ಕೆನಿಚಿ, ಫುಕುಯಿ (1918-1998) ೧೯೮೧
ಜಪಾನ್-ರಸಾಯನಶಾಸ್ತ್ರ-ಸಂಯುಕ್ತಗಳ ಮಧ್ಯದ ಆವಿಷ್ಟ ವರ್ಗಾವಣೆಯ ಬಲಗಳಿಗೆ (Charge Transfer Forces)
ಸೈದ್ಧಾಂತಿಕ ವಿವರಣೆ ನೀಡಿದಾತ.
ಕೆನಿಚಿಯ ತಂದೆ ಜಪಾನ್‍ನ ನಾರಾ ಪಟ್ಟಣದಲ್ಲಿ ವ್ಯಾಪಾರಿಯಾಗಿದ್ದನು. ಇಲ್ಲಿಯೇ 4 ಅಕ್ಟೋಬರ್ 1918 ರಂದು ಕೆನಿಚಿಯ ಜನನವಾಯಿತು. ಕೆನಿಚಿಗೆ ರಸಾಯನಶಾಸ್ತ್ರದಲ್ಲಿ ಯಾವುದೇ ಆಸಕ್ತಿಯಿರಲಿಲ್ಲ. ಪ್ರೌಢಶಿಕ್ಷಣ ಮುಗಿಸಿದ ನಂತರ ವಿಜ್ಞಾನದ ಯಾವ ಶಾಖೆಯಲ್ಲಿ ಪದವಿ ಗಳಿಸಿದರೆ ಉತ್ತಮವೆಂದು ಕೆನಿಚಿಯ ತಂದೆ ಕ್ಯೋಟ್ಯೋ ವಿಶ್ವವಿದ್ಯಾ¯ಯದಲ್ಲಿ ಪ್ರಾಧ್ಯಾಪಕನಾಗಿದ್ದ ಜೆನ್.ಇಟ್ಸುವಿನ್ ಸಲಹೆ ಕೇಳಿದನು. ಇದರ ಮೇರೆಗೆ ಕೆನಿಚಿ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗಕ್ಕೆ ಸೇರುವಂತಾಯಿತು. 1941ರಲ್ಲಿ ಪದವಿ ಗಳಿಸಿದ ಮೇಲೆ ಕೆನಿಚಿ ಜಪಾನ್ ಸೇನೆಯ ಇಂಧನ ಪ್ರಯೋಗಾಲಯ ಸೇರಿದನು. ಇಲ್ಲಿ ಸಂಶ್ಲೇಷಿತ ಇಂಧನವನ್ನು ಪಡೆಯುವ ಪ್ರಯತ್ನಗಳಲ್ಲಿ ಭಾಗಿಯಾದನು. 1943ರಲ್ಲಿ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ಇಂಧನ ರಸಾಯನಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕನಾಗಿ 1951ರಲ್ಲಿ ಪ್ರಾಧ್ಯಾಪಕನಾದನು. 1944ರಿಂದ 1972 ರವರೆಗೆ ಸೈದ್ಧಾಂತಿಕ ರಸಾಯನಶಾಸ್ತ್ರಜ್ಞರ ನೆರವಿನಿಂದ ನೂರಾರು ಪ್ರಯೋಗ ಸಂಶೋಧನೆಗಳನ್ನು ನಡೆಸಿದ ಕೆನಿಚಿ ಜಪಾನಿ ಭಾಷೆಯಲ್ಲಿ 137ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದನು. 1952ರಲ್ಲಿ ಸಂಯುಕ್ತಗಳ ರಾಸಾಯನಿಕ ಕ್ರಿಯಾಶೀಲತೆಗೂ ಮುಂಚೂಣಿಯಲ್ಲಿರುವ ಎಲೆಕ್ಟ್ರಾನ್ ಸಾಂದ್ರತೆಗೂ ಇರುವ ಸಂಬಂಧವನ್ನು ಕೆನಿಚಿ ಗುರುತಿಸಿದನು. ಇದನ್ನು ಕಿನಿಚಿಯ ಸೈದ್ಧಾಂತಿಕ ತಂಡ ರಾಸಾಯನಿಕ ಪ್ರತಿಕ್ರಿಯಾ ಸಿದ್ಧಾಂತ ಮಂಡಿಸಲು ನೆರವಾಯಿತು. ಇದೇ ವೇಳೆಗೆ ಮುಲ್ಲಿಕೆನ್ ಸಂಯುಕ್ತಗಳ ಮಧ್ಯದ ಆವಿಷ್ಟ ವರ್ಗಾವಣೆಯ ಬಲಗಳ ಬಗೆಗೆ ಬೆಳಕು ಚೆಲ್ಲಿದನು. ಕೆನಿಚಿ ಇದಕ್ಕೆ ಸೈದ್ಧಾಂತಿಕ ವಿವರಣೆ ನೀಡಿದನು. ಇದಕ್ಕಾಗಿ ಕೆನಿಚಿಗೆ 1981ರಲ್ಲಿ ನೊಬೆಲ್ ಪ್ರಶಸ್ತಿ ದಕ್ಕಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019