ಚಾರ್ಲ್ಸ್, ಜೆ ಪೆಡೆರ್‍ಸೆನ್ (1904-1989) -೧೯೮೭
ಕೊರಿಯಾ-ರಸಾಯನಶಾಸ್ತ್ರ- ಕ್ರೌನ್ ಈಥರ್’ಗಳ ಅಧ್ಯಯನಕ್ಕೆ ನಾಂದಿ ಹಾಡಿದಾತ.
ಚಾರ್ಲ್ಸ್ ತಂದೆ ನಾರ್ವೆ ಮೂಲದವನಾಗಿದ್ದು, ಯುವಕನಾಗಿರುವಾಗ ಸಮುದ್ರಯಾನ ಕೈಗೊಂಡಿದ್ದ ಹಡುಗಿನ ಇಂಜಿನಿಯರ್‍ನ ಸಹಾಯಕನಾಗಿ ಕೊರಿಯಾ ತಲುಪಿದನು. ಈತ ಇಲ್ಲಿಯೇ ನೆಲೆಸಿ ಕೊರಿಯಾದಲ್ಲಿದ್ದ ಬ್ರಿಟಿಷ್ ಆಡಳಿತದಲಿ ಅಧಿಕಾರಿಯಾದನು. ನಂತರ ಈಗಿನ ಉತ್ತರ ಕೊರಿಯಾದ ಉನ್ಸಾನ್ ಗಣಿಗಳಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದನು. ಚಾರ್ಲ್ಸ್ ಕೊರಿಯಾದ ಪುಸಾನ್ ಪಟ್ಟಣದಲ್ಲಿ 3 ಅಕ್ಟೋಬರ್ 1904 ರಂದು ಜನಿಸಿದನು. ಚಾರ್ಲ್ಸ್ ತಾಯಿ ಜಪಾನ್ ಮೂಲದ ವ್ಯಾಪಾರಿಯ ಮಗಳು. ಉನ್ಸಾನ್ ಸುತ್ತ ಮುತ್ತಲಿನ ಗಣಿಗಳು ಅಸಂಸಂದ ವಶದಲ್ಲಿದ್ದವು. ಇದರಿಂದಾಗಿ ಚಾರ್ಲ್ಸ್, ಅಮೆರಿಕನ್ನರನ್ನು ಅನುಸರಿಸಿ, ಇಂಗ್ಲೀಷ್ ಕಲಿಯಲು ಯತ್ನಿಸಿದನು. ಉನ್ಸಾನ್ ಸನಿಹದಲ್ಲಿ ಇಂಗ್ಲಿಷ್ ಶಾಲೆಗಳು ಇರದಿದ್ದುದರಿಂದ ಎಂಟನೇ ವರ್ಷದಲ್ಲಿ ಜಪಾನ್‍ನ ನಾಗಸಾಕಿಯ ಕಾನ್ವೆಂಟಿಗೆ ಸೇರಿದನು. ನಂತರ ಯೊಕಹಾಮದಲ್ಲಿದ್ದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಶಿಕ್ಷಣ ಪಡೆದನು. ಅಸಂಸಂಗಳ ಓಹಿಯೋ ರಾಜ್ಯದ ಡೇಟನ್ ವಿಶ್ವವಿದ್ಯಾಲಯ ಸೇರಿದ ಚಾರ್ಲ್ಸ್ ಇಲ್ಲಿ ರಾಸಾಯನಿಕ ಇಂಜಿನಿಯರಿಂಗ್‍ನಲ್ಲಿ ಪದವಿ ಗಳಿಸಿದನು. ಎಂಐಟಿಯಿಂದ ಸಾವಯವ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. 1927ರಲ್ಲಿ ಡೆಲಾವೆರ್‍ನ ವಿಲ್ಮಿಂಗ್‍ಟನ್‍ನಲ್ಲಿರುವ ಡುಪಾಂಟ್ ಕಂಪನಿಗೆ ಉದ್ಯೋಗಕ್ಕೆ ಸೇರಿದನು. ಇಲ್ಲಿ ಪೆಟ್ರೋಲಿಯಂ ಉತ್ಪನ್ನ ರಬ್ಬರ್ ಹಾಗೂ ತಾಮ್ರದ ವೇಗ ವರ್ಧಕಗಳನ್ನು ಕುರಿತಾಗಿ ಕೆಲಸ ಮಾಡಿದನು. 1940ರ ವೇಳೆಗೆ ದ್ಯುತಿರಸಾಯನಶಾಸ್ತ್ರದಲ್ಲಿ (Photochemistry) ಆಸಕ್ತಿ ಹೊಂದಿ, ಕ್ವಿನೋನೈಮೇನ್ ಡೈಯಾಕ್ಸೈಡ್‍ಗಳನ್ನು ಕುರಿತಾಗಿ ಸಂಶೋಧಿಸಿದನು. 1960ರಲ್ಲಿ ವೆನಡೈಲ್ ಗುಂಪಿನ ರಾಸಾಯನಿಕ ವೇಗವರ್ಧಕಗಳ (Catalyst) ಮೇಲೆ ಫಿûನಾಲಿಕ್ ಲೈ ಗ್ಯಾಂಡ್ಸ್‍ಗಳು ಬೀರುವ ಪರಿಣಾಮವನ್ನು ಕುರಿತಾದ ಅಧ್ಯಯನ ಕೈಗೆತ್ತಿಕೊಂಡನು. ಇವುಗಳ ಪ್ರಯೋಗಗಳಲ್ಲಿ ಉಪಉತ್ಪನ್ನವಾಗಿ ಅತ್ಯಲ್ಪ ಪ್ರಮಾಣದ , ಆವರೆಗೆ ಗೊತ್ತಿರದ ಹರಳು ದಕ್ಕಿತು. ಇದನ್ನು ಚಾಲ್ರ್ಸ್ ಡೈ ಬೆಂಜೋ 18-ಕ್ರೌನ್-6 ಎಂದು ಗುರುತಿಸಿದನು. ಇದು ಕ್ರೌನ್ ಈಥರ್‍ಗಳ ಅಧ್ಯಯನಕ್ಕೆ ನಾಂದಿ ಹಾಡಿತು. ಇದಕ್ಕಾಗಿ ಚಾಲ್ರ್ಸ್‍ಗೆ 1987ರ ನೊಬೆಲ್ ಪ್ರಶಸ್ತಿ ದಕ್ಕಿತು. ಮೀನು ಹಿಡಿಯುವುದು, ತೋಟಗಾರಿಕೆ , ಹಕ್ಕಿ ವೀಕ್ಷಣೆ, ಕಾವ್ಯವಾಚನ ಚಾಲ್ರ್ಸ್‍ನ ನೆಚ್ಚಿನ ಹವ್ಯಾಸಗಳಾಗಿದ್ದವು. ಚಾಲ್ರ್ಸ್ 26 ಅಕ್ಟೋಬರ್ 1989ರಂದು ಮೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/24/2020