ಜಾರ್ಜ್, ವಿಟ್ಟಿಂಗ್ –(1897-1987) ೧೯೭೯
ಜರ್ಮನಿ-ರಸಾಯನಶಾಸ್ತ್ರ- ಕಾರ್ಬೋನೈಲೋಫಿûನ್‍ಗಳನ್ನು ಅನಾವರಣಗೊಳಿಸಿದಾತ.
ಜಾರ್ಜ್, 1897ರಲ್ಲಿ ಬರ್ಲಿನ್‍ನಲ್ಲಿ ಜನಿಸಿದನು. ಮಾರ್ಬರ್ಗ್, ಲಾಹ್ನ್‍ಗಳಲ್ಲಿ ಶಿಕ್ಷಣ ಪಡೆದು, ಡಾಕ್ಟರೇಟ್ ಗಳಿಸಿ, ರಸಾಯನಶಾಸ್ತ್ರ ವಿಭಾಗದಲ್ಲಿ ಬೋಧಕ ಸಿಬ್ಬಂದಿಯಾದನು. 1932ರಲ್ಲಿ ಬ್ರಾವುನ್‍ಷೆವಿಗ್ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. 1937ರಲ್ಲಿ ಫಿû್ರೀಬರ್ಗ್‍ನಲ್ಲಿ ಸಹಾಯಕ ಪ್ರಾಧ್ಯಾಪಕನಾದನು. 1944ರಿಂದ ಟುಟಿನ್‍ಜೆನ್‍ನಲ್ಲಿನ ರಸಾಯನ ಶಾಸ್ತ್ರ ಸಂಸ್ಥೆಯ ನಿರ್ದೇಶಕನಾಗಿ ಸೇವೆ ಸಲ್ಲಿಸಿದನು. 1967ರಲ್ಲಿ ಹೈಡೆಲ್‍ಬರ್ಗ್‍ನಲ್ಲಿ ¥sóÉ್ರಡೆನ್‍ಬರ್ಗ್‍ನಿಂದ ತೆರವಾಗಿದ್ದ ಪ್ರಾಧ್ಯಾಪಕ ಹುದ್ದೆ ಅಲಂಕರಿಸಿದನು. 1930ರಲ್ಲಿ ಜಾರ್ಜ್ ತ್ರಿದಿಶಾ ರಸಾಯನಶಾಸ್ತ್ರವನ್ನು (StereoChemistry)ಕುರಿತಾದಂತೆ ಪುಸ್ತಕ ಪ್ರಕಟಿಸಿದನು. ಆಲ್ಕಲಿ ಲೋಹಗಳು , ಇಂಗಾಲ ಆಧಾರಿತ ಸಂಯುಕ್ತಗಳನ್ನು ಕುರಿತಾಗಿ ಜಾರ್ಜ್ ನಡೆಸಿದ ಅಧ್ಯಯನಗಳು ಗಮನಾರ್ಹವೆನಿಸಿದವು. ಜಾರ್ಜ್ ಹ್ಯಾಲೋಜೆನ್ ಲೋಹ ವಿನಿಮಯ ರಾಸಾಯನಿಕ ಕ್ರಿಯೆಯನ್ನು ಅನಾವರಣಗೊಳಿಸಿದನು. ಐದನೇ ಗುಂಪಿನ ಧಾತುಗಳ ಪೆಂಟಾರಿಲ್ ವ್ಯುತ್ಪನ್ನಗಳ (Derivatives) ಸಂಶ್ಲೇಷಣೆ ಮಾಡಿದ ಜಾರ್ಜ್ 1953ರಲ್ಲಿ ಕಾರ್ಬೋನೈಲೋಫಿûನ್‍ಗಳನ್ನು ಅನಾವರಣಗೊಳಿಸಿದನು. ಕಾರ್ಬೋನೈಲೋಫಿûನ್‍ಗಳು ಸಂಶ್ಲೇಷಿತ ಎಳೆಗಳ ತಯಾರಿಕೆಯಲ್ಲಿ ಹಾಗೂ ಹಲವಾರು ಕೈಗಾರಿಕಾ ಕ್ರಿಯೆಗಳಲ್ಲಿ ಅತಿ ಪ್ರಮುಖ ಸ್ಥಾನ ಪಡೆದಿವೆ. 1942ರಲ್ಲಿ ಜಾರ್ಜ್ ಹಾಗೂ ಡಿ.ರಾಬಟ್ರ್ಸ್ ಡಿ ಹೈಡ್ರೋಬೆಂಜಾಲ್ ಅಲ್ಪಾಯುಷಿಯಾದ ಉಪಉತ್ಪನ್ನವೆಂದು ತೋರಿಸಿದರು. ಇವೆಲ್ಲಾ ಸಾಧನೆಗಳಿಗಾಗಿ ಜಾರ್ಜ್ 1979ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಜಾರ್ಜ್ ವಿಟ್ಟಿಂಗ್ 26 ಆಗಸ್ಟ್1987ರಂದು ಮೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/24/2019