ಲಿಪ್ಸ್ಕಾಂಬ್, ವಿಲಿಯಂ ನನ್ (1919--) ೧೯೭೬
ಅಸಂಸಂ-ರಸಾಯನಶಾಸ್ತ್ರ-ಕಿಣ್ವಗಳ ರಚನೆ ಮತ್ತು ನಿಯಂತ್ರಣ ಕುರಿತಾಗಿ ಸಂಶೋಧಿಸಿದಾತ.
ಲಿಪ್ಸ್ಕಾಂಬ್ 9 ಡಿಸೆಂಬರ್ 1919ರಂದು ಓಹಿಯೋ ರಾಜ್ಯದ ಕ್ಲೀವ್ಲ್ಯಾಂಡ್ನಲ್ಲಿ ಜನಿ¸ದನು. ಈತ ಒಂದು ವರ್ಷದವನಿರುವಾಗ, ಈತನ ಕುಟುಂಬ ಕೆಂಟುಕಿಗೆ ಹೋಗಿ ನೆಲೆಸಿತು.1941ರಲ್ಲಿಕ್ಯಾಲಿಫೋರ್ನಿಯಾಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿಗೆ ಭೌತಶಾಸ್ತ್ರದ ಶಿಕ್ಷಣಕ್ಕೆ ಸೇರಿದನು. ಲಿನಸ್ ಪೌಲಿಂಗ್ನ ಪ್ರಭಾವಕ್ಕೊಳಗಾಗಿ ಒಂದು ವರ್ಷದ ನಂತರ ರಸಾಯನಶಾಸ್ತ್ರಕ್ಕೆಬದಲಾಯಿಸಿಕೊಂಡನು. 1946ರಲ್ಲಿ ಡಾಕ್ಟರೇಟ್ ಗಳಿಸಿ ಮಿನ್ನೆಸೊಟಾ ವಿಶ್ವವಿದ್ಯಾಲಯದಲ್ಲಿ ಬೋಧಕ ಸಿಬ್ಬಂದಿಯಾದನು. 1959ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಹೋದನು.1960ರಿಂದ ಲಿಪ್ಸ್ಕಾಂಬ್ ಕಿಣ್ವಗಳ ತ್ರಿದಶಾ ರಚನೆ, ರಾಸಾಯನಿಕ ಕ್ರಿಯೆಗಳಲ್ಲಿ ಅವುಗಳ ಪಾತ್ರ, ಅವುಗಳ ನಿಯಂತ್ರಣ ಕುರಿತಾಗಿ ಸಂಶೋಧನೆ ನಡೆಸಿದ್ದಾನೆ. ಈ ಕ್ಷೇತ್ರದಲ್ಲಿನ ಗಮನಾರ್ಹಸಾಧನೆಗಾಗಿ ಲಿಪ್ಸ್ಕಾಂಬ್ 1976ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾಗಿದ್ದಾನೆ. ಉತ್ತಮ ಟೆನಿಸ್ ಕ್ರೀಡಾಪಟುವಾಗಿರುವ ಲಿಪ್ಸ್ಕಾಂಬ್ ಸಂಗೀತ ವಾದ್ಯ ಗೋಷ್ಟಿಯಲ್ಲಿ ಕ್ಲಾರಿನೆಟ್ವಾದಕನಾಗಿಯೂ ಸಹ ಖ್ಯಾತಿ ಗಳಿಸಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019