ಲಾರ್ಸ್, ಆನ್ಸೇಜರ್ ೧೯೬೮
ನಾರ್ವೆ-ರಸಾಯನಶಾಸ್ತ್ರ
ಲಾರ್ಸ್ 27 ನವೆಂಬರ್ 1903 ರಂದು ಓಸ್ಲೋದಲ್ಲಿ ಜನಿಸಿದನು. ಈತನ ತಂದೆ ನಾರ್ವೆಯ ಉಚ್ಛನ್ಯಾಯಾಲಯದಲ್ಲಿ ವಕೀಲನಾಗಿದ್ದನು. ಇಪ್ಪತ್ತನೆ ವಯಸ್ಸಿನಲ್ಲಿ ನಾರ್ವೆಯ ಖ್ಯಾತ ಕಾಗದತಯಾರಿಕೋದ್ಯಮಿಯ ಮಗಳನ್ನು ಮದುವೆಯಾದನು. ಲಾರ್ಸ್‍ನ ಪ್ರಾಥಮಿಕ ಶಿಕ್ಷಣ ತಾಯಿ ಹಾಗೂ ಮನೆಪಾಠದ ಗುರುಗಳಿಂದಾಯಿತು. ಫ್ರೌಢಶಾಲಾ ಶಿಕ್ಷಣ ಮುಗಿಸುತ್ತಿದ್ದಂತೆಯೇಕಾಲೇಜಿಗೆ ಸೇರಿ 1925 ರಲ್ಲಿ ವಯಸ್ಸಿನಲ್ಲಿ ರಾಸಾಯನಿಕ ಇಂಜಿನಿಯರಿಂಗ್ ಪದವಿ ಗಳಿಸಿದನು. ಇದಾದ ನಂತರ ಝೂರಿಕ್ ಹಾಗೂ ಡೆನ್ಮಾರ್ಕ್‍ಗಳಿಗೆ ಭೇಟಿ ಇತ್ತನು. ಆ ಸಂದರ್ಭದಲ್ಲಿ ಡೆಬೈ ಹಾಗೂ ಹಕೆಲ್‍ರ ಪರಿಚಯವಾಯಿತು. 1928ರಲ್ಲಿ ಅಸಂಸಂಗಳ ಬಾಲ್ಟಿಮೋರ್ನ ಜಾನ್ಸ್ ಹಾ¥sóïಕಿನ್ಸ್ ವಿಶ್ವವಿದ್ಯಾಲಯಕ್ಕೆ ಹೋದನು. 1933ರಲ್ಲಿ ಯೇಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ವೇತನ ಪಡೆದು 1935ರಲ್ಲಿ ಡಾಕ್ಟರೇಟ್ ಗಳಿಸಿದನು. ಲಾರ್ಸ್ ಸಂಶೋಧನೆಗಳು ಲೋಹಗಳಲ್ಲಿ, ಮಹಾಪ್ರವಾಹಿಗಲಲ್ಲಿನ್ಸ್ ಕ್ರಮ-ಕ್ರಮಭಂಗದ ಸ್ಥಿತ್ಯಂತರ,ವೈದ್ಯುತ್ ವಾಹಕತೆ ಕುರಿತಾಗಿ ಸಾಗಿದವು. ಈ ನಿಟ್ಟಿನಲ್ಲಿ ಲಾರ್ಸ್ ನೀಡಿದ ಗಮನಾರ್ಹ ಕೊಡುಗೆಗಳಿಗಾಗಿ 1968ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/13/2019