ಬಾರ್ಟನ್, ಸರ್ ಡೆರೆಕ್ ರಿಚರ್ಡ್ (1918--) ೧೯೬೯
ಬ್ರಿಟನ್ -ಸಾವಯವ ರಸಾಯನ ಶಾಸ್ತ್ರ-ಸ್ಟೀರಿಯೋ ರಸಾಯನಶಾಸ್ತ್ರ ಹಾಗೂ ಸಾವಯವ ನೈಸರ್ಗಿಕ ಉತ್ಪನ್ನಗಳ ರಂಗದಲ್ಲಿ ಗಣನೀಯ ಸಾಧನೆ ಮಾಡಿದಾತ.
ಲಂಡನ್‍ನ ಇಂಪೀರಿಯಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದ ಬಾರ್ಟನ್ 20 ವರ್ಷಗಳ ಕಾಲ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದನು. 1985ರಲಿ ಟೆಕ್ಸಾಸ್‍ನ ಎಎಂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. 1950ರಲ್ಲಿ ಬಾರ್ಟನ್ ಕೆಲವು ಸಾವಯವ ಅಣುಗಳ ಗುಣಗಳ ಅವುಗಳ ರಾಚನಿಕತೆಯ ಮೇಲೆ ಅವಲಂಬಿಯೆಂದು ನಿರೂಪಿಸಿದನು. ಅಣುವೊಂದು ನಿರ್ದಿಷ್ಟ ಆಕಾರ ತಳೆಯಲು, ಅದು ಒಂದು ಇಂಗಾಲ-ಇಂಗಾಲ ಬಂಧದ ಮೇಲೆ ತಿರುಗುವುದು ಕಾರಣವೆಂದು ಸೂಚಿಸಿದನು. ಇಂತಹ ಅಧ್ಯಯನ ಈಗ ಅನುರೂಪತೆಯ ರಾಚನಿಕ ರಸಾಯನಶಾಸ್ತ್ರವಾಗಿದೆ. ಬಾರ್ಟನ್, ಫಿûನಾಲ್, ಸ್ಟೆರಾಯಿಡ್, ಪ್ರತಿ ಜೈವಿಕದಂತº ಹಲವಾರು ನೈಸರ್ಗಿಕ ರಾಸಾಯನಿಕಗಳ ಮೇರೆ ಕೆಲಸ ಮಾಡಿದನು. ಇದಕ್ಕಾಗಿ 1969ರಲ್ಲಿ ಓ.ಹೆಸೆಲ್‍ನೊಂದಿಗೆ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019