ಎರ್ನ್‍ಸ್ಟ್, ಒಟ್ಟೋ ಫಿಷ್ಕರ್ (1918--) ೧೯೭೩
ಜರ್ಮನಿ-ರಸಾಯನಶಾಸ್ತ್ರ-ಲೌಹಿಕ ಸಂಯುಕ್ತಗಳನ್ನು (Metallic Composites) ಕುರಿತಾಗಿ ಸಂಶೋಧಿಸಿದಾತ.
ಎರ್ನ್‍ಸ್ಟ್, ಭೌತಶಾಸ್ತ್ರದ ಪ್ರಾಧ್ಯಾಪಕನ ಮೂವರು ಮಕ್ಕಳಲ್ಲಿ ಕೊನೆಯವನು. ಮ್ಯೂನಿಕ್ ಸಮೀಪದ ಸೊಲ್ನ್ ಹಳ್ಳಿಯಲ್ಲಿ 10 ನವೆಂಬರ್ 1918 ರಂದು ಜನಿಸಿದನು. ಪ್ರಾಥಮಿಕ ಶಿಕ್ಷಣ ಮುಗಿಸಿ, 1929ರಲ್ಲಿ ಗ್ರ್ಯಾಮರ್ ಶಾಲೆ ಸೇರಿದನು. 1937ರಲ್ಲಿ ಪದವಿ ಗಳಿಸಿ ಆಗ ಕಡ್ಡಾಯವಾಗಿದ್ದಂತೆ ಮಿಲಿಟರಿ ಸೇವೆಗೆ ಸೇರಿದನು. ಈ ಕಾಲಕ್ಕೆ ಎರಡನೇ ಜಾಗತಿಕ ಯುದ್ದ ಪ್ರಾರಂಭವಾಯಿತು. ಮಿಲಿಟರಿಯಲ್ಲಿರುವಾಗ ಪೋಲೆಂಡ್, ಫ್ರಾನ್ಸ್, ರಷ್ಯಾದಲ್ಲಿ ಸೇವೆ ಸಲ್ಲಿಸಿದನು. 1941, ಹಾಗೂ ನಂತರ ಒಂದು ವರ್ಷ ವಿದ್ಯಾಭ್ಯಾಸ ರಜಾ ಪಡೆದು ಮ್ಯೂನಿಕ್‍ನ ಟೆಕ್ನಿಕಲ್ ಕಾಲೇಜಿನ ರಸಾಯನಶಾಸ್ತ್ರ ವಿಭಾಗ ಸೇರಿದನು. ಯುದ್ದದಲ್ಲಿ ಮಿತ್ರ ಪಕ್ಷಗಳ ಕೈಮೇಲಾಗಿ, ಅಸಂಸಂದ ಸೈನಿಕರ ಸೆರೆಯಾದ ಎರ್ನ್‍ಸ್ಟ್ 1945ರಲ್ಲಿ ಬಿಡುಗಡೆಗೊಂಡನು. ಯುದ್ದ ಕಾಲದಲ್ಲಿ ಮುಚ್ಚಲಾಗಿದ್ದ ಮ್ಯುನಿಕ್ ಕಾಲೇಜ್ 1946ರಲ್ಲಿ ಪ್ರಾರಂಭವಾಯಿತು. ಆಗ ಎರ್ನೆಸ್ಟ್ ಮತ್ತೊಮ್ಮೆ ಶಿಕ್ಷಣ ಮುಂದುವರೆಸಿ 1949ರಲ್ಲಿ ರಸಾಯನಶಾಸ್ತ್ರದ ಪದವಿಗಳಿಸಿದನು. ವಾಲ್ಟರ್ ಹೇಬರ್‍ನ ಸಹಾಯಕನಾದ ಎರ್ನಸ್ಟ್ ,ನಿಕೆಲ್ ಲವಣಗಳ ಮೇಲೆ ಕಾರ್ಬನ್ ಮಾನಾಕ್ಸೈಡ್ ಪರಿಣಾಮ ಕುರಿತಾಗಿ ಸಂಪ್ರಬಂಧ ಬರೆದು 1952ರಲ್ಲಿ ಡಾಕ್ಟರೇಟ್ ಗಳಿಸಿದನು. 1956ರಲ್ಲಿ ವೈಜ್ಞಾನಿಕ ಯಾತ್ರೆಯ ಅಂಗವಾಗಿ ಅಸಂಸಂಗಳಿಗೆ ಭೇಟಿ ಇತ್ತನು. ಎರ್ನ್‍ಸ್ಟ್‍ನ ಸಂಶೋಧನೆಗಳು ಸೈಕ್ಲೋಪೆಂಟಡೇನ್ಸ್ ಲೌಹಿಕ ಸಂಯುಕ್ತಗಳು, ಓಲೇಫಿûನ್, ಮೆಟಲ್ ಕಾರ್ಬನಲ್ ಕಾರ್ಬೀನ್,ಕಾರ್ಬೈನ್ ಸಂಯುಕ್ತಗಳನ್ನು ಕುರಿತಾಗಿ ಕೇಂದ್ರಿಕೃತವಾಗಿದ್ದವು. ಇದಕ್ಕಾಗಿ ಎರ್ನ್‍ಸ್ಟ್ 1973ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು. 1956ರಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕನಾದ ಎರ್ನ್‍ಸ್ಟ್ ಹಲವಾರು ಗೌರವ, ಪ್ರಶಸ್ತಿಗಳಿಗೆ ಭಾಜನಾಗಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 11/17/2019