ಓಡ್, ಹ್ಯಾಸೆಲ್ (1897--) ೧೯೬೯
ನಾರ್ವೆ-ರಸಾಯನಶಾಸ್ತ್ರ-ಅಣುಗಳ ಸಂರಚನೆ ನಿರ್ಧಾರದ ವಿಧಾನಗಳನ್ನು ರೂಪಿಸಿದಾತ.
ಓಡ್‍ನ ತಂದೆ ಓಸ್ಲೋ ಪಟ್ಟಣದಲ್ಲಿ ಸ್ತ್ರೀರೋಗ ತಜ್ಞನಾಗಿದ್ದನು. 17 ಮೇ 1897ರಂದು ಓಡ್‍ನ ಜನನವಾಯಿತು. 1920ರಲ್ಲಿ ಓಸ್ಲೋ ವಿಶ್ವವಿದ್ಯಾಲಯದಿಂದ ವಿಜ್ಞಾನದ ಪದª ಪಡೆದನು. 1922ರಲ್ಲಿ ಮ್ಯುನಿಕ್‍ನಲ್ಲಿ ¥sóÀüûಜನ್ಸ್‍ನ ಪ್ರಯೋಗಾಲಯದಲ್ಲಿ ಕೆಲಸ ಮಾಡಿದನು. ಇಲ್ಲಿರುವಾಗ ಸಾವಯವ ಬೆಳ್ಳಿ ಹ್ಯಾಲೈಡ್‍ಗಳ ಸಂವೇದೀಕರಣ ಕ್ರಿಯೆಯನ್ನು ಅಭ್ಯಸಿಸಿದನು. 1924ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದನು. 1934ರಲ್ಲಿ ಓಸ್ಲೋದಲ್ಲಿ ಮೊದಲ ಬಾರಿಗೆ ಪ್ರಾರಂಭವಾದ ಭೌತರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. ಓಡ್‍ನ ಆಸಕ್ತಿಗಳು ಸೈಕ್ಲೋ ಹೆಕ್ಸೇನ್ ಹಾಗೂ ಅದರ ಸಂಬಂಧಿಗಳ ಅದು ಸದಸ್ಯ ಉಂಗುರ ರಚನೆ ಅರಿಯುವಲ್ಲಿ ಕೇಂದ್ರೀಕೃತಗೊಂಡಿದ್ದವು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾದಾಗ ನಾಝಿಗಳು ಓಡ್‍ನನ್ನು ಬಂಧಿಸಿದರು. 1944ರಲ್ಲಿ ಓಡ್ ಬಿಡುಗಡೆಗೊಂಡಾಗ, ಆತನ ಸಂಸ್ಥೆ ವಿನಾಶದ ಅಂಚಿನಲ್ಲಿದ್ದಿತು. 1950ರ ನಂತರ ಅಣುಗಳ ರಚನೆಯನ್ನು ಅರಿಯಲು ಹೊಸ ವಿಧಾನಗಳನ್ನು ರೂಪಿಸಿದನು. ಇದಕ್ಕಾಗಿ ಓಡ್ 1969ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/14/2019