ಹೆರ್ಜ್‍ಬರ್ಗ್ , ಗೆರ್ಹಾರ್ಡ್ (1904--)
ಜರ್ಮನಿ-ಕೆನಡಾ-ಭೌತರಸಾಯನಶಾಸ್ತ್ರ-ಹೊಸ ಅಣು ಮತ್ತು ಅಣುರಚನೆಗಳು ಅರಿವಿಗೆ ಎಲೆಕ್ಟ್ರಾನಿಕ್ ರೋಹಿತವನ್ನು ವಿಶ್ಲೇಷಿಸುವ ವಿಧಾನ ಬಳಕೆಗೆ ತಂದವನು.
ಜರ್ಮನಿಯಲ್ಲಿ ಜನಿಸಿದ ಹೆರ್ಜ್‍ಬರ್ಗ್ ಪದವಿಯನ್ನು ಗಳಿಸಿ ಡಾರ್ಮ್‍ಸ್ಟ್ಯಾಡ್‍ನಲ್ಲಿ 1930ರಲ್ಲಿ ಉಪನ್ಯಾಸಕನಾಗಿ, ಕೆಲಸಕ್ಕೆ ಸೇರಿದನು. 1935ರಲ್ಲಿ ಕೆನಡಾಗೆ ಹೋಗಿ ನೆಲೆಸಿದ ಹೆರ್ಜ್‍ಬರ್ಗ್ 1969ರವರೆಗೆ ಒಟ್ಟಾವದಲ್ಲಿರುವ ನ್ಯಾಷನಲ್ ರಿಸರ್ಚ್ ಕೌನ್ಸಿಲ್‍ನಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥನಾಗಿದ್ದನು. ಈ ಕೇಂದ್ರವನ್ನು ರೋಹಿತಶಾಸ್ತ್ರದಲ್ಲಿನ (Spectroscopy) ಜಾಗತಿಕ ಮುಂಚೂಣಿ ಸಂಸ್ಥೆಯನ್ನಾಗಿ ಬೆಳೆಸಿದನು. ರೋಹಿತವನ್ನು ನಾನಾ ಬಗೆಯ ಉದ್ದೇಶಗಳಿಗೆ ಬಳಸಲು ಪ್ರಾರಂಭಿಸಿದ ಮೊದಲಿಗ ಹೆರ್ಜ್‍ಬರ್ಗ್. ಸೈದ್ದಾಂತಿಕ ನಿಲುವಿನ ಪರಿಶೀಲನೆಗೆ, ಅಣುಗಳ ರಚನೆಯ ಸ್ವರೂಪ ನಿರ್ಧಾರಕ್ಕೆ, ಅಪರೂಪದ ಅಣುಗಳ ತನಿಖೆಗೆ ಹೆರ್ಜ್‍ಬರ್ಗ್ ರೋಹಿತಶಾಸ್ತ್ರಕ್ಕೆ ಮೊರೆ ಹೋದನು. ಅಂತರಿಕ್ಷದ ಅಂತರ್ ತಾರಾ, ದ್ರವ್ಯರಾಶಿ, ಧೂಮಕೇತುಗಳಲ್ಲಿ ಧಾತುಗಳ ವಿಶ್ಲೇಷಣೆಗೆ ಹೆರ್ಜ್‍ಬರ್ಗ್ ರೋಹಿತ ಶಾಸ್ತ್ರದ ನೆರವಿತ್ತನು. 1971ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯಿಂದ ಹೆರ್ಜಾಬರ್ಗ್ ಗೌರವಿತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/13/2019