ಜೆಫ್ರಿ ,ವಿಲ್ಕಿನ್‍ಸನ್ –(1921--)
ಬ್ರಿಟನ್-ನಿರಯವ ರಸಾಯನಶಾಸ್ತ್ರ- ಲೋಹಬಂಧಿ (Metallocene) ಸಂಯುಕ್ತ ಹಾಗೂ ಸ್ಥಿತ್ಯಂತರ ಸಂಕೀರ್ಣಗಳಲ್ಲಿ ಪ್ರಮುಖ ಅಧ್ಯಯನ ಕೈಗೊಂಡಾತ.
ಜೆಫ್ರಿ ,ವೆಸ್ಟ್‍ಯಾರ್ಕ್‍ಷೈರ್ ಪ್ರಾಂತದ ಹಳ್ಳಿಯೊಂದರಲ್ಲಿ, 14 ಜುಲೈ 1921 ರಂದು ಜನಿಸಿದನು. ಆ ಸಮಯದಲ್ಲಿ ಈ ಹಳ್ಳಿಯಲ್ಲಿನ ಮನೆಗಳು ವಾಸಕ್ಕೆ ಯೋಗ್ಯವಲ್ಲವೆಂದು ಅಧಿಕಾರಿಗಳು ನೆಲಸಮ ಮಾಡುವ ಕಾರ್ಯದಲ್ಲಿದ್ದರು. ಜೆಫ್ರಿಯ ತಂದೆ ಹಾಗೂ ತಾತ ಉತ್ತಮ ಬಣ್ಣಗಾರರಾಗಿದ್ದರು. ಈತನ ತಾಯಿಯ ಕಡೆಯವರು ನೇಕಾರರಾಗಿದ್ದು, ಜೆಫ್ರಿಯ ತಾಯಿ ಬಾಲ್ಯದಿಂದಲೇ ಮಗ್ಗಗಳಲ್ಲಿ ದುಡಿದಿದ್ದಳು. ಪ್ರಾಥಮಿಕ ಶಾಲೆಯಲ್ಲಿರುವಾಗ ಸೋದರ ಮಾವನಿಂದ ಜೆಫಿû್ರಗೆ ಮೊದಲ ಬಾರಿಗೆ ರಸಾಯನಶಾಸ್ತ್ರದ ಬಗೆಗೆ ತಿಳಿಯಿತು. ಜೆಫ್ರಿ ಟೊಮೊರ್‍ಡನ್‍ನಲ್ಲಿನ ಬಹು ಸಣ್ಣದಾಗಿದ್ದ ಪ್ರೌಢಶಾಲೆಗೆ ಸೇರಿದರು. ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ, ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ಇಬ್ಬರು ನೊಬೆಲ್ ಪ್ರಶಸ್ತಿ ವಿಜೇತರಾಗಿದ್ದರು. ಜೆಫ್ರಿ ಶಾಲೆಗೆ ಸೇರಿದಾಗ, ನೊಬೆಲ್ ಪ್ರಶಸ್ತಿ ವಿಜೇತ ಸರ್ ಜಾನ್ ಕಾಕ್‍ರಾಪ್ಟ್;ಗೆ ಭೌತಶಾಸ್ತ್ರದ ಪಾಠ ಮಾಡಿದ ಉಪಾಧ್ಯಾಯನೇ ಇದ್ದನು. 1941ರಲ್ಲಿ ಇಂಪೀರಿಯಲ್ ಕಾಲೇಜ್ ಆಫ್ ಟೆಕ್ನಾಲಜಿಯಿಂದ ರಸಾಯನಶಾಸ್ತ್ರದ ಪದವಿ ಗಳಿಸಿದನು. 1943ರಲ್ಲಿ ಕೆನಡಾದ ಮಾಂಟ್ರಿಯಲ್‍ನಲ್ಲಿ ಬೈಜಿಕ ಯೋಜನೆಯೊಂದರಲ್ಲಿ ನಿರತನಾದನು. 1946ರಲ್ಲಿ ಕ್ಯಾಲಿಫೋರ್ನಿಯಾಕ್ಕೆ ಹೋಗಿ ಗ್ಲೆನ್.ಟಿ.ಸೀ ಬೋರ್ಗ್ ಮಾರ್ಗದರ್ಶನದಲ್ಲಿ ಸೈಕ್ಲೋಟ್ರಾನ್ ಹಾಗೂ ವಿಕಿರಣ ಪ್ರಯೋಗಾಲಯದ ಉಪಕರಣಗಳನ್ನು ಬಳಸಿ ನ್ಯೂಟ್ರಾನ್ ಕೊರತೆಯ ಹಲವಾರು ಸಮಸ್ಥಾನಿಗಳನ್ನು(Isotopes) ಪಡೆದನು. 1952ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿರುವಾಗ, ವುಡ್‍ವರ್ಡ್ ಹಾಗೂ ಇತರರ ಜೊತೆಗೆ ಪೆರೋಸೀನ್ ಎನ್ನುವ ವಿಶಿಷ್ಟ ರಾಸಾಯನಿಕದ ಮೇಲೆ ಲೇಖನ ಪ್ರಕಟಿಸಿದನು. ಈ ರಾಸಾಯನಿಕದಲ್ಲಿ ಐದು ಇಂಗಾಲದ ಉಂಗುರಗಳ ಮಧ್ಯೆ ಕಬ್ಬಿಣದ ಅಣು ಆಚ್ಛಾದಿತಗೊಂಡಿರುತ್ತದೆ. ಹೀಗೆ ಆಚ್ಛಾದಿತಗೊಂಡಿರುವ ವಿವಿಧ ಲೋಹದ ನೂರಾರು ಅಣುಗಳು ಪತ್ತೆಯಾಗಿವೆ. ಇವನ್ನು ಲೋಹಬಂಧಿಗಳೆಂದು ಕರೆಯುತ್ತಾರೆ. ಲೋಹಬಂಧಿಗಳನ್ನು ಕುರಿತಾದ ಕಾರ್ಯದಲ್ಲಿ ವಿಲ್ಕಿನ್‍ಸನ್ ಇ.ಜಿ. ಫಿûಷ್ಕರ್ ಜೊತೆ 1973ರ ನೊಬೆಲ್ ಪ್ರಶಸ್ತಿ ಗಳಿಸಿದನು. ಮ್ಯೂನಿಕ್‍ನಲ್ಲಿದ್ದ ಫಿûಷ್ಕರ್ ಸ್ವತಂತ್ರವಾಗಿ ಮೆಟಲೋಸೀನ್‍ಗಳ ಬಗೆಗೆ ವಿಲ್ಕಿನ್‍ಸನ್‍ನಂತಹ ಕೆಲಸಗಳನ್ನು ಮಾಡಿದ್ದನು. ವಿಲ್ಕಿನ್‍ಸನ್ ಸ್ಥಿತ್ಯಂತರದಲ್ಲಿರುವ ಲೋಹ ಸಂಕೀರ್ಣಗಳ ಬಗೆಗೂ ಸಹ ಅಧ್ಯಯನಗಳನ್ನು ನಡೆಸಿದ್ದನು.1955ರಿಂದ ನಿವೃತ್ತನಾಗುವವರೆಗೆ ಲಂಡನ್‍ನ ಇಂಪೀರಿಯಲ್ ಕಾಲೇಜಿನ ನಿರವಯವ ರಸಾಯನಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸಿದನು. ಇಲ್ಲಿರುವಾಗ ಸ್ಥಿತ್ಯಂತರ ಲೋಹ, ರುಥೇನಿಯಂನ ಸಂಕೀರ್ಣ ರಾಸಾಯನಿಕ ಸ್ವರೂಪ, ಅಸಂತೃಪ್ತ ಹೈಡ್ರೋಕಾರ್ಬನ್‍ಗಳ ಬಗೆಗೆ ಅಧ್ಯಯನ ನಡೆಸಿದರು. ಸಾವಯವ ಲೌಹಿಕಗಳ (ಔಡಿgಚಿಟಿiಛಿ ಒeಣಚಿಟs) ಮೇಲೆ ನಡೆಸಿದ ಸಂಶೋಧನೆಗಳಿಗಾಗಿ 1973ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/9/2019