ಜಾನ್ , ಕೌಡೆರಿ ಕೆಂಡ್ರ್ಯೂ (1917-1997) ೧೯೬೨
ಇಂಗ್ಲೆಂಡ್-ರಸಾಯನಶಾಸ್ತ್ರ-ಮಯೋಗ್ಲೋಬಿನ್‍ನ ರಾಚನಿಕ ಸ್ವರೂಪ (Structural Form) ನಿರ್ಧರಿಸಿದಾತ.
24 ಮಾರ್ಚ್ 1917ರಂದು ಆಕ್ಸ್ಫರ್ಡ್’ನಲ್ಲಿ ಕೆಂಡ್ರ್ಯೂ ಜನನವಾಯಿತು. ಈತನ ತಂದೆ ಆಕ್ಸ್’ಫರ್ಡ್ ವಿಶ್ವವಿದ್ಯಾಲಯದ, ಪವನಶಾಸ್ತ್ರ ವಿಭಾಗದಲ್ಲಿ ಪ್ರವಾಚಕನಾಗಿದ್ದನು. ಆಕ್ಸ್ಫರ್ಡ್ ಡ್ರ್ಯಾಗನ್ ಸ್ಕೂಲ್, ಬ್ರಿಸ್ಟಲ್‍ನ ಕ್ಲಿಫ್ಟನ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ ಕೆಂಡ್ರ್ಯೂ 1939ರಲ್ಲಿ ಕೇಂಬ್ರಿಜ್‍ನಿಂದ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿದನು. ಇದಾದ ನಂತರ ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಕೇಂಬ್ರಿಜ್‍ನ ಭೌತ ರಸಾಯನಶಾಸ್ತ್ರ ವಿಭಾಗದಲ್ಲಿ ಕೆಲಕಾಲ ಸೇವೆ ಸಲ್ಲಿಸಿದನು. ವಾಯು ಸಚಿವಾಲಯದ ಸಂಶೋಧನಾ ಪ್ರತಿಷ್ಠಾನ ಸೇರಿದ ಕೆಂಡ್ರ್ಯೂ ರಡಾರ್‍ಗಳ ಅಭಿವೃದ್ದಿಯಲ್ಲೂ ಕೆಲಕಾಲವಿದ್ದನು. 1940ರಲ್ಲಿ ವಾಯು ಸಚಿವಾಲಯಕ್ಕೆ ಸಲಹಾ ಕೇಂದ್ರವಾಗಿದ್ದ ಸರ್ ರಾಬರ್ಟ್ ವ್ಯಾಟ್ಸನ್ ವ್ಯಾಟ್ ಸಂಸ್ಥೆಯ ಸಿಬ್ಬಂದಿಯಾದನು. ಯುದ್ದದ ಸಮಯದಲ್ಲಿ ವೈಜ್ಞಾನಿಕ ಸಲಹೆಗಾರನಾಗಿ ಸೇವೆ ಸಲ್ಲಿಸಿದನು. ವಿಂಗ್ ಕಮಾಂಡರ್ ಗೌರವ ಹುದ್ದೆಯನ್ನು ಸಹ ಕೆಂಡ್ರ್ಯೂ ಅಲಂಕರಿಸಿದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಜೆ.ಡಿ.ಬರ್ನೆಲ್ ಹಾಗೂ ಎಲ್.ಪೌಲಿಂಗ್ ಪ್ರಭಾವಕ್ಕೊಳಗಾಗಿ, ಜೀವರಸಾಯನಶಾಸ್ತ್ರದತ್ತ ಆಕರ್ಷಿತನಾಗಿ ಪ್ರೋಟಿನ್‍ಗಳ ಅಧ್ಯಯನ ಕೈಗೊಂಡನು. 1946ರಲ್ಲಿ ಕೇಂಬ್ರಿಜ್‍ನ ಕ್ಯಾವೆಂಡಿಷ್ ಪ್ರಯೋಗಾಲಯಕ್ಕೆ ಹಿಂದಿರುಗಿ ಮಾಕ್ಸ್‍ಪೆರುಟ್ಜ್ ಸಹಯೋಗದಲ್ಲಿ ಸರ್ ಲಾರೆನ್ಸ್ ಬ್ರಾಗ್‍ನ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದನು. ಕೆಂಡ್ರ್ಯೂ ಸಂಶೋಧನೆಗಳು ಪ್ರೋಟಿನ್'ಗಳ ರಾಚನಿಕ ಸ್ವರೂಪ, ಮಯೋಗ್ಲೋಬಿನ್‍ನ ಕ್ಷ-ಕಿರಣ ವಿಶ್ಲೇಷಣೆಗಳಲ್ಲಿ ಕೇಂದ್ರಿಕೃತವಾಗಿದ್ದವು. ಇದರ ¥sóÀಲವಾಗಿ 1957ರಲ್ಲಿ ಮಯೋಗ್ಲೋಬಿನ್‍ನ ಮೂರು ಆಯಾಮದ ಮಾದರಿ 60A ( (ಆ್ಯಂಗ್‍ಸ್ಟ್ರಾಮ್) ವಿಯೋಜನೆಯಲ್ಲಿ (Resolution) ಲಭ್ಯವಾಯಿತು. ಇದಕ್ಕಾಗಿ 1962ರ ರಾಸಾಯನಿಕ ಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಕೆಂಡ್ಯೂಗೆ ನೀಡಲಾಯಿತು. ಅವಿವಾಹಿತನಾಗಿ ಉಳಿದ ಕೆಂಡ್ರ್ಯೂ ಸಂಗೀತ, ಕಲಾ ಚರಿತ್ರೆಯಲ್ಲಿ ಅಧ್ಯಯನ ಪ್ರವಾಸಗಳಲ್ಲಿ ಅಭಿರುಚಿ ಹೊಂದಿದ್ದಾನೆ. ಕೆಂಡ್ರ್ಯೂ 1947ರಲ್ಲಿ, ಪೀಟರ್ ಹಾಸ್‍ನಫೆಲೋ 1954ರಲ್ಲಿ, ಲಂಡನ್‍ನ ಡೇವಿ ಫ್ಯಾರಡೆ ರಾಯಲ್ ಇನ್ಸ್ಟಿಟ್ಯೂಟ್‍ನ ಪ್ರವಾಚಕ, 1960ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಗೊಂಡನು. ಜರ್ನಲ್ ಆಫ್ ಮಾಲೆಕ್ಯುಲಾರ್ ಬಯೋಲಾಜಿ ಪತ್ರಿಕೆಯ ಸಂಸ್ಥಾಪಕ ಹಾಗೂ ಸಂಪಾದಕನಾಗಿಯೂ, ಕೆಂಡ್ರ್ಯೂ ಸೇವೆ ಸಲ್ಲಿಸಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 5/6/2020