ಬ್ರೌನ್, ಹರ್ಬರ್ಟ್ ಚಾಲ್ರ್ಸ್ (1912--) -೧೯೭೯
ಆಸಂಸಂ- ರಸಾಯನಶಾಸ್ತ್ರ -ಸಾವಯವ ಸಂಶ್ಲೇಷಣೆಗೆ ಸಾವಯವ ಬೋರಾನ್‍ಗಳನ್ನು ಬಳಸಿದಾತ.
ಹರ್ಬರ್ಟ್ ಲಂಡನ್‍ನಲ್ಲಿ ಹುಟ್ಟಿದನಾದರೂ, ಅವನ ಕುಟುಂಬ 1914ರಲ್ಲಿ ಅಸಂಸಂಗಳ ಚಿಕಾಗೋ ಪಟ್ಟಣಕ್ಕೆ ಬಂದು ನೆಲೆಸಿತು. ಸಂಕಷ್ಟ ಪರಿಸ್ಥಿತಿಗಳಲ್ಲಿ ವಿದ್ಯಾಭ್ಯಾಸ ಮಾಡಿದ ಹರ್ಬರ್ಟ್ ಸ್ವಯಂ ಪರಿಶ್ರಮದಿಂದ 1947ರಲ್ಲಿ ರಡ್ಯೂ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ 1978ರಲ್ಲಿ ನಿವೃತ್ತನಾಗುವವರಿಗೂ ಅಲ್ಲೇ ಇದ್ದನು. ಹರ್ಬರ್ಟ್, ಬೊರಾನ್ ಸಂಯೋಜಿತಗಳ ಬಗ್ಗೆ ಒಲವುಳ್ಳವನಾಗಿದ್ದನು. ಕೆಲ ಸಂಗಡಿಗರೊಂದಿಗೆ ಸೇರಿ ಸೋಡಿಯಂ ಬೊರೋ ಹೈಡ್ರೋಜನ್‍ನ್ನು ಅನಾವರಣಗೊಳಿಸಿದನು. ಈ ರಾಸಾಯನಿಕವನ್ನು ಸಾವಯವ ಸಂಯುಕ್ತಗಳ ಅಪಕರ್ಷಣಕ್ಕೆ (Reduction) ಬಳಸಿದ ಮೊದಲಿಗ. ಡೈ ಬೊರಾನ್‍ನಿಂದ ಆರ್ಗನೋಬೊರಾಟಿ ತಯಾರಿಸುವ ವಿಧಾನ ರೂಪಿಸಿದನು. ಈ ವಿಧಾನವನ್ನು ಹೈಡ್ರೋಬೊರೇಷನ್ ಎಂದು ಗುರುತಿಸಲಾಗಿದೆ. ಹರ್ಬರ್ಟ್ 1979ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019