অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸೀಬೊರ್ಗ್, ಗ್ಲೆನ್ ಥಿಯೋಡೋರ್

ಸೀಬೊರ್ಗ್, ಗ್ಲೆನ್ ಥಿಯೋಡೋರ್

ಸೀಬೊರ್ಗ್, ಗ್ಲೆನ್ ಥಿಯೋಡೋರ್ (1912--) ೧೯೫೧

ಅಸಂಸಂ-ಬೈಜಿಕ ರಸಾಯನಶಾಸ್ತ್ರ- ಯುರೇನಿಯಂ ಪಾ(Trans Uranium) ಧಾತುಗಳನ್ನು (Elements) ಅನಾವರಣಗೊಳಿಸಿದಾತ.

1937ರಲ್ಲಿ ಸೀಬೊರ್ಗ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು.  ಸೀಬೊರ್ಗ, ಲೆವಿಸ್ ಜೊತೆ ಕೆಲಸ ಮಾಡಿ. ಬೋಧಕ ಸಿಬ್ಬಂದಿಯಾಗಿ1945ರಲ್ಲಿ ಪ್ರಾಧ್ಯಾಪಕನಾದನು.  ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಸರ್ಕಾರದ ಕೆಲಸದ ಮೇಲೆ ನಿಯೋಜಿತನಾಗಿದ್ದನು. 1961 ರಿಂ1971 ರವರೆಗೆ ಅಸಂಸಂಗಳ ಅಟಾಮಿಕ್ ಎನರ್ಜಿ ಕಮಿಷನ್ ಕಾರ್ಯದರ್ಶಿಯಾಗಿದ್ದನು. ನೈಸರ್ಗಿಕವಾಗಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವ ಭಾರ ಧಾತುವೆಂದರೆ ಯುರೇನಿಯಂ. ಇದರ ಪರಮಾಣುತೂಕ 92.  1930ರಲ್ಲಿ ಹಲವಾರು ಸಂಶೋಧನ ತಂಡಗಳು ನ್ಯೂಟ್ರಾನ್‍ಗಳಿಂದ ಯುರೇನಿಯಂ ತಾಡಿಸಿ ಪ್ರಯೋಗದ ಫಲಿತಾಂಶಗಳನ್ನು ಅಧ್ಯಯನ ಮಾಡಿದರು.  ಹಾಗೂ ಪ್ರಯೋಗಗಳಲ್ಲಿ ಯುರೇನಿಯಂಗಿಂತಲೂ ಅಧಿಕ ಭಾರದ ಯುರೇಯಂ ಪಾರ (Trans Uranium) ಧಾತುಗಳು ಲಭಿಸಿದವೆಂದು ಭಾವಿಸಿದರು. 1939ರಲ್ಲಿ ಲಿಸಾ ಮೀಟ್‍ನರ್ ಹಾಗೂ ಫ್ರಿಷ್ಕ್ ಯುರೇನಿಯಂ ತಾಡನಕ್ಕೆ ಬಳಸಿದ ನ್ಯೂಟ್ರಾನ್‍ನ್ನು ಹೀರಿಕೊಂಡು, ಮಧ್ಯಮ ತೂಕದ ಒಂದಕ್ಕಿಂತ ಹೆಚ್ಚು ಧಾತುಗಳಾಗಿ ಒಡೆಯುವುದೆಂದು ತೋರಿಸಿದರು.  ಆದರೆ 1940ರಲ್ಲಿ ಮ್ಯಾಕ್‍ಮಿಲನ್ ಮತ್ತು ಪಿ.ಅಬೆಲ್‍ಸನ್ ಯುರೇನಿಯಂ ಪಾರ ಧಾತುಗಳನ್ನು ಪಡೆಯುವುದು ಸಾಧ್ಯವೆಂದು ಹೇಳಿದರು.  ನ್ಯೂಟ್ರಾನ್‍ನಿಂದ ತಾಡಿತವಾದ ಯುರೇನಿಯಂನ ಎಲ್ಲ ಪರಮಾಣುಗಳು ವಿಭಜನೆ ಹೊಂದದೆ,ಅದರಲ್ಲಿ ಕೆಲವು ಯುರೇನಿಯಂಗಿಂತಲೂ ಅಧಿಕ ತೂಕದ ಧಾತುಗಳಾಗುವುವೆಂದು  ವಾದಿಸಿದರು. ಇಂತಹ ಮೊದಲ ಧಾತು ಪತ್ತೆಯಾದಾಗ, ಅದನ್ನು ನೆಪ್ಚೂನಿಯಂ ಎಂದು ಕರೆಯಲಾಯಿತು.1940ರಿಂದ ಸೀಬೊರ್ಗ್ ಇಂತಹ ಧಾತುಗಳ ಹುಡುಕಾಟ ಪ್ರಾರಂಭಿಸಿದನು.  ಅಲ್ಪ ಕಾಲದಲ್ಲೇ ನೆಪ್ಚೂನಿಯಂ ಸಮಸ್ಥಾನಿ (Isotope)ಪಡೆಯುವ ವಿಧಾನ ಜಾರಿಗೆ ತಂದು ಯುರೇನಿಯಂಪಾರ ಧಾತುಗಳ ಅಧ್ಯಯನಕ್ಕೆ ನಾಂದಿ ಹಾಡಿದನು.  ಸೀಬೋರ್ಗ್ ಹಾಗೂ ಸಂಗಡಿಗರ ಶ್ರಮದ ಫಲವಾಗಿ , ಅಣುಸಂಖ್ಯೆ 94 ಹೊಂದಿರುವ ಪ್ಲುಟೋನಿಯಂನಿಂದ ಹಿಡಿದು,ಪರಮಾಣು ತೂಕ 102 ಇರುವ ನೊಬೆಲಿಯಂ ತನಕ ಒಂಬತ್ತು ಹೊಸ ಧಾತುಗಳು ಪತ್ತೆಯಾದವು. ಈ ಪ್ರಯೋಗಗಳಿಗೆ ಸೈಕ್ಲೋಟ್ರಾನ್ ಸಾಧನ ಬಳಕೆಯಾಯಿತು. ಈ ಧಾತುಗಳ ರಾಸಾಯನಿಕ ಗುಣ ಹಾಗೂ ಪರಮಾಣು ಅಸ್ತ್ರದ ತಯಾರಿಕೆಯ ಸಾಧ್ಯತೆಗಳ ಅಧ್ಯಯನಕ್ಕೆ ಪ್ರಾಧಾನ್ಯತೆ ಗಳಿಸಿತು. ಇವೆಲ್ಲವುದರ ಫಲವಾಗಿ 1945ರಲ್ಲಿ ಒಂದು ಯುರೇನಿಯಂ ಹಾಗೂ ಇನ್ನೊಂದು ಪ್ಲುಟೋನಿಯಂ ಸರಣಿ ಪ್ರತಿಕ್ರಿಯೆ ಹೊಂದಿದ ಪರಮಾಣು ಅಸ್ತ್ರಗಳು ಜಪಾನಿನ ಮೇಲೆ ಪ್ರಯೋಗ ಕಂಡವು. 1944ರಲ್ಲಿ ಸೀಬೊರ್ಗ್ ಪರಮಾಣು ಸಂಖ್ಯೆ 89ರಿಂದ ಹೆಚ್ಚಿನ ಪರಮಾಣು ತೂಕದ ಧಾತುಗಳು ಆವರ್ತಕೋಷ್ಟಕದಲ್ಲಿ ಒಂದು ನಿರ್ದಿಷ್ಟ ವರ್ಗಗಳಾಗುವುವೆಂದು ತೋರಿಸಿದನು.  ಈಗ ಇವನ್ನು ಅತ್ತಿನೈಡ್ಸ್ ಎಂದು ಹೆಸರಿಸಲಾಗಿದೆ.  ಇವೆಲ್ಲ ಧಾತುಗಳೂ ವಿಕಿರಣಶೀಲವಾಗಿವೆ.  ಪರಮಾಣು ಸಂಖ್ಯೆ 93ರ ಆಚೆಗಿನ ಧಾತುಗಳು ನಿಸರ್ಗದಲ್ಲಿ ಬಹು ಅಪರೂಪವಾಗಿದ್ದು, ಅವುಗಳ ಕುರುಹು ಮಾತ್ರ ದಕ್ಕುತ್ತದೆ.  ಸೀಬೊರ್ಗ್ ಹಾಗೂ ಮ್ಯಾಕ್ ಮಿಲನ್1951ರ ನೊಬೆಲ್ ಪ್ರಶಸ್ತಿ ಪಡೆದರು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 1/31/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate