ರೊನಾಲ್ಡ್, ಜಾರ್ಜ್ ರೆಫೋರ್ಡ್ ನೊರಿಷ್ (1897--) ೧೯೬೭
ಇಂಗ್ಲೆಂಡ್-ರಸಾಯನಶಾಸ್ತ್ರ- ಅತಿವೇಗದ ರಾಸಾಯನಿಕ ಕ್ರಿಯೆಗಳನ್ನು ಕುರಿತಾಗಿ ನಡೆಸಿದ ಸಂಶೋಧನೆಗನ್ನು ನಡೆಸಿದಾತ.
ರೊನಾಲ್ಡ್, 9 ನವೆಂಬರ್ 1897ರಂದು ಕೇಂಬ್ರಿಜ್‍ನಲ್ಲಿ ಜನಿಸಿದನು. 1915ರಲ್ಲಿ ಕೇಂಬ್ರಿಜ್‍ನ ಎಮ್ಯಾನುಯೆಲ್ ಕಾಲ್ಭೆಜಿಗೆ ನೈಸರ್ಗಿಕ ವಿಜ್ಞಾನಗಳಲ್ಲಿ ಪದವಿ ಗಳಿಸಲು ಸೇರಿದನು. ಆದರೆ1916ರಲ್ಲಿ ಅರ್ಧಕ್ಕೆ ಶಿಕ್ಷಣ ನಿಲ್ಲಿಸಿ, ತೋಪಿನ ದಳ ಸೇರಿ ಫ್ರಾನ್ಸ್’ಗೆ ವರ್ಗಾವಣೆಗೊಂಡನು. 1918ರಲ್ಲಿ ಯುದ್ದ ಖೈದಿಯಾಗಿ, ಜರ್ಮನಿ, ಪೆÇೀಲೆಂಡ್‍ನಲ್ಲಿ ಸೆರೆವಾಸದಲ್ಲಿದ್ದನು. 1919ರಲ್ಲಿ ಎಮ್ಯಾನುಯೆಲ್ ಕಾಲೇಜಿಗೆ ಮರಳಿದನು. ದ್ಯುತಿ ರಸಾಯನಶಾಸ್ತ್ರ, ಪ್ರತಿಕ್ರಿಯಾಗತಿಶಾಸ್ತ್ರ, ದಹನಶೀಲತೆ ಹಾಗೂ ಬಹ್ವಂಗೀಕರಣದಲ್ಲಿ (Polymerisation) ಸಂಶೋಧನೆ ನಡೆಸಿದನು. ಎರಡನೇ ಜಾಗತಿಕ ಯುದ್ದದ ಕಾಲದಲ್ಲಿ ರೊನಾಲ್ಡ್‍ನ ಸಂಶೋಧನೆಗೆ ಅಡಚಣೆಗಳುಂಟಾದವು. ಅಲ್ಪ ಮಿಡಿತದ ಚೈತನ್ಯ ಬಳಸಿ ರಾಸಾಯನಿಕ ಸಮತೋಲನ ತಪ್ಪಿಸಿದಾಗ ನಡೆಯುವ ಅತಿವೇಗದ ರಾಸಾಯನಿಕ ಕ್ರಿಯೆಗಳನ್ನು ಕುರಿತಾಗಿ ನಡೆಸಿದ ಸಂಶೋಧನೆಗಳಿಗಾಗಿ 1967ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಕೊನೆಯ ಮಾರ್ಪಾಟು : 7/23/2019