ಆ್ಯರನ್, ಕ್ಲಗ್ –(1926--) -೧೯೮೨
ಲಿಥುವೇನಿಯಾ-ದಕ್ಷಿಣಾ ಆಫ್ರಿಕಾ-ಭೌತಶಾಸ್ತ್ರ-ಜೈವಿಕ ಅಣುಗಳ ರಾಚನಿಕ ಸ್ವರೂಪ ನಿರ್ಧಾರಕ್ಕೆ ಸ್ಫಟಿಕದರ್ಶಕ ವಿಧಾನಗಳನ್ನು ಬಳಸಿದಾತ.
ಆ್ಯರನ್ ಲಿಥುವೇನಿಯಾದ ಝೆಲ್ವಾಸ್ ಪಟ್ಟಣದಲ್ಲಿ 1926ರಲ್ಲಿ ಜನಿಸಿದನು. ಎರಡು ವರ್ಷದ ಬಾಲಕ ನಾಗಿರುವಾಗ ಈತನ ತಂದೆ ದಕ್ಷಿಣಾ ಆಫ್ರಿಕಾದ ಡರ್ಬಾನ್‍ನಲ್ಲಿ ನೆಲೆಸಿದನು. ಔಪಚಾರಿಕ ಶಿಕ್ಷಣ ಹೊಂದಿರದ ಆ್ಯರನ್‍ನ ತಂದೆ ದನ ಸಾಕಾಣಿಕೆಯಿಂದ ಜೀವನ ಸಾಗಿಸುತ್ತಿದ್ದನು. ಬಾಲ್ಯದಲ್ಲಿ ವೈವಿಧ್ಯಮಯ ಪುಸ್ತಕಗಳನ್ನು ಆ್ಯರನ್ ಓದುತ್ತಿದ್ದನಾದರೂ , ಯಾವುದೇ ಒಂದು ನಿರ್ದಿಷ್ಟ ವಿಷಯದಲ್ಲೂ ಅಂತಹ ಆಸಕ್ತಿಯಿರಲಿಲ್ಲ. ಪ್ರೌಢಶಾಲೆಯಲ್ಲಿರುವಾಗ ಪಾಲ್ ಡೆ ಕ್ರುಯಿ¥sóïನ ಮೈಕ್ರೋಬ್ ಹಂಟರ್ಸ್ ಪುಸ್ತಕ ಓದಿದ ನಂತರ ತಾನೂ ಒಬ್ಬ ಸೂಕ್ಷ್ಮಜೀವಿಶಾಸ್ತ್ರಜ್ಞನಾಗಬೇಕೆಂದು ಬಯಸಿದನು. ಇದರ ಪರಿಣಾಮವಾಗಿ ಜೋಹಾನ್ಸ್‍ಬರ್ಗ್‍ನ ವಿಟ್‍ವಾಟರ್‍ಸ್ರಾಂಡ್ ವಿಶ್ವವಿದ್ಯಾಲಯದಲ್ಲಿ ಜೀವರಸಾಯನಶಾಸ್ತ್ರವನ್ನು ಆರಿಸಿಕೊಂಡನು. ಆದರೆ ಅಲ್ಪಕಾಲದಲ್ಲೇ ರಸಾಯನ, ಭೌತಶಾಸ್ತ್ರಕ್ಕೆ ಬದಲಾಯಿಸಿಕೊಂಡನು. ಸ್ನಾತಕೋತ್ತರ ಪದವಿಗಾಗಿ ಕೇಪ್‍ಟೌನ್ ವಿಶ್ವ ವಿದ್ಯಾಲಂiÀi ಸೇರಿ ದೃಕ್‍ಶಾಸ್ತ್ರ ಸಂಬಂಧಿತ ಪ್ರಯೋಗಗಳಲ್ಲಿ ಪರಿಣಿತಿ ಗಳಿಸಿದನು. ಇದರ ಫಲಿತಾಂಶಗಳ ವಿಶ್ಲೇಷಣೆ ನಡೆಸುತ್ತಾ ದ್ರವ್ಯದ ಮೂಲ, ಅದರ ರಚನೆಯ ಬಗೆಗೆ ಕುತೂಹಲ ತಾಳಿದನು. ನಂತರ ಆ್ಯರನ್ ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜಿನ ಕ್ಯಾವೆಂಡಿಷ್ ಪ್ರಯೋಗಾಲಯ ಸೇರಿ, ಉಕ್ಕು ತಂಪಾಗುವಾಗ ಘಟಿಸುವ ಸ್ಥಿತ್ಯಂತರಗಳ ಅಧ್ಯಯನ ನಡೆಸಿದನು. ಡಾಕ್ಟರೇಟ್ ಗಳಿಸಿದ ನಂತರ ಎ¥sóï.ಜಿ.ರ¥sóïಟನ್‍ನೊಂದಿಗೆ ಕೆಂಪು ರಕ್ತ ಕಣಗಳೊಳಗೆ ಆಮ್ಲಜನಕ ಅಥವಾ ಇಂಗಾಲದ ಡೈ ಆಕ್ಸೈಡ್, ಮೊನಾಕ್ಸೈಡ್‍ಗಳು ರಾಸಾಯನಿಕ ಕ್ರಿಯೆಗೊಳಗಾಗುತ್ತಾ,ವಿಸರಣೆಗೊಳ್ಳುವ (Diffusion) ವಿದ್ಯಾಮಾನದ ಅಧ್ಯಯನ ನಡೆಸಿದನು. ಇದಾದ ನಂತರ ಜೈವಿಕ ಅಣುಗಳತ್ತ ಆ್ಯರನ್ ಗಮನ ಹರಿಯಿತು. 1953ರಲ್ಲಿ ಲಂಡನ್‍ನ ಬಿರ್ಕ್‍ಬೆಕ್ ಕಾಲೇಜನ್ನು ಸೇರಿ, ರೊಸಾಲಿಂಡಾ ಫ್ರಾಂಕ್’ಲಿನ್ ಸಹಯೋಗದಲ್ಲಿ ತಂಬಾಕಿನ, ಮೊಸಾಯಿಕ್ ವೈರಸ್‍ನ್ನು ಕುರಿತಾಗಿ ನಡೆಸಿದ ಸಂಶೋಧನೆಗಳಿಂದ ಅದರ ಒಟ್ಟಾರೆ ರಾಚನಿಕ ಸ್ವರೂಪ ಅನಾವರಣಗೊಂಡಿತು. ಜೈವಿಕ ಅಣುಗಳು ನ್ಯೂಕ್ಲಿಯಿಕ್ ಆಮ್ಲ, ಪ್ರೊಟೀನ್‍ಗಳ ರಾಚನಿಕ ಸ್ವರೂಪ ನಿರ್ಧರಿಸಲು ಸ್ಪಟಿಕದರ್ಶಕ(Spectroscopy) ವಿಧಾನಗಳು ಆ್ಯರನ್‍ನಿಂದ ರೂಪಿಸಲ್ಪಟ್ಟವು. ಇದಕ್ಕಾಗಿ 1982ರಲ್ಲಿ ಆ್ಯರನ್ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/20/2019