ಡೊನಾಲ್ಡ್, ಜೆ ಕ್ರ್ಯಾಮ್ (1919-2001) ೧೯೮೭
ಕೆನಡಾ-ರಸಾಯನಶಾಸ್ತ್ರ-ಸಾವಯವ ಹಾಗೂ ಕಾರ್ಬನಿಯನ್ ರಸಾಯನಶಾಸ್ತ್ರದಲ್ಲಿ ಕ್ರಾಂತಿಕಾರಕ ಸಂಶೋಧನೆಗಳನ್ನು ನಡೆಸಿದನು.
ಡೊನಾಲ್ಡ್‍ನ ತಂದೆ ಸ್ಕಾಟ್ಲೆಂಡ್ ಮೂಲದ ತಾಯಿ ಜರ್ಮನ್ ಹಿನ್ನೆಲೆಯ ಕೆನಡಾದಲ್ಲಿ ನೆಲೆಸಿದ ವಲಸಿಗರಾಗಿದ್ದರು. ಇವರು ತಮ್ಮ ಮೂವರು ಮಕ್ಕಳೊಂದಿಗೆ ಕೆನಡಾದ ಒಂಟೋರಿಯಾದಿಂದ ಅಸಂಸಂಗಳ ವೆರ್ಮಾಂಟ್‍ಗೆ ವಲಸೆ ಹೋದರು. ಡೊನಾಲ್ಡ್ ಜನನ ಇಲ್ಲಿಯೇ ಆಯಿತು. ನಾಲ್ಕೂವರೆ ವರ್ಷದವನಿರುವಾಗಲೇ ಡೊನಾಲ್ಡ್ ಮಕ್ಕಳ ಪುಸ್ತಕಗಳನ್ನು ಓದುತ್ತಿದ್ದನು. ಭಾರಿ ತುಂಟನಾಗಿದ್ದ ಡೊನಾಲ್ಡ್‍ಗೆ ವ್ಯಕ್ತಿತ್ವ ಹಾಗೂ ನಡವಳಿಕೆಗಳಲ್ಲಿ ಯಾವಾಗಲೂ ಸಿ ದರ್ಜೆಯೇ ದಕ್ಕುತ್ತಿತ್ತು. ಡೊನಾಲ್ಡ್ ಶಾಲೆಗಿಂತಲೂ ಹೊರಗಡೆ ಷೆಲ್ಲಿ, ಕೀಟ್ಸ್, ಷೇಕ್ಸಪಿಯರ್ ಪುಸ್ತಕಗಳ ಸಂಗದಲ್ಲಿ ಕಲಿತದ್ದೇ ಹೆಚ್ಚು, ಶಾಲಾ ಬಾಲಕನಾಗಿದ್ದಾಗ ತರಕಾರಿ, ಹಣ್ಣು , ಹಂಪಲು ,ಗೃಹ ಸಾಮಾಗ್ರಿಗಳನ್ನು ಮಾರಿ ಅಲ್ಪ ಸ್ವಲ್ಪ ಹಣ ಸಂಪಾದಿಸುತ್ತಿದ್ದನು. ಹದಿನಾರು ವರ್ಷದ ವೇಳೆಗೆ ಡೊನಾಲ್ಡ್ 6 ಅಡಿ ಬೆಳೆದು 85 ಕೆ.ಜಿ. ತೂಗುತ್ತಿದ್ದನು. ಬಣ್ಣ ಬಳಿಯುವ , ಸರಕು ಸಾಗಿಸುವ , ಹೊಲದಲ್ಲಿ ದುಡಿಯುವ ಕೆಲಸಗಳೊಂದಿಗೆ ಡೊನಾಲ್ಡ್‍ನ ಪ್ರೌಢಶಿಕ್ಷಣ ಮುಂದುವರಿಯಿತು. ನ್ಯಾಷನಲ್ ರೋಲಿನ್ಸ್ ಕಾಲೇಜಿನ ವಿದ್ಯಾರ್ಥಿ ವೇತನ ಗಳಿಸಿದ ಡೊನಾಲ್ಡ್ ರಸಾಯನಶಾಸ್ತ್ರ ಹಾಗೂ ತತ್ವಶಾಸ್ತ್ರವನ್ನು ಆಯ್ಕೆ ಮಾಡಿಕೊಂಡನು. ರೋಲಿನ್ಸ್ ಕಾಲೇಜಿನಲ್ಲಿರುವಾಗ ಹಾರಾಟದ ತರಬೇತಿ ಗಳಿಸಿ, ರೇಡಿಯೋ ಉದ್ಫೋಷಕನಾಗಿ, ನಾಟಕಗಳಲ್ಲಿ ಪಾತ್ರವಹಿಸುತ್ತಾ, ಸಂಗೀತ ತಂಡದ ಸದಸ್ಯನಾಗಿ ಶ್ರಮಿಸಿದನು. 1938ರಿಂದ 1941 ರಲ್ಲಿ ರಜಾ ಕಾಲದಲ್ಲಿ ನ್ಯೂಯಾರ್ಕ್ ಸಿಟಿಯಲ್ಲಿರುವ ನ್ಯಾಶನಲ್ ಬಿಸ್ಕೆಟ್ ಕಂಪನಿಯಲ್ಲಿ ಮಾರಾಟ ಪ್ರತಿನಿಧಿಯಾದನು. ಈ ಕಾಲದಲ್ಲೇ ಕೊಳೆಗೇರಿಗಳಿಗೆ ಭೇಟಿ ನೀಡುತ್ತಾ, ಸಾಮಾಜಿಕ ಅಸಮಾನತೆ, ಅನಿಷ್ಟ, ದರ್ಪ, ದೌರ್ಜನ್ಯ, ವೇಶ್ಯಾವಾಟಿಕೆ, ಮಾದಕದ್ರವ್ಯ, ಶ್ರೀಮಂತರ ಅಟ್ಟಹಾಸ ಬಾಲಾಪರಾಧಿಗಳ ಜಗತ್ತನ್ನು ಕಂಡನು. ನೆಬ್ರಾಸ್ಕ ವಿಶ್ವವಿದ್ಯಾಲಯ ಸೇರಿ, ನಾರ್ಮನ್.ಓ ಕ್ರಾಮ್‍ವೆಲ್‍ನ ಮಾರ್ಗದರ್ಶನದಲ್ಲಿ 1942ರಲ್ಲಿ ಸ್ನಾತಕೋತ್ತರ ಪದವಿ ಪಡೆದನು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾದಾಗ, ಮಾರ್ಕ್ ಮತ್ತು ಕಂಪನಿ ಸೇರಿದ ಡೋನಾಲ್ಡ್ ಪೆನ್ಸಿಲಿನ್ ಉತ್ಪಾದನೆಯ ಯೋಜನೆಯಲ್ಲಿ ನಿಯೋಜಿಸಲ್ಪಟ್ಟನು. ಇಲ್ಲಿ ಮ್ಯಾಕ್ಸ್ ಧಿಪ್ಲಾರ್‍ನ ಬೆಂಬಲ ದೊರೆಯಿತು. 1945ರಲ್ಲಿ ಯುದ್ದ ಕೈಗೊಂಡಾಗ ಮ್ಯಾಕ್ಸ್‍ನ ನೆರವಿನಿಂದ ಹಾರ್ವರ್ಡ್ ವಿಶ್ವವಿದ್ಯಾಲಯ ಸೇರಿ, ಫಿûೀಸರ್‍ನ ಮಾರ್ಗ ದರ್ಶನದಲ್ಲಿ ಡಾಕ್ಟರೇಟ್ ಗಳಿಸಿದನು. ಡೊನಾಲ್ಡ್ ಸಾವಯವ ಹಾಗೂ ಕಾರ್ಬನಿಯನ್ ರಸಾಯನಶಾಸ್ತ್ರದಲ್ಲಿ ಹಲವಾರು ಕ್ರಾಂತಿಕಾರಕ ಸಂಶೋಧನೆಗಳನ್ನು ನಡೆಸಿದನು. ಇದಕ್ಕಾಗಿ 1987ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/4/2019