অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹೆಯ್‍ರೋವ್ಸ್'ಕಿ , ಜೆರೋಸ್ಲೊವ್ (1890--)

ಹೆಯ್‍ರೋವ್ಸ್'ಕಿ , ಜೆರೋಸ್ಲೊವ್ (1890--)

ಹೆಯ್‍ರೋವ್ಸ್'ಕಿ , ಜೆರೋಸ್ಲೊವ್ (1890--)

ಝೆಕೆಸ್ಲೋವಾಕಿಯಾ-ಭೌತ ರಸಾಯನಶಾಸ್ತ್ರ ಧೃವಾಲೇಖ ಉಪಜ್ಞಿಸಿದಾತ. 

ಜೆರೋಸ್ಲೊವ್‍ನ  ತಂದೆ , ಝೆಕ್ ವಿಶ್ವವಿದ್ಯಾಲಯದಲ್ಲಿ ಕಾನೂನಿನ ಪ್ರಾಧ್ಯಾಪಕನಾಗಿದ್ದನು.  ಈತನ ಐದು ಮಕ್ಕಳಲ್ಲಿ ಕೊನೆಯವನಾಗಿ 20 ಡಿಸೆಂಬರ್ 1890ರಲ್ಲಿ ಜೆರೋಸ್ಲೊವ್ ಜನಿಸಿದನು.  ಪ್ರಾಗ್‍ನಲ್ಲಿ ವಿಜ್ಞಾನದ ಶಿಕ್ಷಣ ಪಡೆದು, ಲಂಡನ್ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಸರ್ ವಿಲಿಯಂ ರ್ಯಾಮ್ಸೆ ಹಾಗೂ ಡೋನಾರ್‍ರ ಕೆಳಗೆ ಹೆಚ್ಚಿನ ಶಿಕ್ಷಣ ಗಳಿಸಿ, ವೈದ್ಯುತ್ ರಸಾಯನಶಾಸ್ತ್ರದಲ್ಲಿ ಪರಿಣಿತಿ ಗಳಿಸಿದನು.  ನಂತರ ಪ್ರಾಗ್‍ನ ಚಾರ್ಲ್ಸ್ ವಿಶ್ವವಿದ್ಯಾಲಯದಲ್ಲಿ ವೈಶ್ಲೇಷಿಕ ರಸಾಯನಶಾಸ್ತ್ರ ಸಂಸ್ಥೆ ಸೇರಿದನು.  1926ರಲ್ಲಿ ಇಲ್ಲಿಯೇ ಮೊದಲ ಭೌತರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. 1922ರ ವೇಳೆಗೆ ವೈದ್ಯುತ್ ರಸಾಯನಶಾಸ್ತ್ರದಲ್ಲಿ ಧೃವಾಲೇಖ ವೈಶ್ಲೇಷಿಕ ವಿಧಾನವನ್ನು ಬಳಸತೊಡಗಿ, ಮುಂದೆ ಇದರ ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡನು. ಇದಕ್ಕಾಗಿ 1959ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.  1955ರಲ್ಲಿ ಬೆಂಗಳೂರಿನಲ್ಲಿರುವ ಇಂಡಿಯನ್ ಅಕಾಡೆಮಿ ಆಫ್ಸೈಯನ್ಸ್ ಜೆರೋಸ್ಲೊವ್‍ಗೆ ಗೌರವ ಪ್ರಾಧ್ಯಾಪಕ ಹುದ್ದೆ ಹಾಗೂ ಸದಸ್ಯತ ನೀಡಿ ಸನ್ಮಾನಿಸಿದೆ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 1/31/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate