ಲೂಯಿ,ಫ್ರೆಡರಿಕ್ ಲೆಲಾಯಿರ್ (1906-1987) ೧೯೭೦
ಫ್ರಾನ್ಸ್-ರಸಾಯನಶಾಸ್ತ್ರ-ಚಯಾಪಚಯ (Metabolism) ಕುರಿತಾಗಿ ಸಂಶೋಧಿಸಿದಾತ.
ಲೂಯಿಯ ತಂದೆ, ತಾಯಿ ಅರ್ಜೈಂಟೈನಾ ಮೂಲದವರಾಗಿದ್ದು ಪ್ಯಾರಿಸ್‍ನಲ್ಲಿ ನೆಲೆಸಿದ್ದರು. ಇಲ್ಲಿಯೇ 6 ಸೆಪ್ಟೆಂಬರ್ 1906ರಂದು ಲೂಯಿಯ ಜನನವಾಯಿತು. ಇವರು ಲೂಯಿ 2ವರ್ಷದವನಿರುವಾಗ , ಅರ್ಜೈಂಟೈನಾದ ಬ್ಯೂನಸ್‍ಏರಿಸ್‍ಗೆ ಬಂದು ನೆಲೆಸಿದರು. 1932ರಲ್ಲಿ ಬ್ಯೂನಸ್‍ಏರಿಸ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಗಳಿಸಿದ ಲೂಯಿ, ಬರ್ನಾಡೋ ಎ ಹೌಸೆಯ ಕೆಳಗೆ ವೃತ್ತಿ ಜೀವನ ಪ್ರಾರಂಭಿಸಿದನು. ಇಲ್ಲಿ ಅಡ್ರೆಲಿನ್ ಕಾರ್ಬೋಹೈಡ್ರೇಟ್‍ಗಳ ಚಯಾಪಚಯ (Metabolism) ಕುರಿತಾಗಿ ಅಧ್ಯಯನ ಪ್ರಾರಂಭಿಸಿದನು. 1936ರಲ್ಲಿ ಇಂಗ್ಲೆಂಡ್‍ಗೆ ತೆರಳಿ ಕೇಂಬ್ರಿಜ್‍ನ ಜೀವ ರಸಾಯನಶಾಸ್ತ್ರ ಪ್ರಯೋಗಾಲಯದಲ್ಲಿ ಕೆಲಸ ಮಾಡಿದನು. ಒಂದು ವರ್ಷದ ನಂತರ ಅರ್ಜೈಂಟೈನಾಕ್ಕೆ ಮರಳಿದ ಲೂಯಿ, ಜೆ.ಎಂ.ಮುನೋ ಜೊತೆಗೆ ಯಕೃತ್ತಿನಲ್ಲಿ ಸ್ನಿಗ್ಥ ಆಮ್ಲಗಳು ಉತ್ಕರ್ಷಗೊಳ್ಳುವುದನ್ನು (Oxidisation) ಅರಿಯುವತ್ತ ಗಮನ ಹರಿಸಿದನು. 1944ರಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಅಂಗಕ್ರಿಯಾಶಾಸ್ತ್ರಜ್ಞನಾಗಿದ್ದ ಕಾರ್ಲ್ ಎph .ಕೊರಿಯೊಂದಿಗೆ ಕೆಲಸ ಮಾಡಲು ಅಸಂಸಂದ ಸೇಂಟ್ ಲೂಯಿಗೆ ಹೋದನು. ಇಲ್ಲಿ ಹಾಗೂ ನ್ಯೂಯಾರ್ಕ್‍ನಲ್ಲಿ ವೈದ್ಯ ಹಾಗೂ ಶಸ್ತ್ರಚಿಕಿತ್ಸಕರೊಂದಿಗೆ ಕೆಲಸ ಮಾಡಿದನು. ಲೂಯಿ ಹಾಗೂ ಸಂಗಡಿಗರು ಇಲ್ಲಿ ಗ್ಯಾಲಕ್ಟೋಸ್‍ನ ಚಯಾಪಚಯದ ಮೇಲೆ ನಡೆಸಿದ ಅಧ್ಯಯನದ ಫಲವಾಗಿ ಗ್ಲುಕೋಸ್-1 , 6-ಡೈಫಾಸ್ಫೇಟ್, ಯುರಿಡಿನ್ ಡಯಾ ಫಾಸ್ಪೆಟ್ ಗ್ಲುಕೋಸ್‍ಗಳನ್ನು ಬೇರ್ಪಡಿಸುವುದು ಸಾಧ್ಯವಾಯಿತು. ಮುಂದೆ, ಲೂಯಿ ಹಾಗೂ ಎನ್ರಿಕೋ fyaaಬಿಬ್ 1953ರಲ್ಲಿ ಯುರಿಡಿನ್ ಡಯಾ ಫಾಸ್ಫೇಟ್, ಟ್ರೆಹಲೋರ್ಸ್ ಹಾಗೂ ಸುಕ್ರೋಸ್ ಸಂಶ್ಲೇಷಣೆಯಲ್ಲಿ ಗ್ಲುಕೋಸ್‍ನ ದಾನಿಯಂತೆ ವರ್ತಿಸುವುದನ್ನು ತೋರಿಸಿದರು. ಲೂಯಿ ಹಾಗೂ ಸಂಗಡಿಗರಿಂದ ಹಲವಾರು ಗ್ಲುಕೋಸ್‍ಗಳ ಬೇರ್ಪಡಿಕೆ, ಸಂಶ್ಲೇಷಣೆ ಸಾಧ್ಯವಾಯಿತು. ಲೂಯಿ ಮತ್ತು ನಿಕೊಲಾಸ್ ಬೆಹ್ರನ್ಸ್‍ನಿಂದ, ಪ್ರಾಣಿಗಳ ಅಂಗಾಂಶದಲ್ಲಿ ಗ್ಲುಕೋಸ್ ವರ್ಗಾವಣೆಯ ಕ್ರಿಯೆ ವಿವರಿಸಲ್ಪಟ್ಟಿತು. ಜೀವ ರಸಾಯನಶಾಸ್ತ್ರದಲ್ಲಿ ಲೂಯಿ ನೀಡಿದ ಕೊಡುಗೆಗಳಿಗಾಗಿ 1970ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019