ವುಡ್‍ವರ್ಡ್, ರಾಬರ್ಟ್ ಬನ್ರ್ಸ್ (1917-1979) ೧೯೬೫
ಅಸಂಸಂ-ಸಾವಯವ ರಸಾಯನಶಾಸ್ತ್ರ- ಸಾವಯವ ಸಂಶ್ಲೇಷಣೆಯ ಮಹಾನ್ ಸಾಧಕ.
ವುಡ್‍ವರ್ಡ್ ತನ್ನ ವೃತ್ತಿ ಜೀವನವಿಡೀ ಯಶಸ್ಸಿನಲೆಯ ಮೇಲೆ ತೇಲಿದನು. ಹದಿನಾರನೇ ವಯಸ್ಸಿಗೆ ಎಂಐಟಿಗೆ ಸೇರಿದನು. ಔಪಚಾರಿಕ ಶಿಕ್ಷಣದ ಕೊರತೆ ನೀಗಿಸಿಕೊಳ್ಳಲೆಂದು ಕೆಳಗಿನ ತರಗತಿಗಳಿಗೆ ವುಡ್‍ವರ್ಡ್ ಕಳಿಸಲ್ಪಟ್ಟನು. ಆದರೆ ಇಪ್ಪತ್ತನೇ ವಯಸ್ಸಿಗೇ ಡಾಕ್ಟರೇಟ್ ಗಳಿಸಿದನು. ನಂತರ ಹಾರ್ವರ್ಡ್‍ಗೆ ಹೋಗಿ ನೆಲೆಸಿದನು. ಸಾವಯವ ರಸಾಯನಶಾಸ್ತ್ರದಲ್ಲಿ ವೈವಿಧ್ಯಮಯವಾದ ವಿಷಯಗಳಲ್ಲಿ ವ್ಯಾಪಕ ಕಾರ್ಯ ಚಟುವಟಿಕೆ ಸಾಗಿಸಿದನು. ಸಂಕೀರ್ಣ ನೈಸರ್ಗಿಕ ರಾಸಾಯನಿಕಗಳ ಸಂಶ್ಲೇಷಣೆಯಲ್ಲಿ ವುಡ್‍ವರ್ಡ್ ಅದ್ವಿತೀಯನಾಗಿದ್ದನು. 1944ರಲ್ಲಿ ಕ್ವಿನೈನ್, 1951ರಲ್ಲಿಕೊಲೆಸ್ಟರಾಲ್ ಹಾಗೂ ಕಾರ್ಟಿಸೊನ್ ,1954ರಲ್ಲಿ ಲೈಸೆರ್ಜಿಕ್ ಆಮ್ಲ, ಸ್ಟೈರಾನೈನ್. 1956ರಲ್ಲಿ ರೆಸ್ಪೆರೈನ್, 1960ರಲ್ಲಿ ಕ್ಲೋರೋಫಿûಟ್, 1962ರಲ್ಲಿ ಟೆಟ್ರಾಸೈಕ್ಲಿನ್ ಪ್ರತಿಜೈವಿಕಗಳನ್ನು ಸಂಶ್ಲೇಷಿಸಿದನು. ಇವುಗಳಲ್ಲಿ ಲೈಸೆರ್ಜಿಕ್ ಆಮ್ಲ, ಮತಿ ವಿಭ್ರಮಕಾರಿ ಎಲ್‍ಎಸ್‍ಡಿಯ ಮೂಲ ಆಕರವಾದರೆ, ಸ್ಟೈಕ್‍ನೈನ್ ನಿಶ್ಚಲಕಾರಿ ರಾಸಾಯನಿಕಗಳಾಗಿ ಹೆಸರುವಾಸಿಯಾದವು. ಹತ್ತು ವರ್ಷಗಳ ಕಾಲ, ಸ್ವಿಸ್ ರಾಸಾಯನಿಕ ತಜ್ಞರ ತಂಡದೊಂದಿಗೆ ನಡೆಸಿದ, ಎಡೆಬಿಡದೆ ಪರಿಶ್ರಮದಿಂದ ವುಡ್‍ವರ್ಡ್ 1971ರಲ್ಲಿ ಸೈಯನೋ ಕೋಬಲಾಯಿನ್,ಎಂದರೆ ವಿಟಮಿನ್ 12ನ್ನು ಸಂಶ್ಲೇಷಿಸಿ ಸಾಧನೆಯ ಉತ್ತುಂಗಕ್ಕೇರಿದನು. ಪ್ರತಿಯೊಂದು ಸಂಶ್ಲೇಷಣೆಯೂ ವುಡ್‍ವರ್ಡ್‍ನ ಜಾಣ್ಮೆ , ಮುನ್ನೋಟ ಸಾಧನೆಗಳಿಗೆ ಸಾಕ್ಷಿಯಾಗಿದ್ದವು. ಸರಳ ಮೂಲ ವಸ್ತುಗಳಿಂದ ಹಂತ ಹಂತವಾದ ರಾಸಾಯನಿಕ ಕ್ರಿಯೆಗಳ ಸಂಶ್ಲೇಷಣೆ ಸಾಧಿಸುವುದು ವುಡ್‍ವರ್ಡ್‍ನ ವೈಶಿಷ್ಟ್ಯವಾಗಿದ್ದಿತು.1965ರಲ್ಲಿ ವುಡ್‍ವರ್ಡ್ ಹಾ¥sóïಮನ್ ನಿಯಮಗಳನ್ನು ರೂಪಿಸಿ, ದೀರ್ಘ ಪ್ರತಿಕ್ರಿಯೆಗಳನ್ನು ಅರಿಯಲು ನೆರವಾದರು. ವುಡ್‍ವರ್ಡ್ ಅಪಾರ ಜ್ಞಾಪಕ ಶಕ್ತಿ ,ರಾಸಾಯನಿಕಗಳ ಸಂಪೂರ್ಣ ತಿಳುವಳಿಕೆ ಹಾಗೂ ತಿಳಿ ಹಾಸ್ಯದ ಗಣಿಯಾಗಿದ್ದನು. ಸಭೆ, ಸಮಾರಂಭಗಳಿಗೆ ಯಾವಾಗಲೂ ನೀಲಿ ಬಣ್ಣದ ಕಸೂತಿ ಹಾಕಿದ ಸೂಟಿನಲ್ಲಿ, ಸ್ಟೈಕ್‍ನೈನ್ ರಾಸಯನಿಕ ಸೂತ್ರ ಹಾಕಿದ ಟೈ ಧರಿಸಿ ಹಾಜರಾಗುತ್ತಿದ್ದನು. ಸ್ಟೈಕ್‍ನೈನ್ ಸಂಶ್ಲೇಷಣೆಗಾಗಿ ವುಡ್‍ವರ್ಡ್ ತನ್ನ ಜೀವಿತದ 50 ವರ್ಷಗಳನ್ನು ಮೀಸಲಿಟ್ಟಿದ್ದನು. 1965ರಲ್ಲಿ ವುಡ್‍ವರ್ಡ್‍ಗೆ ನೊಬೆಲ್ ಪ್ರಶಸ್ತಿ ದಕ್ಕಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/6/2020