ಮ್ಯಾನ್ಫ್ರೆಡ್, ಐಗೆನ್ (1927--) ೧೯೬೭
ಜರ್ಮನಿ-ರಸಾಯನಶಾಸ್ತ್ರ-ಶೀಘ್ರ ರಾಸಾಯನಿಕ ಕ್ರಿಯೆಗಳ ಮಾಪನದ ವಿಧಾನಗಳ ಅಭಿವೃದ್ದಿಗೆ ಶ್ರಮಿಸಿದಾತ.
ಐಗೆನ್, 9 ಮೇ 1927 ರಂದು ಬೊಸಮ್ ಪಟ್ಟಣದಲ್ಲಿ ಜನಿಸಿದನು. ಈತನ ತಂದೆ ಸಂಗೀತಗಾರನಾಗಿದ್ದನು. ಬೊರಮ್‍ನಲ್ಲಿ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದನು. 1945ರಲ್ಲಿ ಗಟ್ಟಿಂಜೆನ್ ವಿಶ್ವವಿದ್ಯಾಲಯದಲ್ಲಿ ಭೌತ ಹಾಗೂ ರಸಾಯನಶಾಸ್ತ್ರದ ಪದವಿಗಾಗಿ ಸೇರಿದನು. ಅರ್ನಾಲ್ಡ್ ಯುಕೆನ್‍ನ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದನು. ಭಾರಜಲದ ನಿರ್ದಿಷ್ಟ ಶಾಖ, ದ್ರಾವಣಗಳ ಮೇಲೆ ಸಂಪ್ರಬಂಧ ಮಂಡಿಸಿ, 1951ರಲ್ಲಿ ಡಾಕ್ಟರೇಟ್ ಗಳಿಸಿದನು. ಇದಾದ ನಂತರ ಮುಂದೆರಡು ವರ್ಷ ಭೌತರಸಾಯನಶಾಸ್ತ್ರದ ಸಹಉಪನ್ಯಾಸಕನಾಗಿದ್ದನು. ಇಲ್ಲಿಂದ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಗೆ ವರ್ಗಾವಣೆಗೊಂಡು, ಗಟ್ಟಿಂಜೆನ್‍ಗೆ ಹೋದನು. ಇಲ್ಲಿ ಇದರ ನಿರ್ದೇಶಕನಾಗಿದ್ದ ಕಾರ್ಲ್ ಫ್ರೆಡರಿಕ್ ಬಾನ್ ಹೋಫರ್,ಐಗೆನ್‍ಗೆ ಅತ್ಯುತ್ತಮ ಸಂಶೋಧನಾ ವಾತಾವರಣವನ್ನು ಕಲ್ಪಿಸಿಕೊಟ್ಟನು. ಇದು ಐಗೆನ್ ಜೀವ ಭೌತ ರಸಾಯನಶಾಸ್ತ್ರದಲ್ಲಿ ಪರಿಣಿತಿ ಗಳಿಸುವಂತಾಯಿತು. 1950ರಿಂದ 1953 ರವರೆಗೆ ಐಗೆನ್ ದ್ರಾವಣಗಳಲ್ಲಿ ಅಯಾನಿಕ ಪ್ರತಿಕ್ರಿಯೆಗಳ ಸಮಸ್ಯೆಯನ್ನು ಕುರಿತಾಗಿ ಅಧ್ಯಯನ ಪ್ರಾರಂಭಿಸಿದನು.ಇದಕ್ಕೆ ಸಹೋದ್ಯೋಗಿಗಳಾದ ಕೊನಾರ್ಡ್ ಟಾಮ್ ಹಾಗೂ ವಾಲ್ಟರ್ ಕುಟ್ರ್ಸ್‍ರ ಒತ್ತಾಸೆ ದಕ್ಕಿತು. ಬಹು ಶೀಘ್ರವಾಗಿ ಜರುಗುವ ರಾಸಾಯನಿಕ ಪ್ರತಿಕ್ರಿಯೆಗಳು ಅಧ್ಯಯನಕ್ಕೆ ದಕ್ಕುತ್ತಿರಲಿಲ್ಲ. ಐಗೆನ್ ಅಭಿವೃದ್ಧಿಗೊಳಿಸಿದ ತಂತ್ರಗಳು ಈ ಆಡಚಣೆಯನ್ನು ದೂರಗೊಳಿಸಿದವು. ಕ್ರಿಯೆಗಳ ಮಾಪನವನ್ನು ಅಳೆಯುವಲ್ಲಿ ತಂತ್ರಗಳ ಅಭಿವೃದ್ದಿಯಲ್ಲಿ ಐಗೆನ್ ನಿರತನಾಗಿ, ಅದ್ಭುತ ಯಶಸ್ಸನ್ನು ಕಂಡನು. ಈ ಯತ್ನದಲ್ಲಿ ಲಿಯೋ ಡೆ ಮೆಯರ್‍ನ ನೆರವು ದಕ್ಕಿತು. 1967ರಲ್ಲಿ ಐಗೆನ್, ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯ ನಿರ್ದೇಶಕನಾದನು. ಹಿಮ ಸ್ಪಟಿಕಗಳಲ್ಲಿರುವ ಪೆÇ್ರೀಟಾನ್‍ಗಳ ಹಾಗೂ ವಾಹಕತ್ವದಲ್ಲಿನ ವೈರುಧ್ಯಗಳನ್ನು ವಿಜ್ಞಾನಿಗಳು ಗುರುತಿಸಿದ್ದರು. ಐಗೆನ್, ಡೆ ಮೆಯರ್ ಜೊತೆಗೂಡಿ ಇದಕ್ಕೆ ಕಾರಣವನ್ನು ವಿವರಿಸಿದನು. ಐಗೆನ್ ದೀರ್ಘ ರಾಸಾಯನಿಕ ಕ್ರಿಯೆಗಳಲ್ಲಿರುವ ಹಂತ, ಹಂತದ ಬದಲಾವಣೆಗಳನ್ನು ವಿವರಿಸುವಲ್ಲಿ ಯಶಸ್ವಿಯಾದನು. ಮುಂದೆ ಐಗೆನ್‍ನ ಆಸಕ್ತಿಗಳು ಜೀವಭೌತರಸಾಯನಶಾಸ್ತ್ರದತ್ತ ಹರಿದವು. ಕಿಣ್ವ ಹಾಗೂ ಲಿಪಿಡ್ ಪೆÇರೆಗಳ ಅಧ್ಯಯನ, ಕೇಂದ್ರ ನರವ್ಯೂಹದಲ್ಲಿ ಮಾಹಿತಿ ಸಂಗ್ರಹ ಹಾಗೂ ಸಂಸ್ಕರಣೆಗಳನ್ನು ಅರಿಯಲು ಐಗೆನ್ ಮುಂದಿನ ದಿನಗಳಲ್ಲಿ ಯತ್ನಿಸಿದನು. ಶೀಘ್ರ ರಾಸಾಯನಿಕ ಕ್ರಿಯೆಗಳ ಮಾಪನದ ವಿಧಾನಗಳ ಅಭಿವೃದ್ದಿಗಾಗಿ, ಐಗೆನ್ 1967ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/24/2019