ಪೆರುಟ್ಜ್, ಮ್ಯಾಕ್ಸ್ (ಫರ್ಡಿನ್ಯಾಂಡ್) (1914--) ೧೯೬೨
ಆಸ್ಟ್ರಿಯಾ-ಬ್ರಿಟನ್-ಅಣ್ವಕ ಜೀವಶಾಸ್ತ್ರ- ಹಿಮೋಗ್ಲೋಬಿನ್‍ನ ರಚನೆ ನಿರ್ಧರಿಸಿದಾತ.
ಪೆರುಟ್ಜ್‍ನ ತಂದೆ, ತಾಯಿಗಳಿಬ್ಬರೂ ಜವಳಿ ಮಾರುವ ಕುಟುಂಬದ ಹಿನ್ನೆಲೆಯವರು. ವಿಯೆನ್ನಾದಲ್ಲಿ ರಸಾಯನಶಾಸ್ತ್ರ ಓದಿದ ಪೆರುಟ್ಜ್ 1936ರಲ್ಲಿ ಜೆ.ಡಿ. ಬರ್ನಲ್ ಮಾರ್ಗದರ್ಶನದಲ್ಲಿ ಸ್ಪಟಿಕಶಾಸ್ತ್ರದಲ್ಲಿ (Crystallography) ಸಂಶೋಧನೆ ಕೈಗೊಂಡು ಡಾಕ್ಟರೇಟ್ ಗಳಿಸಲು ಕೇಂಬ್ರಿಜ್‍ಗೆ ಹೋದನು. ಬ್ರಾಗ್ಸ್, ನಿರವಯವ ಸ್ಪಟಿಕಗಳ ಅಣುರಚನೆ ನಿರ್ಧರಿಸಲು ಕ್ಷ- ಕಿರಣ ವಕ್ರೀಭವನದ (Refraction) ವಿಧಾನಗಳನ್ನು ಬಳಸಿದ್ದನು. 1934ರಲ್ಲಿ ಪೆರುಟ್ಜ್, ಡೊರೊಥಿಕ್ರಾನ್’ಫ್ರಟ್ಸನ್’ನೊಂದಿಗೆ ಸಾವಯವ ಸ್ಪಟಿಕವಾದ ಪೆಪ್ಸಿನ್ ಒದ್ದೆಯಾದಾಗ ಕ್ಷ ಕಿರಣಗಳನ್ನು ವಕ್ರೀಭವನಗೊಳಿಸುವುದೆಂದು ತಿಳಿಸಿದನು. ಇದರಿಂದ ಬ್ರಾಗ್ಸ್‍ನ ಮಾರ್ಗದಲ್ಲೇ ಸಾವಯವ ಸ್ಪಟಿಕಗಳ ಅಣು ರಚನೆ ನಿರ್ಧರಿಸಬೇಕೆಂದು ಪೆರುಟ್ಜ್ ಉತ್ಸುಕನಾಗಿದ್ದನು. ಆದರೆ ಬರ್ನಲ್, ಪೆರುಟ್ಜ್’ಗೆ ಕೆಲವು ಖನಿಜಗಳ ಬಗೆಗೆ ಅಧ್ಯಯನ ಮಾಡಲು ಸೂಚಿಸಿದನು. 1937ರಲ್ಲಿ ಪೆರುಟ್ಜ್ ಹಿಮೋಗ್ಲೋಬಿನ್ ಸ್ಪಟಿಕಗಳನ್ನು ಪಡೆದು. ಇವುಗಳಿಂದ ಅತ್ಯುತ್ತಮ ಕ್ಷ-ಕಿರಣ ವಕ್ರೀಭವನದ ಮಾದರಿಗಳನ್ನು ಪಡೆದನು. ಹಿಮೋಗ್ಲೋಬಿನ್‍ಗಳು ಅಂಗಾಂಶಗಳಿಗೆ ಆಮ್ಲಜನಕವನ್ನು , ಶ್ವಾಸಕೋಶಗಳಿಗೆ ಇಂಗಾಲದ ಡೈ ಆಕ್ಸಡ್‍ನ್ನು ಹೊತ್ತೊಯ್ಯುವ ರಕ್ತದಪ್ರೋಟಿನ್‍ಗಳು. 1938ರಲ್ಲಿ ಪ್ರಾರಂಭವಾದ ಎರಡನೇ ಜಾಗತಿಕ ಯುದ್ದದಿಂದಾಗಿ ಪೆರುಟ್ಜ್‍ನ ಸಂಶೋಧನೆಗಳಿಗೆ ಅಡಚಣೆಗಳುಂಟಾದವು. 1947ರಲ್ಲಿ ಪೆರುಟ್ಜ್,ಕೇಂಬ್ರೀಜ್‍ನಲ್ಲಿದ್ದ ಮೆಡಿಕಲ್ ರಿಸರ್ಚ್ ಕೌನ್ಸಿಲ್ ಘಟಕದ ನಿರ್ದೇಶಕನಾದನು. ಇಲ್ಲಿ ಪೆರುಟ್ಜ್ ಹಾಗೂ ಆತನ ಸಹಾಯಕನಾದ ಜೆ.ಸಿ.ಕೆಂಡ್ರ್ಯೂ ಮಾತ್ರ ಇದ್ದರು. 1953ರಲ್ಲಿ ಪೆರುಟ್ಜ್ ಹಲವು ಕ್ಷ-ಕಿರಣ ವಕ್ರೀಭವನದ ಪಟಲಗಳನ್ನು ವಿಶ್ಲೇಷಿಸಿ, ಹಿಮೋಗ್ಲೋಬಿನ್‍ನ ರಾಚನಿಕ ಸ್ವರೂಪ ನಿರ್ಧರಿಸಿದನು. ಪೆರುಟ್ಜ್ ತನ್ನ ಸಂಗಡಿಗರೊಂದಿಗೆ ಮೃದ್ವಂಗಿಯ, ವೀರ್ಯಾಣುಗಳಾದ ಮೈಯೋಗ್ಲೋಬಿನ್‍ಗಳ ರಚನೆ ನಿರ್ಧರಿಸಿದನು. ಇವರ ಸಂಶೋಧನೆ ವೈರಸ್, ಪ್ರೊಟೀನ್, ಕಿಣ್ವಗಳ ಅಧ್ಯಯನಕ್ಕೂ ವಿಸ್ತರಿಸಿದರು. ಪೆರುಟ್ಜ್‍ನ ಮೆಡಿಕಲ್ ರಿಸರ್ಚ್ ಕೌನ್ಸಿಲ್ ವಿಶ್ವವಿಖ್ಯಾತವಾಗಿ ಈ ಕ್ಷೇತ್ರದ ಖ್ಯಾತರಾದ ಬ್ರೆನ್ನರ್, ಕ್ರಿಕ್, ಎಚ್.ಇ.ಹಕ್ಸಲಿ,ಮಿಲ್ಸ್‍ಟೀನ್, ಸ್ಯಾಂಜೆರ್‍ನಂತಹ ಖ್ಯಾತರನ್ನು ಆಕರ್ಷಿಸಿತು. 1962ರಲ್ಲಿ ಪೆರುಟ್ಜ್ ಕೆಂಡ್ರೂ ಜೊತೆಗೆ ನೊಬೆಲ್ ಪ್ರಶಸ್ತಿ ಪಡೆದನು. ಆಮ್ಲಜನಕ ಹೀರಿದಾಗ ಹಿಮೋಗ್ಲೋಬಿನ್‍ನಲ್ಲಿ ರಾಚನಿಕ ಸ್ವರೂಪ, ಅರ್ಜಿತ ರೋಗಗಳ ವಿಶ್ಲೇಷಣೆ, ಹಿಮಬಂಡೆಗಳ ಚಲನೆಯ ಅಧ್ಯಯನದಲ್ಲಿ ಕೆಲಕಾಲ ಪೆರುಟ್ಜ್ ಕ್ರಿಯಾಶೀಲನಾಗಿದ್ದನು. ಬ್ರಿಟನ್‍ನಲ್ಲಿ ಗರಿಷ್ಟ 24 ಜನರನ್ನು ಮಾತ್ರ ಹೊಂದಿರಬಹುದಾದ, ಅತಿ ಗೌರವಾನ್ವಿತ ಆರ್ಡರ್ ಆಫ್ ಮೆರಿಟ್ ನಲ್ಲಿ 1988ರಲ್ಲಿ ಪೆರುಟ್ಜ್ ಸೇರ್ಪಡೆಗೊಂಡನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/23/2020