অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸ್ಯಾಂಜೆರ್,ಫ್ರೆಡರಿಕ್

ಸ್ಯಾಂಜೆರ್,ಫ್ರೆಡರಿಕ್

ಸ್ಯಾಂಜೆರ್ 1939ರಲ್ಲಿ ಕೇಂಬ್ರಿಜ್‍ನಿಂದ ಪದವಿ ಪಡೆದು, ಅಲ್ಲಿಯೇ ವೃತ್ತಿ ಜೀವನ ಆರಂಭಿಸಿದನು. 1951ರಿಂದ ಮೆಡಿಕಲ್ ರಿಸರ್ಚ್ ಕೌನ್ಸಿಲ್  ಲ್ಯಾಬೋರೇಟರಿಸ್‍ನ ಸಿಬ್ಬಂದಿಯಾದನು. 1940ರಲ್ಲಿ ಸ್ಯಾಂಜೆರ್ 2,4 ಡೈ ನೈಟ್ರೋಫ್ಲೋರೋ ಬೆಂಜಿನ್‍ನಿಂದ ಪ್ರೋಟಿನ್ ಸರಣಿ ತುದಿಯಲ್ಲಿರುವ ಮುಕ್ತ ಅಮೈನೋ ಆಮ್ಲವನ್ನು ಗುರುತಿಸಿರುವ ವಿಧಾನ ಜಾರಿಗೆ ತಂದನು.  ಇದನ್ನು ಆಮ್ಲ ಅಥವಾ ಕಿಣ್ವಗಳಿಂದ (Enzymes) ಪ್ರೋಟಿನ್’ಗಳನ್ನು ಒಡೆಯುವ ತಂತ್ರದೊಂದಿಗೆ ಸಮನ್ವಯಗೊಳಿಸಿದಾಗ ಬಹು ಉದ್ದದ ಪ್ರೊಟೀನ್ ಸರಣಿಗಳು ಗುರುತು ಹಿಡಿಯಲು ಅನುಕೂಲವಾಗುವಂತಹ ಸಣ್ಣ ಸರಣಿಗಳಾಗುತ್ತವೆ.  ಸ್ಯಾಂಜೆರ್ ಈ ರೀತಿಯಲ್ಲಿ ಇನ್ಸುಲಿನ್ ಚೋದನಿಕೆಯ (Hormone) ಪ್ರೊಟೀನ್ ರಾಚನಿಕ ಸ್ವರೂಪವನ್ನು ನಿರ್ಧರಿಸಿದನು. 1950Œವೇಳೆಗೆ ಐವತ್ತಕ್ಕೂ ಅಧಿಕ ಸಂಖ್ಯೆಯ ಅಮೈನೋ ಆಮ್ಲಗಳು ಸ್ಯಾಂಜೆರ್‍ಗೆ ವಶವಾದವು.  ಹಂದಿ, ಕುರಿ, ಕುದುರೆ ಹಾಗೂ ತಿಮಿಂಗಲಗಳ ಇನ್ಸುಲಿನ್‍ನ ರಾಚನಿಕ ವ್ಯತ್ಯಾಸ ಸಹ ಸ್ಯಾಂಜೆರ್’ಗೆ ಸ್ಪಷ್ಟವಾಯಿತು.  ಇದಕ್ಕಾಗಿ 1958ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು. ಸ್ಯಾಂಜೆರ್ ಇನ್ನು ಮುಂದೆ ನ್ಯೂಕ್ಲಿಯರ್ ಆಮ್ಲಗಳ ಬೆನ್ನು ಹತ್ತಿದನು.  ಇವು ಸ್ಥೂಲ ರೂಪದ ಅಣುಗಳಾಗಿದ್ದು, ಎರಡು ಸರ್ಪಿಲ ಸುರುಳಿಗಳ ಜೋಡಣೆಯಲ್ಲಿ ನ್ಯೂಕ್ಲಿಯೋಟೈಡ್ಸ್‍ಗಳನ್ನು ಹೊಂದಿರುತ್ತವೆ.  ಇವುಗಳ ಜೋಡಣೆ ವಂಶವಾಹಕಗಳು ಹೊತ್ತೊಯ್ಯುವ ಮಾಹಿತಿಯನ್ನೊಳಗೊಂಡಿರುತ್ತದೆ.  ಸ್ಯಾಂಜೆರ್ ಆರಂಭದಲ್ಲಿ ಕಡಿಮೆ ಜಟಿಲವಾದ ಆರ್‍ಎನ್‍ಎ  ಸರಣಿಗಳ ಬಗೆಗೆ ಅಧ್ಯಯನ ನಡೆಸಿ, ನಂತರ ಒಂದು ಕೋಟಿಗೂ ಅಧಿಕ ಘಟಕಗಳ ಸರಣಿ ಹೊಂದಿರುವ ಡಿಎನ್‍ಎ ಯನ್ನು ಕೈಗೊತ್ತಿಕೊಂಡನು.  ಬೇಕಾದಲ್ಲಿ ಡಿಎನ್‍ಎ ಗಳನ್ನು ಒಡೆಯಲು ಸ್ಯಾಂಜೆರ್ ವೈವಿಧ್ಯಮಯ ತಂತ್ರಗಳನ್ನು ಅನುಸರಿಸಿದನು. 1977ರಲ್ಲಿ ಸ್ಯಾಂಜೆರ್ ನೇತೃತ್ವದ ತಂಡ 5400 ತಳ ಹದಿಗಳ, ಫೈ ಎಕ್ಸ್ 174 ವೈರಸ್‍ನ ತಳಹದಿ ಪಡೆದರೆ 1984ರಲ್ಲಿ ಎಪ್‍ಸ್ಟೀನ್ ಬಾರ್ ವೈರಸ್‍ನ ತಳಹದಿ ದಕ್ಕಿತು,. ಇದಕ್ಕಾಗಿ ಸ್ಯಾಂಜೆರ್1980ರಲ್ಲಿ ಎರಡನೇ ಬಾರಿಗೆ ನೊಬೆಲ್ ಪ್ರಶಸ್ತಿ ಪಡೆದನು.  ಸ್ಯಾಂಜೆರ್‍ನಿಂದ ಪ್ರೊಟೀನ್ ಹಾಗೂ ವಂಶವಾಹಕಗಳ ಬಗೆಗೆ ಹೊಸ ಅರಿವು ಮೂಡಿ ಇತರರಿಗೆ ದಾರಿ ದೀಪವಾದವು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 7/24/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate