿ ಕೆಲಸ ಮಾಡುತ್ತಾ, ಹಾಲು ಹಿಂಡುತ್ತಾ, ಸಾಕು ಹಂದಿಗಳ ಆರೈಕೆಗೊಳಿಸುತ್ತಾ ಡುಡ್ಲೆ ಬಾಲ್ಯ ವಿಕಸಿಸಿತು. 1950ರಲ್ಲಿ ಸ್ಟ್ಯಾನ್ಫೊರ್ಡ್ ವಿಶ್ವವಿದ್ಯಾಲಯ ಸೇರಿದ ಡುಡ್ಲೆ 1954ರಲ್ಲಿ ಗಣಿತ, 1955ರಲ್ಲಿ ರಸಾಯನಶಾಸ್ತ್ರದ ಪದವಿಗಳನ್ನು ಪಡೆದನು,. ಹಾರ್ವರ್ಡ್‍ನಿಂದ 1958ರಲ್ಲಿ ಭೌತರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. 1959ರಲ್ಲಿ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಇಲ್ಲಿ ಆಲ್ಕಲಿ ಅಣುಗಳು ಆಲ್ಕೈಲ್ ಅಯೋಡೈಡ್ ಅಣುಗಳೊಂದಿಗೆ ಪ್ರತಿಕ್ರಿಯೆಗೊಳ್ಳುವುದನ್ನು ಅಭ್ಯಸಿಸತೊಡಗಿದನು. ನಲವತ್ತು ವರ್ಷಗಳ ಮೊದಲು ಮೈಖೇಲ್ ಪೆÇಲ್ಯಾನಿ ಇಂತಹುದೆ ಪ್ರಯೋಗಗಳನ್ನು ಕೈಗೊಂಡಿದ್ದನು. ಡುಡ್ಲೆ ರಾಸಾಯನಿಕ ಕ್ರಿಯಾಗತಿಶಾಸ್ತ್ರದಲ್ಲಿ ಪ್ರಾರಂಭಿಸಿದ ಈ ಅಧ್ಯಯನಗಳು ಅಲ್ಪಕಾಲದಲ್ಲೇ ಬೇರೆಯವರಿಂದ ಪೂರ್ಣ ಸೈದ್ಧಾಂತಿಕ ರೂಪ ಪಡೆಯತೊಡಗಿದವು. ಮುಂದೆ ಇವು ರಾಸಾಯನಿಕ ಕ್ರಿಯಾಗತಿಗಳನ್ನು ಎಲೆಕ್ಟ್ರಾನಿಕ್ ರಚನೆಯ ದೃಷ್ಟಿಯಲ್ಲಿ ಅರಿಯಲು ನೆರವಾದವು. ಇದಕ್ಕಾಗಿ ಡುಡ್ಲೆ 1986ರಲ್ಲಿ ನೊಬೆಲ್ ಪ್ರಶಸ್ತಿ ಪಡೆದವು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/27/2020