ಹಿನ್ಷೆಲ್‍ವುಡ್,. ಸರ್ ಸೈರಿಲ್(ನಾರ್ಮನ್) (1897-1967)
ಬ್ರಿಟನ್-ಭೌತರಸಾಯನಶಾಸ್ತ್ರ-ಬ್ಯಾಕ್ಟೀರಿಯಾಗಳ ಬೆಳವಣಿಗೆಯಲ್ಲಿ ರಾಸಾಯನಿಕ ಕ್ರಿಯಾಗತಿಯ ಪ್ರಭಾವಗಳನ್ನು ವಿವರಿಸಿದಾತ.
ಹಿನ್ಷೆಲ್‍ವುಡ್ ತನ್ನ ಜೀವಿತದ ಬಹು ಕಾಲವನ್ನು ಆಕ್ಸ್ಫರ್ಡ್‍ನಲ್ಲಿ ಕಳೆದನು. 1916ರಲ್ಲಿ ಮೊದಲ ಜಾಗತಿಕ ಯುದ್ದ ನಡೆದಾಗ, ಶಸ್ತಾಸ್ತ್ರ ಇಲಾಖೆಯಲ್ಲಿ ಕೆಲಸಕ್ಕಿದ್ದನು. ಹಿನ್ಷೆಲ್‍ವುಡ್ ಘನ ಹಾಗೂ ಅನಿಲಗಳ ಸ್ಫೋಟಕ ಪ್ರತಿಕ್ರಿಯೆಗಳ ಬಗೆಗೆ ಆಸಕ್ತಿ ಹೊಂದಿದ್ದನು. ಜಲಜನಕ, ಆಮ್ಲಜನಕಗಳ ಪ್ರತಿಕ್ರಿಯೆಗಳನ್ನು ಕುರಿತಾಗಿ ನಿಕಟ ಅಧ್ಯಯನ ನಡೆಸಿದ ಹಿನ್ಷೆಲ್‍ವುಡ್ 1956ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಬ್ಯಾಕ್ಟೀರಿಯಾಗಳ ಬೆಳವಣಿಗೆಯಲ್ಲಿ ರಾಸಾಯನಿಕ ಕ್ರಿಯಾಗತಿಯ ಪ್ರಭಾವಗಳನ್ನು ಹಿನ್ಷೆಲ್‍ವುಡ್ ನೀಡಿದನು. ಹಿನ್ಷೆಲ್‍ವುಡ್ ಭಾಷಾ ಶಾಸ್ತ್ರûಜ್ಞನಾಗಿದ್ದನು. ರಾಯಲ್ ಸೊಸೈಟಿ ಮತ್ತು ಕ್ಲಾಸಿಕಲ್ ಅಸೋಸಿಯೇಷನ್‍ನ ಎರಡೂ ಸಂಸ್ಥೆಗಳ ಅಧ್ಯಕ್ಷನಾಗಿದ್ದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/28/2020