ಗಿಲ್ಬರ್ಟ್ ವಾಲ್ಟರ್ (1932--)
ಸಂಸಂ-ಅಣ್ವಕ ಜೀವಶಾಸ್ತ್ರ -ವಂಶವಾಹಕದ ಮೊದಲ ನಿಗ್ರಹಕಾರಿ (Repressor) ಪ್ರತ್ಯೇಕಿಸಿದಾತ.
ಗಿಲ್ಬರ್ಟ್ ಹಾರ್ವರ್ಡ್‍ನಲ್ಲಿ ಭೌತಶಾಸ್ತ್ರ ,ಕೇಂಬ್ರಿಜ್‍ನಲ್ಲಿ ಗಣಿತದ ಶಿಕ್ಷಣ ಪಡೆದನು. ಹಾರ್ವರ್ಡ್‍ನಲ್ಲಿ ಸೈದಾಂತಿಕ ಭೌತಶಾಸ್ತ್ರಜ್ಞನಾಗಿ ನೇಮಕಗೊಂಡನು. 196೦ ರಲ್ಲಿ ಇವೆಲ್ಲವನ್ನು ಬಿಟ್ಟು ಜೀವರಸಾಯನಶಾಸ್ತ್ರ, ಅಣ್ವಕ ಜೀವಶಾಸ್ತ್ರದ ಕಡೆಗೆ ಹೊರಳಿ 1964ರಲ್ಲಿ ಹಾರ್ವರ್ಡ್‍ನಲ್ಲಿಯೇ ಜೀವ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1961ರಲ್ಲಿ ಮೊನೊಡ್ ಮತ್ತು ಎಫ್.ಜಾಕೊಬ್ ವಂಶವಾಹಕದ ಕ್ರಿಯಾ ನಿಯಂತ್ರಕ ಒಂದು ರಾಸಾಯನಿಕ ಇರಬಹುದೆಂದೂ,ಅದು ವಂಶವಾಹಕದ ಅಗತ್ಯವಿಲ್ಲದಾಗ, ಅದನ್ನು ಸುಪ್ತಗೊಳಿಸುವುದೆಂದೂ ಸೂಚಿಸಿದ್ದರು, 1966ರಲ್ಲಿ ಗಿಲ್ಬರ್ಟ್ ಮತ್ತು ಬಿ. ಮೂಲರ್‍ಹಿಲ್ ಇಂತಹ ವಸ್ತು ನಿಜವಾಗಿಯೂ ಇದೆಯೇ ಎಂದು ಪರಿಶೀಲಿಸಲು ಹೊರಟು, ಅಂತಿಮವಾಗಿ ಅದನ್ನು ಪ್ರತ್ಯೇಕಿಸುವಲ್ಲಿ ಯಶಸ್ವಿಯಾದನು. ಹೀಗೆ ಪ್ರತ್ಯೇಕಿಸಲ್ಪಟ್ಟ ರಾಸಾಯನಿಕ ‘ದುಗ್ದ ನಿಯಂತ್ರಕ’ ವೆಂದು ತಿಳಿದು ಬಂದಿದೆ. ಲ್ಯಾಕ್ಟೋಸ್ ಒಡೆಯಲು ವಿಶಿಷ್ಟ ಕಿಣ್ವದ ಅಗತ್ಯವಿದೆ. ಈ ಕಿಣ್ವದ ಬಿಡುಗಡೆಗೆ ಒಂದು ನಿರ್ದಿಷ್ಟ ವಂಶವಾಹಕವಿದೆ. ದುಗ್ದ-ನಿಯಂತ್ರಕ ಈ ವಂಶವಾಹಕವನ್ನು ನಿಯಂತ್ರಿಸುತ್ತದೆ. ದುಗ್ದನಿಯಂತ್ರಕ ಒಂದು ಬಗೆಯ ಪ್ರೋಟೀನ್ ಎಂತಲೂ ಗಿಲ್ಬರ್ಟ್ ತೋರಿಸಿದನು. ಮುಂದಿನ ದಿನಗಳಲ್ಲಿ ಡಿಎನ್‍ಎ ಸರಣಿಯನ್ನು ನಿರ್ಧರಿಸುವ ವಿಧಾನವನ್ನು ಗಿಲ್ಬರ್ಟ್ ರೂಪಿಸಿದನು. 1980 ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಗಿಲ್ಬರ್ಟ್‍ಗೆ ದಕ್ಕಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/28/2020