ಮೂರ್, ಸ್ಟ್ಯಾನ್’ಫೋರ್ಡ್ (1913-1982) ೧೯೭೨
ಅಸಂಸಂ-ಜೀವ ರಸಾಯನಶಾಸ್ತ್ರ-–ಅಮೈನೋ ಆಮ್ಲಗಳ ವಿಶ್ಲೇಷಣಾ ವಿಧಾನ ರೂಪಿಸಿದಾತ.
ಮೂರ್, 1935ರಲ್ಲಿ ವ್ಯಾಂಡರ್‍ಬಿಲ್ಟ್ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿ, ನಂತರ ವಿಸ್ಕಾನ್ಸಿನ್‍ನಿಂದ ಡಾಕ್ಟರೇಟ್ ಗಳಿಸಿದನು. ರಾಕ್;ಫೆಲರ್ ಸಂಸ್ಥೆಯಲ್ಲಿ ಪೆÇ್ರೀಟೀನ್ ರಸಾಯನಶಾಸ್ತ್ರದಲ್ಲಿ ಸಂಶೋಧನೆಯ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದನು. ಪ್ರೋಟೀನ್ ಸರಣಿಯಲ್ಲಿ ಯಾವ ಅಮೈನೋ ಆಮ್ಲಗಳು, ಯಾವ ಪ್ರಮಾಣದಲ್ಲಿವೆಯೆಂದು ಅರಿಯುವುದು ಬಹು ಪ್ರಮುಖವಾದ ಸಮಸ್ಯೆ. ಇದು ಪರಿಹಾರವಾಯಿತೆಂದರೆ, ಈ ಸರಣಿಯಲ್ಲಿನ ಅಮೈನೋ ಆಮ್ಲಗಳ ಜೋಡಣೆಯನ್ನು ನಿರ್ಧರಿಸಬಹುದು. ಮೂರ್, ಡಬ್ಲ್ಯು.ಸ್ಟೀನ್ ಸಂಗಡ1950ರ ಅವಧಿಯಲ್ಲಿ ಇದಕ್ಕಾಗಿ ಒಂದು ಸಾಮಾನ್ಯ ವಿಧಾನವನ್ನು ಬಳಕೆಗೆ ತಂದನು. ಈ ವಿಧಾನದಲ್ಲಿ ಪೆÇ್ರೀಟೀನ್‍ಗಳನ್ನು ಸಂಪೂರ್ಣವಾಗಿ, ಜಲಸಂಶ್ಲೇಷಿಸಿ (Hydrolysis)ಅಮೈನೋ ಆಮ್ಲಗಳ ಮಿಶ್ರಣ ಪಡೆಯಲಾಗುತ್ತದೆ. ನಂತರ ಇವುಗಳನ್ನು ಬೇರ್ಪಡಿಸಿ ಪ್ರತಿಯೊಂದರ ಪ್ರಮಾಣ ನಿರ್ಧರಿಸಲಾಗುತ್ತದೆ. ಈ ಹಂತ ತಲುಪಿದ ನಂತರ 1905ರಲ್ಲಿ ಸ್ಯಾಂಜೆರ್ ,ಇನ್ಸುಲಿನ್ ಬೇರ್ಪಡಿಸಿದ ವಿಧಾನ ಅನುಸರಿಸಲಾಗುತ್ತದೆ. ಇದಕ್ಕಾಗಿ ಮೂರ್ ಹಾಗೂ ಸ್ಟೀನ್ ಈ ಮೊದಲು ಬಳಕೆಯಲ್ಲಿದ್ದ ಸ್ಟಾರ್ಚ್‍ಗೆ ಬದಲಾಗಿ ಸಲ್ಫೋನೇಟೆಡ್ ಪಾಲಿಸ್ಟೈಟಿನ್ ರಾಳ ಬಳಸಿದರು. ಈ ರಾಳಗಳು ಅಯಾನ್‍ಗಳ ಸ್ಥಳಾಂತರ ತತ್ತ್ವದ ಮೇಲೆ ಕೆಲಸ ಮಾಡುತ್ತವೆ. ಅಮೈನೋ ಆಮ್ಲ ,ಪೆಪ್ಟೈಡ್ ಹಾಗೂ ಪೆÇ್ರೀಟೀನ್‍ಗಳು ಸಹ ಅಯಾನ್‍ನಂತೆ ವರ್ತಿಸುತ್ತವೆ. ಈ ಹಂತ ತಲುಪಿದ ನಂತರ 1905ರಲ್ಲಿ ಸ್ಯಾಂಜೆರ್, ಇನ್ಸುಲಿನ್ ಬೇರ್ಪಡಿಸಲು ರೂಪಿಸಿದ ಭಾಗೀಕರಣ ವರ್ಣಾಲೇಖ (Partition Chromatography)ವಿಧಾನವನ್ನು ಅನುಸರಿಸಲಾಗುತ್ತದೆ. 1958ರಲ್ಲಿ ಇದಕ್ಕಾಗಿ ಮೂರ್ ಹಾಗೂ ಸ್ಟೀನ್ ವಿಶೇಷ ಸಾಧನವೊಂದನ್ನು ನಿರ್ಮಿಸಿದರು. ಇದು ಸ್ವಚಾಲಿತ ಅಮೈನೋ ಆಮ್ಲ ವಿಭಾಜಕವೆಂದು ಹೆಸರಾಗಿದೆ. ಮೂರ್ ಸ್ಟೀನ್‍ನ ವಿಶ್ಲೇಷಕದಿಂದ (Analyser) ಸಾಕಷ್ಟು ಜಟಿಲವಾದ ಪ್ರೋಟೀನ್‍ಗಳ ರಚನೆಯನ್ನು ಅರಿಯುವುದು ಸುಲಭವಾಯಿತು. ಇದಕ್ಕಾಗಿ ಮೂರ್ ಮತ್ತು ಸ್ಟೀನ್, ಅನ್‍ಫಿûನ್‍ಸೆನ್ ಜೊತೆಗೆ1972ರ ನೊಬೆಲ್ ಪ್ರಶಸ್ತಿ ಪಡೆದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019