অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜೀನ್ ಮಾರಿ ಲೆಹ್ನ್–(1939--) 1987

ಜೀನ್ ಮಾರಿ ಲೆಹ್ನ್–(1939--) 1987

ಜೀನ್ ಮಾರಿ ಲೆಹ್ನ್–(1939--)   ೧೯೮೭

ಫ್ರಾನ್ಸ್ -ರಸಾಯನಶಾಸ್ತ್ರ- ಜೀವಿಗಳಲ್ಲಿ ರಾಸಾಯನಿಕಗಳು ಜೋಡಣೆಗೊಳ್ಳುವ, ಹತೋಟಿ ಸಾಧಿಸುವ ಅಧ್ಯಯನ ನಡೆಸಿದಾತ.

ಜೀನ್, ಫ್ರಾನ್ಸ್ ಅಲಾಸೇಸ್ ಎಂಬ ಪಟ್ಟಣದಲ್ಲಿ 30 ಸೆಪ್ಟೆಂಬರ್ 1939ರಂದು ಜನಿಸಿದನು.  ಎರಡನೇ ಜಾಗತಿಕ ಯುದ್ದ ಕೊನೆಗೊಂಡ ಮೇಲೆ ಹನ್ನೊಂದನೇ ವಯಸ್ಸಿನಲ್ಲಿ ಶಾಲೆಗೆ ಸೇರಿದನು. 1950ರಿಂದ 1957ರವರೆಗೆ ಜೀನ್ ಅಭಿಜಾತಶಾಸ್ತ್ರ, ಲ್ಯಾಟಿನ್, ಗ್ರೀಕ್, ಜರ್ಮನ್ ಭಾಷೆ,ಫೆ್ರಂಚ್ ಸಾಹಿತ್ಯ, ತತ್ತ್ವಶಾಸ್ತ್ರಗಳ ಅಧ್ಯಯನ ಮಾಡಿದನು. ಇದೇ ಕಾಲಕ್ಕೆ ಜೀನ್ ರಸಾಯನಶಾಸ್ತ್ರದಲ್ಲಿ ಆಸಕ್ತಿ ತಳೆದನು. 1957ರಲ್ಲಿ ಪ್ರಾಯೋಗಿಕ ವಿಜ್ಞಾನ ಹಾಗೂ ತತ್ತ್ವಶಾಸ್ತ್ರದಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದನು.  ಸ್ಟ್ರಾಸ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ಸಾವಯವ ರಸಾಯನಶಾಸ್ತ್ರದಲ್ಲಿ ಪದವಿಗೆ ಸೇರಿದನು.  ಪದವಿ ಗಳಿಸಿದ ನಂತರ 1960ರಲ್ಲಿ ರಾಷ್ಟ್ರೀಯ ವೈಜ್ಞಾನಿಕ ಕೇಂದ್ರಕ್ಕೆ ಸೇರಿದನು. ಬೈಜಿಕ ಕಾಂತೀಯ ಅನುರಣನ (NMR-Nuclear Magnetic Resonance) ರೋಹಿತದರ್ಶಕ (Spectrometer) ಬಳಸಿ ಟ್ರೈಟರ್ಪೀನ್‍ಗಳ ಭೌತ ರಾಸಾಯನಿಕ ಗುಣಗಳ ಅಧ್ಯಯನ ವiುಗಿಸಿ, 1963ರಲ್ಲಿರಾಷ್ಟ್ರೀಯ ವೈಜ್ಞಾನಿಕ ಕೇಂದ್ರದಲ್ಲಿಸೇರಿದನು. ನಂತರ ಅಸಂಸಂದ ಹಾರ್ವರ್ಡ್ ವಿಶ್ವವಿದ್ಯಾಲಯದ ರಾಬರ್ಟ್  ಬನ್ರ್ಸ್ ವುಡವರ್ಡ್ ಪ್ರಯೋಗಾಲಯ ಸೇರಿ ಅಲ್ಲಿ ವಿಟಮಿನ್ ಬಿ-12 ಸಂಪೂರ್ಣ ಸಂಶ್ಲೇಷಣಾ ಕಾರ್ಯಕ್ರಮದಲ್ಲಿ ಭಾಗಿಯಾದನು.  ಇಲ್ಲಿಂದ ಸ್ಟ್ರಾಸ್‍ಬರ್ಗ್‍ಗೆ ಮರಳಿದ ಜೀನ್ ಸಾವಯವ ರಸಾಯನಶಾಸ್ತ್ರ , ಕ್ವಾಂಟಂ ಸಿದ್ಧಾಂತ ಹಾಗೂ ಪ್ರಯೋಗ ಬೆಂಬಲಿತ ಭೌತಿಕ ವಿಧಾನಗಳನ್ನು ಒಗ್ಗೂಡಿಸಿ ಹೊಸ ಸಂಶೋಧನೆಗಳತ್ತ ದೃಷ್ಟಿಹರಿಸಿದನು. ರಾಸಾಯನಿಕ ಸಂಯುಕ್ತಗಳ ಸಂರಚನೆ ಹಾಗೂ ಅವುಗಳ ಭೌತ ರಾಸಾಯನಿಕ ಗುಣಗಳ ಮಧ್ಯದ ಸಂಬಂಧದ ಹುಡುಕಾಟದಲ್ಲಿ ಜೀನ್ ಯಶಸ್ಸನ್ನು ಕಂಡನು.  ಜೀನ್‍ಗೆ ಕಾಲಕ್ರಮೇಣ ನರವ್ಯೂಹ, ರಾಸಾಯನಿಕ ದೃಷ್ಟಿಯಲ್ಲಿ ಅದರ ಕ್ರಿಯಾಶೀಲತೆಯ ಬಗೆಗೆ ಕುತೂಹಲ, ಮೂಡಿತು. ನರಕೋಶಗಳಲ್ಲಿನ ವೈದ್ಯುತ್ ಚಟುವಟಿಕೆಗಳು ಅದರಲ್ಲಿನ ಪೆÇರೆಗಳಲ್ಲಿ ಸೋಡಿಯಂ ಹಾಗೂ ಪೆÇಟ್ಯಾಷಿಯಂ ಅಯಾನ್‍ಗಳ ವಿತರಣೆಯ ಮೇಲೆ ಅವಲಂಬಿತವಾಗಿರುತ್ತದೆ.  ಇಂತಹ ಸ್ಥಿತಿಗೆ ಅನುಗುಣವಾಗಿರುವ ರಾಸಾಯನಿಕ ವಸ್ತುಗಳ ಹುಡುಕಾಟವನ್ನು ಜೀನ ಪ್ರಾರಂಭಿಸಿದನು. ಮುಂದೆ ಇದು ಮಹಾಅಣ್ವಕ(Supramolecular) ರಸಾಯನಶಾಸ್ತ್ರದ ಶಾಖೆಗೆ ಕಾರಣವಾಯಿತು. 1976ರಲ್ಲಿ ದ್ಯುತಿ ಸಂಶ್ಲೇಷಣಾ ಕ್ರಿಯೆಯನ್ನು ಕೃತಕವಾಗಿ ಸಾಧಿಸಲು ಜೀನ್ ನೇತೃತ್ವದ ತಂಡ ಪ್ರಯತ್ನಿಸಿತು. ಇದರಿಂದ ಅಪಾರ ಪ್ರಮಾಣದಲ್ಲಿ ದಕ್ಕುವ ಸೌರ ಚೈತನ್ಯವನ್ನು ಸಂಗ್ರಹಿಸುವ, ಮಾರ್ಪಡಿಸುವ ರಾಸಾಯನಿಕ ಸಾಧ್ಯತೆಗಳತ್ತ ವಿಜ್ಞಾನಿಗಳ ಗಮನ ಹರಿಯಿತು. ಜೀನ್‍ನಿಂದ  ಪ್ರಾರಂಭಿಸಲ್ಪಟ್ಟ  ಮಹಾ ಅಣ್ವಯಿಕ ರಸಾಯನಶಾಸ್ತ್ರ ಬೃಹದಾಕಾರವಾಗಿ ಬೆಳೆದು, ಜೀವಶಾಸ್ತ್ರ, ರಸಾಯನಶಾಸ್ತ್ರಗಳ ಮಧ್ಯದ ಗಡಿಯನ್ನು ನಿರ್ಧರಿತು. ಜೀವಿಗಳಲ್ಲಿ ರಾಸಾಯನಿಕಗಳು ಸ್ವಯಂ ಜೋಡಣೆಗೊಳ್ಳುವ ಹತೋಟಿ ಸಾಧಿಸುವ, ಕಾರ್ಯ ನಿಯೋಜಿತವಾಗುವ ರಹಸ್ಯಗಳನ್ನು ಅರಿಯುವತ್ತ ಹೆಜ್ಜೆ ಇಟ್ಟಂತಾಯಿತು. ಇದು ಅಣ್ವಯಿಕ ಸಾಫ್ಟ್ವೇರ್ ತಯಾರಿಸಿದಂತಹ ಸಾಧನೆಗೆ ಸಮನಾದುದು. ಇದಕ್ಕಾಗಿ ಜೀನ್ 1987ರ ನೊಬೆಲ್ ಪ್ರಶಸ್ತಿ ಪಡೆದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 1/12/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate