ಆ್ಯನ್‍ಫಿನ್ಸೆನ್ , ಕ್ರಿಶ್ಚಿಯನ್ (ಬೊಯೆಮರ್) (1916-1995)-೧೯೭೨
ಅಸಂಸಂ-ಜೀವರಸಾಯನಶಾಸ್ತ್ರ-ಕಿಣ್ವಗಳ ಆಕಾರ ಮತ್ತು ಕ್ರಿಯಾಶೀಲತೆ ಕುರಿತಾಗಿ ಸಂಶೋಧನೆ ನಡೆಸಿದಾತ.
ಆ್ಯನ್‍ಫಿûನ್ಸೆನ್ , ಸ್ವಾರ್ಥ್‍ಮೋರ್ ಹಾಗೂ ಹಾರ್ವರ್ಡ್‍ನಲ್ಲಿ ಶಿಕ್ಷಣ ಪಡೆದನು. ಹಾರ್ವರ್ಡ್‍ನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ಆ್ಯನ್‍ಫಿûನ್ಸೆನ್ 1950ರಲ್ಲಿ ಬೆಥೆಡ್ಸಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೇರಿದನು. 1960ರಲ್ಲಿ ಮೂರ್ ಮತ್ತು ಡಬ್ಲ್ಯೂ. ಎಚ್. ಸ್ಟೀನ್ ರೈಬೋನ್ಯೂಕ್ಲಿಯಸ್‍ಗೆ ಕಾರಣವಾದ 124 ಅಮೈನೋ ಆವ್ಮ್ಲಗಳ ಸರಣಿಯನ್ನು ಪತ್ತೆಹಚ್ಚಿದ್ದರು. ಸಂಪೂರ್ಣ ಸರಣಿ ತಿಳಿದ ಮೊದಲ ಕಿಣ್ವವೆಂದು (Enzyme) ಇದು ದಾಖಲಾಯಿತು. ಕಿಣ್ವಗಳು ವಿಶಿಷ್ಟ ರಾಸಾಯನಿಕ ಕ್ರಿಯಾ ಸಾಮಥ್ರ್ಯವನ್ನು ಹೊದಿವೆ. ಇದಕ್ಕೆ ಅಮೈನೋ ಆವ್ಮ್ಲಗಳ ಸರಣಿ ಜೋಡಣೆಯಂತೆಯೇ ಅವುಗಳ ವಿಶಿಷ್ಟ ಆಕಾರವೂ ಸಹ ಕಾರಣವಾಗಿದೆ. ಕಿಣ್ವದ ಆಕಾರವನ್ನು ಭಂಗಗೊಳಿಸಿದ ನಂತರ ಅದಕ್ಕೆ ನಿರ್ದಿಷ್ಟ ಹಾಗೂ ಸಮರ್ಪಕವಾದ ತಾಪಮಾನ , ಲವಣ ಸಾಂದ್ರತೆ ಇತ್ಯಾದಿಗಳನ್ನು ಒದಗಿಸಿದರೆ ಅದು ಮತ್ತೊಮ್ಮೆ ತನ್ನ ಮೂಲ ಆಕಾರವನ್ನು ಹೊಂದಬಲ್ಲದೆಂದು ಮತ್ತು ಅದು ಮೂಲ ಕ್ರಿಯಾ ಸಾಮಥ್ರ್ಯವನ್ನು ಮತ್ತೆ ಗಳಿಸುವ್ಯದೆಂದು ಆ್ಯನ್‍ಫಿûನ್ಸೆನ್ ತೋರಿಸಿದನು. ಕಿಣ್ವದ ಈ ಸಾಮಥ್ರ್ಯ ಅದರ ಅಮೈನೋ ಆಮ್ಲಗಳು ಮೂರು ಆಯಾಮಗಳಲ್ಲಿ ಜೋಡಣೆಗೊಂಡಿರುವಲ್ಲಿದೆಯ್ದೆಂ ವಿವರಿಸಿದನು. ಬೇರೆ ಪ್ರೋಟೀನ್;ಗಳು ಸಹ ಇದೇ ರೀತಿ ವರ್ತಿಸುವುವೆಂದು ಆ್ಯನ್‍ಫಿನ್ಸೆನ್ ಸಾಧಿಸಿದನು. ಇದಕ್ಕಾಗಿ 1972ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 1/28/2020