ಜೆರೋಮ್ , ಕಾರ್ಲೆ-(1918---) ೧೯೮೫
ಅಸಂಸಂ-ರಸಾಯನಶಾಸ್ತ್ರ-ಸ್ಪಟಿಕಗಳ ರಾಚನಿಕ ಸ್ವರೂಪದ (Crystalline Structural Form) ವಿಶ್ಲೇಷಣೆಗೆ ಪ್ರಯೋಗ ಮತ್ತು ಗಣಿತದ ಮಾರ್ಗಗಳನ್ನು ರೂಪಿಸಿದಾತ.
ಹೆಸರಾಂತ ಕಲಾವಿದರ ಕುಟುಂಬದಲ್ಲಿ ಜೆರೋಮ್ ಜನನವಾಯಿತು. ನ್ಯೂಯಾರ್ಕ್‍ನ ಸಿಟಿ ಕಾಲೇಜಿನಿಂದ ರಸಾಯನ ಹಾಗೂ ಜೀವಶಾಸ್ತ್ರದಲ್ಲಿ ಪದವಿ ಗಳಿಸಿದ ಜೆರೋಮ್, ಜೀವಶಾಸ್ತ್ರದಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದನು. ಕೆಲಕಾಲದ ನಂತರ ಆಲ್ಬನಿಯಲ್ಲಿ ನ್ಯೂಯಾರ್ಕ್ ರಾಜ್ಯದ ಅರೋಗ್ಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದನು. ಇಲ್ಲಿ ಅಂತರ್ಜಲದಲ್ಲಿರುವ ಫ್ಲೋರಿನ್ ಪ್ರಮಾಣ ನಿರ್ಧರಿಸುವ ವಿಧಾನವನ್ನು ಜೆರೋಮ್ ರೂಪಿಸಿದನು. ಇದು ಜಗತ್ತಿನಾದ್ಯಂತ ಈಗ ಬಳಕೆಯಲ್ಲಿದೆ. 1940ರಲ್ಲಿ ಮಿಷಿಗನ್ ವಿಶ್ವವಿದ್ಯಾಲಯ ಸೇರಿ 1944ರಲ್ಲಿ ಡಾಕ್ಟರೇಟ್ ಗಳಿಸಿದನು. ನಂತರ ನೇವಲ್ ರಿಸರ್ಚ್ ಲ್ಯಾಬೋರೇಟರಿಯಲ್ಲಿ ಕೆಲಸಕ್ಕೆ ಸೇರಿದನು. ಇಲ್ಲಿ ಲೋಹದ ಮೇಲ್ಮೈ ಮೇಲೆ ಸ್ನೇಹಕಗಳಂತೆ (Lubricants) ವರ್ತಿಸುವ ಸುದೀರ್ಘ ಸರಪಳಿ ರೂಪದ ಹೈಡ್ರೋಕಾರ್ಬನ್ ಪದರಗಳ ಬಗೆಗೆ ಸಂಶೋಧನೆ ನಡೆಸಿದನು. ಹರ್ಬರ್ಟ್ ಹಾ¥sóïಮನ್ ಸಹಯೋಗದಲ್ಲಿ ಸ್ಪಟಿಕಗಳ ರಾಚನಿಕ ಸ್ವರೂಪದ ವಿಶ್ಲೇಷಣೆಗೆ ನೇರ ಪ್ರಾಯೋಗಿಕ ವಿಧಾನಗಳನ್ನು ರೂಪಿಸಿ, ಅವುಗಳನ್ನು ಗಣಿತದಿಂದ ವಿವರಿಸಿದನು. ಇದಕ್ಕಾಗಿ ಜೆರೋಮ್‍ಗೆ 1985ರಲ್ಲಿ ನೊಬೆಲ್ ಪ್ರಶಸ್ತಿ ದಕ್ಕಿತು. ಕಾರ್ಲೆಯ ಸಂಶೋಧನಾ ಜೀವನದುದ್ದಕ್ಕೂ ಸ್ವಯಂ ವಿಜ್ಞಾನಿಯಾಗಿದ್ದ ಪತ್ನಿ ಇಸಾಬೆಲ್ಲಾಳ ಅವಿರತ ನೆರವು, ಒತ್ತಾಸೆ ದಕ್ಕಿದವು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/29/2019