ಪ್ರಿಗೊಜೀನೆ, ಇಲ್ಯಾ (1917--) ೧೯೭೭
ರಷ್ಯಾ-ಬೆಲ್ಜಿಯಂ-ಸೈದ್ಧಾಂತಿಕ ರಸಾಯನಶಾಸ್ತ್ರ-ಅವಿಪರ್ಯಯ ಔಷ್ಣೀಯಗತಿಶಾಸ್ತ್ರವನ್ನು ( Non Reversible Thermodyanamics) ಅಭಿವೃದ್ದಿಗೊಳಿಸಿದಾತ.
ರಷ್ಯಾದಲ್ಲಿ ಜನಿಸಿದ ಪ್ರಿಗೊಜೀನೆ, ಹನ್ನೆರಡನೇ ವಯಸ್ಸಿನಿಂದ ಬೆಲ್ಜಿಯಂನಲ್ಲಿ ಬೆಳೆದನು. ಬ್ರುಸೆಲ್ಸ್ಸ್‍ನಿಂದ ಪದವಿ ಗಳಿಸಿ 1951ರಲ್ಲಿಅಲ್ಲಿಯೇ ಪ್ರಾಧ್ಯಾಪಕನಾದನು. ಅಸಂಸಂಗಳಲ್ಲಿ ಕೆಲವು ಹುದ್ದೆಗಳನ್ನು ಅಲಂಕರಿಸಿದ್ದನು. ಅಭಿಜಾತ ರಸಾಯನಶಾಸ್ತ್ರದಲ್ಲಿ ವಿಪರ್ಯಯ (Reversible) ಪ್ರತಿಕ್ರಿಯೆಗಳಿಗೆ ಸ್ಥಾನವಿದ್ದರೆ, ಸೈದ್ಧಾಂತಿಕವಾಗಿ ರಸಾಯನಶಾಸ್ತ್ರ ಸಂತುಲಿತ ಸ್ಥಿತಿಗಳನ್ನು ಪರಿಗಣಿಸುತ್ತದೆ. ಇಂತಹ ಸಾಧ್ಯತೆಗಳು ವ್ಯಾವಹಾರಿಕ ಜಗತ್ತಿನಲ್ಲಿ ವಿರಳಾತಿವಿರಳ. ನಿರ್ಜೀವ ವಸ್ತುಗಳಲ್ಲಿ ಕ್ರಮಭಂಗವೇ ಪ್ರಧಾನವಾದರೆ, ಜೀವಂತ ಪ್ರಾಣಿಗಳಲ್ಲಿ ಕ್ರಮಬದ್ದ ಸ್ಥಿತಿ ಸಹಜವೆಂಬಂತಿದೆ. ಕ್ರಮಹೀನ ಸರಕಿನಿಂದಲೇ ಕ್ರಮಬದ್ದ ಜೀವ ಉಗಮ ಆಗಿದೆಯೆನ್ನಬಹುದು. ಪ್ರಿಗೊಜೀನೆ ಈ ಎರಡು ವ್ಯವಸ್ಥೆಗಳಿಗೆ ಗಣಿತೀಯ ಮಾದರಿಗಳನ್ನು ಒದಗಿಸಿ, ಇವು ಹೇಗೆ ಚೈತನ್ಯಹ್ರಾಸಕ ಹಾಗೂ ಕ್ರಮಭಂಗ ರೂಪಿಗಳಾಗಿರುವುವೆಂದು ತೋರಿಸಿದನು. ಪ್ರಿಗೊಜೀನೆಯ ಈ ಸಾಧನೆ, ಜೀವ ವಿಕಾಸ, ಪರಿಸರ ವಿಜ್ಞಾನ ಜೀವ ಪರಿಸರಗಳಲ್ಲಿ ಬಹು ಉಪಯುಕ್ತವಾಗಿದೆ. ಪ್ರಿಗೊಜೀನೆ 1977ರ ನೊಬೆಲ್ ಪ್ರಶಸ್ತಿಯಿಂದ ಗೌರವಿತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019