ಹಾಡ್ಗ್‍ಕಿನ್, ಡೊರೊಥಿ –(1910-1994) ೧೯೬೪
ಬ್ರಿಟನ್-ಕ್ಷ-ಕಿರಣ ಸ್ಪಟಿಕಾಲೇಖ (X-Ray Crystallography)ವಿಶ್ಲೇಷಣೆಯನ್ನು ಜೀವ ರಾಸಾಯನಿಕ ರಂಗಕ್ಕೆ ಅಳವಡಿಸಿದಾಕೆ.
ಡೊರೊಥಿ ತಂದೆ ಸೇವೆಯಲ್ಲಿ ಈಜಿಪ್ತ್‍ನಲ್ಲಿದ್ದಾಗ ಅವಳು ಕೈರೋದಲ್ಲಿ ಜನಿಸಿದಳು. ಡೊರೊತಿ ಬಾಲಕಿಯಾಗಿದ್ದಾಗಲೇ ಅವಳ ತಂದೆ ಸೂಡಾನ್‍ಗೆ ವರ್ಗನಾದನು. ಇಲ್ಲಿ ಪ್ರಾಕ್ತನಶಾಸ್ತ್ರ, ಸ್ಪಟಿಕ ಮತ್ತು ಖನಿಜಗಳ ಬಗೆಗೆ ಡೊರೊಥಿ ಆಕರ್ಷಿತಳಾದಳು. ಶಾಲಾ ವಿದ್ಯಾಭ್ಯಾಸ ಮುಗಿಸಿದ ಡೊರೊಥಿ ಆಕ್ಸ್ಫರ್ಡ್‍ಗೆ ಸೇರಿ ಉನ್ನತ ಶಿಕ್ಷಣ ಪಡೆದಳು. ಇಲ್ಲಿ ಕ್ಷ-ಕಿರಣ ಸ್ಪಟಿಕಾಲೇಖದಲ್ಲಿ (Crystallography) ನೈಪುಣ್ಯ ಪಡೆದು ನಂತರ ಕೇಂಬ್ರಿಜ್ ಸೇರಿ, ಜೆ.ಡಿ.ಬರ್ನೆಲ್‍ನೊಂದಿಗೆ ಸಂಶೋಧನೆ ಪ್ರಾರಂಭಿಸಿದಳು. ಎರಡು ವರ್ಷದ ನಂತರ ಡೊರೊಥಿ ಆಕ್ಸ್¥sóÀರ್ಡ್‍ಗೆ ಹಿಂದಿರುಗಿದಳು, ಆಗಲೇ ಖ್ಯಾತ ಇತಿಹಾಸಕಾರ ಥಾಮಸ್ ಹಾಡ್ಗ್‍ಕಿನ್‍ನನ್ನು ವಿವಾಹವಾದಳು. ಬ್ರಾಗ್ಸ್ ಪರಮಾಣುಗಳ ರಚನೆಯನ್ನು ತಿಳಿಯಲು ಕ್ಷ ಕಿರಣ ವಿವರ್ತನ (Diffrection) ವಿಧಾನವನ್ನು ರೂಪಿಸಿದ್ದನು. ಡೊರೊಥಿ ಇದನ್ನು ಸಂಕೀರ್ಣ ಅಣುಗಳ ಅಧ್ಯಯನಕ್ಕೆ ಬಳಸಿದಳು. ಬಿ-12ರಲ್ಲಿ 90 ಅಣುಗಳಿದ್ದು ಅದರ ರಚನೆಯ ತೀರ್ಮಾನಕ್ಕೆ ಡೊರೊಥಿ 8 ವರ್ಷಗಳ ಕಾಲ ಶ್ರಮಿಸಿದಳು. ಬಿ-12 ವಿಟಮಿನ್ ಕೊರತೆಯಿಂದ ರಕ್ತಹೀನತೆ ಬರುತ್ತದೆ . 1956ರಲ್ಲಿ ಡೊರೊಥಿ ಪೆನ್ಸಿಲಿನ್‍ನ ಮತ್ತು ಬಿ-12 ವಿಟಮಿನ್‍ನ ರಾಸಾಯನಿಕ ರಚನೆಯನ್ನು ನಿರ್ಧರಿಸಿದಳು. ಮುಂದೆ ಬೇರೆ ರಾಸಾಯನಿಕ ವಿಧಾನಗಳಿಂದ ಇದು ಸರಿ0iÉುಂದು ಖಚಿತವಾಯಿತು.. ಗಣಕಗಳು ವೈದ್ಯಕೀಯ ರಂಗಕ್ಕೆ ಲಭ್ಯವಾದ ಮೇಲೆ ಡೊರೊಥಿ ಅವುಗಳ ನೆರವಿನಿಂದ 800 ಅಣುಗಳನ್ನು ಹೊಂದಿರುವ ಇನ್ಸುಲಿನ್‍ನ ರಚನೆ ಅನಾವರಣಗೊಳಿಸಲು ಯತ್ನಿಸಿದಳು. 1930ರ ಪ್ರಾರಂಭವಾದ ಈ ಪ್ರಯತ್ನಕ್ಕೆ 1972ರಲ್ಲಿ ಡೊರೊಥಿ ಯಶಸ್ಸನ್ನು ಕಂಡಳು. ಇದಕ್ಕಾಗಿ ಡೊರೊಥಿಗೆ 1964ರ ನೊಬೆಲ್ ಪ್ರಶಸ್ತಿ ದಕ್ಕಿದೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019