অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಲಿಬ್ಬಿ, ವಿಲ್ಲಾರ್ಡ್ ಫ್ರಾಂಕ್ (1908-1980) 1960

ಲಿಬ್ಬಿ, ವಿಲ್ಲಾರ್ಡ್ ಫ್ರಾಂಕ್ (1908-1980) 1960

ಲಿಬ್ಬಿ, ವಿಲ್ಲಾರ್ಡ್ ಫ್ರಾಂಕ್ (1908-1980) ೧೯೬೦

ಅಸಂಸಂ-ರಸಾಯನಶಾಸ್ತ್ರ-  ವಿಕಿರಣ ಇಂಗಾಲ ತೇದೀಕರಣ (Radio Carbon Dating) ತಂತ್ರ ರೂಪಿಸಿದಾತ.

ಲಿಬ್ಬಿ, ಕ್ಯಾಲಿಫೋರ್ನಿಯಾ ವಿಶ್ಬವಿದ್ಯಾಲಯದಲ್ಲಿ ಬೋಧಕ ಸಿಬ್ಬಂದಿಯಾಗಿ 1941ರವರೆಗೆ ಸೇವೆ ಸಲ್ಲಿಸಿದನು,. ಇದರ ನಂತರ ಬೈಜಿಕಾಸ್ತ್ರ ತಯಾರಿಸಲು ಅಸಂಸಂ ಸರ್ಕಾರ ಹಮ್ಮಿಕೊಂಡಿದ್ದ ಮ್ಯಾನ್‍ಹಟ್ಟನ್ ಪರಿಯೋಜನೆಯಲ್ಲಿ ಭಾಗವಹಿಸಿದನು, ಎರಡನೇ ಜಾಗತಿಕ ಯುದ್ದದ ನಂತರ ಲಿಬ್ಬಿ ಚಿಕಾಗೋ ವಿಶ್ವವಿದ್ಯಾಲಯದ ಬೈಜಿಕ ಅಧ್ಯಯನ ವಿಭಾಗ ಸೇರಿ1959ರಲ್ಲಿ ಕ್ಯಾಲಿಫೋರ್ನಿಯಾಕ್ಕೆ ಹೋಗಿ ನೆಲೆಸಿದನು. 1939ರಲ್ಲಿ ಸೆರ್ಜೆ ಕಾರ್ಫ್, ಇಂಗಾಲದ ವಿಕಿರಣ ಸಮಸ್ಥಾನಿಯಾದ (Isotope) ಇಂಗಾಲ-14ನ್ನು ಅನಾವರಣಗೊಳಿಸಿ , ಈ ಸಮಸ್ಥಾನಿಯ ಅರ್ಧಾಯು (Half Life) 5730 ವರ್ಷಗಳೆಂದು ತೋರಿಸಿದ್ದನು.  ಮೇಲಿನ ವಾತಾವರಣದಲ್ಲಿರುವ  ಸಾರಜನಕ ಪರಮಾಣುಗಳ ಮೇಲೆ ವಿಶ್ವ ಕಿರಣಗಳ ತಾಡನದಿಂದ(Cosmic Ray Bombardmnet) ಈ ಸಮಸ್ಥಾನಿ ಉತ್ಪನ್ನಗೊಳ್ಳುವುದೆಂದು ಲೆವಿಸ್ ಖಚಿತಗೊಳಿಸಿದ್ದನು.  ಇದರಿಂದಾಗಿ ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್‍ನಲ್ಲೂ ಅಲ್ಪ ಪ್ರಮಾಣದ ಇಂಗಾಲ-14 ಇರುತ್ತದೆ. ದ್ಯುತಿಸಂಶ್ಲೇಷಣೆಯಿಂದಾಗಿ (Photosynthesis) ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್ ಸಸ್ಯಗಳಲ್ಲಿ ಅಂತರ್ಗತವಾಗುತ್ತದೆ. ಇದರಿಂದಾಗಿ ಸಸ್ಯಗಳ ಕೋಶಗಳಲ್ಲಿ ಇಂಗಾಲ-14 ಇರುತ್ತದೆ. 1947ರಲ್ಲಿ ಲಿಬ್ಬಿ  ಹಾಗೂ ಸಂಗಡಿಗರು ಈ ಸಮಸ್ಥಾನಿಯ ಆಧಾರದ ಮೇಲೆ ಸಾವಯವ ಆಕರಗಳ ಕಾಲ ನಿರ್ಧರಿಸಿ ತೇದೀಕರಣ ಮಾಡುವ ತಂತ್ರ ರೂಪಿಸಿದರು.  ಇದು ಪ್ರಾಕ್ತನಶಾಸ್ತ್ರ ಹಾಗೂ ಭೂಗರ್ಭ ಚರಿತ್ರೆಯಲ್ಲಿ ಮಹಾನ್ ಕ್ರಾಂತಿ ತಂದಿತು. ವಾತಾವರಣದಲ್ಲಿ ಇಂಗಾಲ-12 ಹಾಗೂ ಇಂಗಾಲ-14 ಸರಿಸುಮಾರು ಒಂದೇ ಪ್ರಮಾಣದಲ್ಲಿರುತ್ತವೆ.  ಜೈವಿಕ ಸಾಮಾಗ್ರಿಗಳೂ ಸಹ ಇಂಗಾಲ-12 ಮತ್ತು ಇಂಗಾಲ-14ನ್ನು ಹೊಂದಿರುತ್ತವೆ.  ಜೀವಿ ಮರಣ ಹೊಂದಿದ ಕ್ಷಣದಿಂದ ಅದು ವಾತಾವರಣದಿಂದ ಇಂಗಾಲದ ಡೈ ಆಕ್ಸೈಡ್‍ನ್ನು ಪಡೆಯುವುದು ನಿಂತು ಹೋಗುತ್ತದೆ.  ಈ ಸ್ಥಿತಿಯಲ್ಲಿ ಇಂಗಾಲ-14 ವಿಕಿರಣಪಟುತ್ವ ಶೈಥಿಲ್ಯ ಹೊಂದತೊಡಗುತ್ತದೆ.  ಇದರ ಪರಿಣಾಮವಾಗಿ ಸತ್ತ ಜೀವಿಯ  ಅವಶೇಷಗಳಲ್ಲಿನ ಕಾರ್ಬನ್-14, ಕಾರ್ಬನ್-12ರ ಪ್ರಮಾಣ ಇಳಿಮುಖವಾಗುತ್ತಾ ಹೋಗುತ್ತದೆ.  ಇದನ್ನು ಪರಿಗಣಿಸಿ ಪ್ರಾಣಿ ಅವಸಾನ ಹೊಂದಿದ ಕಾಲವನ್ನು ನಿರ್ಧರಿಸಬಹುದು.  ಸಾಕಷ್ಟು ಕರಾರುವಕ್ಕಾಗಿ,ನಲವತ್ತು ಸಾವಿರ ವರ್ಷದ  ಅವಧಿಯವರೆಗಿನ ಸಾವಯವ ವಸ್ತುಗಳ ಕಾಲವನ್ನು ಈ ತಂತ್ರದಿಂದ ನಿರ್ಧರಿಸಬಹುದು.  ವಿಶ್ವ ಕಿರಣಗಳ ಪರಿಣಾಮವಾಗಿ ವಾತಾವರಣದ ಜಲಜನಕ ಒಂದು ಅಂಶ ಟೈಟ್ರಿಯಂಗ್ ಆಗಿ ಪರಿವರ್ತನೆಗೊಳ್ಳುತ್ತದೆ. ಮಳೆಯ ಮೂಲಕ ನೆಲಕ್ಕಿಳಿದು , ಅಂತರ್ಜಲದಲ್ಲಿರುತ್ತದೆಯೆಂದು ತೋರಿಸಿದನು. ಲಿಬ್ಬಿ ಈ ಶೋಧನೆಗಾಗಿ 1960ರ ನೊಬೆಲ್ ಪ್ರಶಸ್ತಿ ಪಡೆದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 1/31/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate