ಮುಲ್ಲಿಕೆನ್, ರಾಬರ್ಟ್ (ಸ್ಯಾಂಡರ್‍ಸನ್) –(1896-1986) ೧೯೬೬
ಅಸಂಸಂ-ರಸಾಯನಭೌತಶಾಸ್ತ್ರ- ಅಣ್ವಕ ಕಕ್ಷಾ ಸಿದ್ಧಾಂತ ಹಾಗೂ ರೋಹಿತಶಾಸ್ತ್ರ ನೀಡಿದಾತ.
ಮುಲ್ಲಿಕನ್, ತಂದೆ ಸಾವಯವ ರಸಾಯನಶಾಸ್ತ್ರಜ್ಞನಾಗಿದ್ದನು. ಮುಲ್ಲಿಕನ್ 1917ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಅ¥sóï ಟೆಕ್ನಾಲಜಿಯಿಂದ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿದನು. 1919ರಿಂದ ಚಿಕಾಗೋದಲ್ಲಿ ಸಮಸ್ಥಾನಿಗಳನ್ನು (Isotopes) ಬೇರ್ಪಡಿಸುವ ಸಮಸ್ಯೆಯ ಪರಿಹಾರಕ್ಕೆ ತೊಡಗಿದನು. 1932ರಲ್ಲಿ ಬೊಹ್ರ್, ಎಫ್..ಹುಂಡ್ ಮತ್ತಿತರರು ಪರಮಾಣುಗಳ ಚೈತನ್ಯದ ಮಟ್ಟಗಳಿಗೆ ವಿವರಣೆ ನೀಡಿ, ಅವುಗಳ ರೋಹಿತಗಳೊಂದಿಗೆ ಹೇಗೆ ಅರಿಯಬಹುದೆಂದು ತಿಳಿಸಿದ್ದರು. ಮುಲ್ಲಿಕನ್ ಇದನ್ನು ಅಣುಗಳಿಗೆ ಅನ್ವಯಿಸಿದರು. ಅಣುವಿನಲ್ಲಿ ಒಂದಕ್ಕಿಂತ ಹೆಚ್ಚು ಪರಮಾಣುಗಳು ಬಂಧಗೊಂಡು ಎಲೆಕ್ಟ್ರಾನ್‍ಗಳು ಆ ಸಂಯೋಜಿತ ಕಕ್ಷೆಯಲ್ಲಿರುತ್ತವೆ. ರೋಹಿತಗಳ ಮೂಲಕ ಇವುಗಳ ಚೈತನ್ಯದ ಮಟ್ಟ ಹೇಗೆ ನಿರ್ಧರಿಸಬಹುದೆಂದು ಮುಲ್ಲಿಕನ್ ತೋರಿಸಿದನು. ಇದರ ಮುಂದುವರೆದ ಭಾಗವಾಗಿ ಮುಲ್ಲಿಕನ್, ಕಾಲ್‍ಸನ್ ಹಾಗೂ ಹಕೆಲ್‍ರಿಂದ ಅಣ್ವಕ ಕಕ್ಷಾ ಸಿದ್ಧಾಂತ ರೂಪುಗೊಂಡಿತು. ಮುಲ್ಲಿಕನ್ 1966ರ ನೊಬೆಲ್ ಪ್ರಶಸ್ತಿ ಗಳಿಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019