ನಟ್ಟ, ಜೂಲ್ಯೊ (1903-1979) ೧೯೬೩
ಇಟಲಿ-ಪಾಲಿಮರ್ ರಸಾಯನಶಾಸ್ತ್ರ- ಸ್ಟೀರಿಯೋ ನಿರ್ದಿಷ್ಟ ಪಾಲೀಮರೀಕರಣ ಸಿದ್ಧಾಂತ ಅಭಿವೃದ್ದಿಗೊಳಿಸಿದಾತ.
ಮಿಲಾನ್ ಪಾಲಿಟೆಕ್ನಿಕ್‍ನಿಂದ ರಸಾಯನ ಇಂಜಿನಿಯರಿಂಗ್‍ನಲ್ಲಿ ಹಾಗೂ ಉಳಿದ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಡಿಪೆÇ್ಲಮೋ ಗಳಿಸಿದನು. 1938ರಲ್ಲಿ ಕೈಗಾರಿಕಾ ರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಅಧಿಕ ಒತ್ತಡಗಳಲ್ಲಿ ಜರುಗುವ ಸಾವಯವರಾಸಾಯನಿಕ ಕ್ರಿಯೆಗಳ ಔಷ್ಣೀಯ ಗತಿಶೀಲತೆಯಲ್ಲಿ (Thermodynamics)ನಟ್ಟನಿಗೆ ವಿಶೇಷ ಆಸಕ್ತಿಯಿದ್ದಿತು. ಕೈಗಾರಿಕೆ ಮಟ್ಟದಲ್ಲಿ ಮೆಥೆನಾಲ್ ತಯಾರಿಕೆ, ಮೆಥನಾಲ್‍ನಿಂದ ಫಾರ್ಮಾಲ್ ಡೀ ಹೈಡ್ ಪ್ರೊಪಿಲೀನ್ ಹಾಗೂ ಇಂಗಾಲದ ಮಾನಾಕ್ಸೈಡ್‍ನಿಂದ ಅಸಿಟಿಲೀನ್ ತಯಾರಿಕೆಯಲ್ಲಿ ನಟ್ಟನ ಸಂಶೋಧನೆಗಳೇ ಜೀವಾಳ .ಇಲ್ಲಿಂದ ಸಂಶ್ಲೇಷಿತ ರಬ್ಬರ್‍ಗಳ ತಯಾರಿಕೆಯ ಕಡೆ ಗಮನ ಹರಿಸಿದನು. ಕೆ. ಝೀಗ್ಲರ್ ವಿವರಿಸಿದಂತೆ ಆಲ್ಕೀನ್‍ಗಳ ಬಹ್ವಂಗೀಕರಣ (Polymerisation) ನಿರತನಾದನು. ಈ ಬಹ್ವಂಗೀಗಳು ಮೂರು ಆಯಾಮಗಳಲ್ಲಿ ಪುನರಾವೃತ್ತಿತ ರಾಚನಿಕ ಸ್ವರೂಪ ಹೊಂದಿರುವುದನ್ನು ತೋರಿಸಿದನು. ಈ ಬಹ್ವಂಗಿಗಳು ಕರಗುವ ಬಿಂದು ಅಧಿಕವಾಗಿದ್ದು, ಹೆಚ್ಚು ಸತ್ತ್ವಶೀಲವಾಗಿರುವುದರಿಂದ ವ್ಯಾವಹಾರಿಕ ಬಳಕೆಗೆ ಸಹಾಯಕವಾಗುತ್ತವೆ. ಅಚ್ಚುಗಳಿಂದ ಎರಕ ಹೊಯ್ಯಬಹುದಾದ ದೃಡ ಬಹ್ವಂಗಿಗಳನ್ನು ನಟ್ಟ ಸಂಶ್ಲೇಷಿಸಿದನು. ಈ ರಂಗದಲ್ಲಿ ನಟ್ಟ ಹಾಗೂ ಝೀಗ್ಲರ್ ರೂಪಿಸಿದ ವಿಧಾನಗಳು ಇಂದು ಇವುಗಳ ತಯಾರಿಕೆಯಲ್ಲಿ ಬಳಕೆಯಲ್ಲಿವೆ. 1963ರಲ್ಲಿ ನಟ್ಟ. ಝೀಗ್ಲರ್‍ನೊಂದಿಗೆ ನೊಬೆಲ್ ಪ್ರಶಸ್ತಿ ಫಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 11/24/2019