ಬರ್ಗ್, ಪೌಲ್ (1926 - ) -೧೯೮೦
ಅಸಂಸಂ-ಅಣ್ವಯಿಕ ಜೀವಶಾಸ್ತ್ರ- ಮೊದಲ ವರ್ಗಾಂತರಿ ಆರ್‍ಎನ್‍ಎ ಅನಾವರಣಗೊಳಿಸಿದಾತ, ಮರು ಸಂಯೋಜಕ ಡಿಎನ್‍ಎ ತಂತ್ರ ಅಭಿವೃದ್ದಿಪಡಿಸಲು ಮುಂದಾದವರಲ್ಲಿ ಮೊದಲಿಗ.
ಅಸಂಸಂಗಳಲ್ಲಿ ವಿದ್ಯಾಭ್ಯಾಸ ಮಾಡಿದ ಬರ್ಗ್ 1970ರವೇಳೆಗೆ ವಾಷಿಂಗ್ಟನ್ ಹಾಗೂ ಸ್ಟ್ಯಾನ್;ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿದ್ದನು. 1955ರಲ್ಲಿ ಕ್ರಿಕ್ ಅರ್‍ಎನ್‍ಎ ಟೆಮಪ್ಲೇಟ್‍ನ ಹತೋಟಿಯಲ್ಲಿ ಆಮೈನೋ ಆಮ್ಲಗಳ, ಪ್ರೋಟಿನ್‍ಗಳನ್ನು ಜೈವಿಕ ಸಂಶ್ಲೇಷಣೆಗೆ ಒಳಪಡಿಸಬಹುದೆಂದೂ, ಅಂತಹ ಕಾರ್ಯಕ್ಕೆ ಮಧ್ಯವರ್ತಿಯಾದ ದತ್ತಕ ಅಣು ಅಗತ್ಯವಿರುವುದೆಂದೂ ಸೂಚಿಸಿದ್ದನು. ಅದಲ್ಲದೆ ಅಸ್ತಿತ್ವದಲ್ಲಿರುವ 20 ಬಗೆಯ ಅಮೈನೋ ಆಮ್ಲಗಳಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ನಿರ್ದಿಷ್ಟ ದತ್ತಕ ಇರುವುದೆಂದೂ ಭಾವಿಸಿದ್ದನು. ಇದರ ಮುಂದಿನ ವರ್ಷವೇ ಬರ್ಗ್ ಮೊದಲ ದತ್ತಕವನ್ನು ಗುರುತಿಸಿದನು. ಇದನ್ನು ಈಗ ವರ್ಗಾಂತರಿ ಅರ್‍ಎನ್‍ಎ ಎಂದು ಹೆಸರಿಸಲಾಗಿದೆ. ಇದು ಸಣ್ಣ ಅರ್‍ಎನ್‍ಎ ಅಣುವಾಗಿದ್ದು ಮೆಥಿಯೋನೈನ್ ಅಮೈನೋ ಆಮ್ಲವನ್ನು ವರ್ಗಾಂತರಿಸುತ್ತದೆ.
ಮುಂದಿನ ಹಂತದಲಿ ಬರ್ಗ್ ಆಯ್ದ ವಂಶವಾಹಕಗಳನ್ನು ಪರಕೀಯ ಬ್ಯಾಕ್ಟೀರಿಯಾಗಳಿಗೆ ಸೇರಿಸುವ ವಿಧಾನವನ್ನು ರೂಪಿಸಿದನು. ಇದರ ಪರಿಣಾಮವಾಗಿ ಬ್ಯಾಕ್ಟಿರೀಯಾಗಳು ಮೂಲ ಜೀವಿಯಲ್ಲಿ ಉತ್ಪನ್ನವಾಗುವಂತಹ ಪ್ರೋಟಿನ್‍ಗಳನ್ನು ಉತ್ಪಾದಿಸತೊಡಗಿದವು. ಇದು ತಳಿತಂತ್ರಜ್ಞಾನದ ಮೊದಲ ಹೆಜ್ಜೆಯಾಯಿತಲ್ಲದೆ ಕ್ರಾಂತಿಕಾರಕವಾದ ಸಾಧ್ಯತೆಗಳನ್ನು ತೆರೆದು ತೋರಿಸಿತು. ಇನ್ಸುಲಿನ್ ಅಥವಾ ಇಂಟರ್ಫೆರಾನ್ ನಂತಹ ಪ್ರೋಟಿನ್‍ಗಳನ್ನು ಬ್ಯಾಕ್ಟೀರಿಯಾಗಳಿಂದ ಸಂಶ್ಲೇಷಿಸಿ ಪಡೆಯುವುದು ವಾಸ್ತವವಾಯಿತು. ಇದರೊಂದಿಗೆ ಮಾರಕವಾದ ವಿಲಕ್ಷಣ ಸಾಮರ್ಥ್ಯದ ಜೀವಿಗಳನ್ನು ಸೃಜಿಸುವ ಕಾಲ್ಪನಿಕ ರಮ್ಯತೆಯೂ ನಿಜವಾಗುವ ಕಾಲ ಬಂದೊದಗಿತು. ಈ ಅಪಾಯದ ಬಗ್ಗೆ ಬರ್ಗ್ ಮೇಲಿಂದ ಮೇಲೆ ಎಚ್ಚರಿಸುತ್ತಿದ್ದನು. 1980ರಲ್ಲಿ ಬರ್ಗ್ ,ವಾಲ್ಟರ್ ಗಿಲ್ಬರ್ಟ, ಫ್ರೆಡರಿಕ್ ಸ್ಯಾಂಜೆರ್ ಜೊತೆ ನೊಬೆಲ್ ಪ್ರಶಸ್ತಿ ಹಂಚಿಕೊಂದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/4/2019