ನಿಕೊಲಾಯ್, ನಿಕೊಲೆವಿಕ್ ಸೆಮೆನೊವ್ (1896-1986) ೧೯೫೬
ರಷ್ಯಾ-ರಸಾಯನಶಾಸ್ತ್ರ-ರಾಸಾಯನಿಕ ಕ್ರಿಯೆಗಳನ್ನು ಕುರಿತಾಗಿ ಗಮನಾರ್ಹ ಸಾಧನೆ ಮಾಡಿದಾತ.
ಸೆಮೆನೊವ್ 3 ಏಪ್ರಿಲ್ 1896ರಂದು ಸರಾಟೊವ್‍ನಲ್ಲಿ ಜನಿಸಿದನು. 1917ರಲ್ಲಿ ಪೆಟ್ರೋಗ್ರಾಡ್ ವಿಶ್ವವಿದ್ಯಾಲಯದಿಂದ ಪದವಿ ಗಳಿಸಿದ ಸೆಮೆನೊವ್, 1920ರಲ್ಲಿ ಲೆನಿನ್‍ಗ್ಯಾಡ್‍ನ ಫಿûಸಿಕೋ ಟೆಕ್ನಿಕಲ್ ಇನ್ಸ್ಟಿಟ್ಯೂಟ್‍ನ ಎಲೆಕ್ಟ್ರಾನ್ ಪರಿಣಾಮ ಅಧ್ಯಯನ ಪ್ರಯೋಗಾಲಯದ ಉಸ್ತುವಾರಿ ವಹಿಸಿಕೊಂಡನು. ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಉಪನ್ಯಾಸಕನಾಗಿ ಸೇರಿಕೊಂಡ ಸೆಮೆನೊವ್ 1925ರಲ್ಲಿ ಪ್ರಾಧ್ಯಾಪಕನಾದನು. 1931ರಲ್ಲಿ ರಷ್ಯಾದ ಅಕಾಡೆಮಿ ಆಫ್ಸೈನ್ಸ್‍ಗೆ ಸೇರಿದ ಇನ್ಸ್ಟಿಟ್ಯೂಟ್ ಆಫ್ಕೆಮಿಕಲ್ ಫಿûಸಿಕ್ಸ್‍ನ ನಿರ್ದೇಶಕನಾದನು. 1943ರಲ್ಲಿ ಇದನ್ನು ಮಾಸ್ಕೋಗೆ ಸ್ಥಳಾಂತರಿಸಲಾಯಿತು. 1944ರಲ್ಲಿ ಸೆಮೆನೊವ್ ಮಾಸ್ಕೋ ರಾಜ್ಯದ “ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. ಸೆಮಿನೊವ್ ಹಲವಾರು ಬಗೆಯ ರಾಸಾಯನಿಕ ಕ್ರಿಯೆಗಳನ್ನು ಸರಣಿ ಸಿದ್ಧಾಂತದಿಂದ ವಿವರಿಸಿದನು. ಇದು ವಸ್ತುವಿನ ದಹನ ಕ್ರಿಯೆಯನ್ನು ಖಚಿತವಾಗಿ ಅರಿಯುವಂತೆ ಮಾಡಿತು. ಸೆಮೆನೊವ್ ಅಣ್ವಯಿಕ ಭೌತಶಾಸ್ತ್ರ, ಎಲೆಕ್ಟ್ರಾನ್,ವಿದ್ಯಾಮಾನ ಪತನ (Diaelectric Breakdown)ಹಾಗೂ ಆಸ್ಪೋಟದ ಅಲೆಗಳ ಪ್ರಸಾರದ ಬಗೆಗೂ ಗಮನಾರ್ಹ ಅಧ್ಯಯನಗಳನ್ನು ನಡೆಸಿದ್ದಾನೆ. ಈ ಕುರಿತಾಗಿ ಎರಡು ಪ್ರಸಿದ್ಧ ಕೃತಿಗಳನ್ನು ಸೆಮೆನೊವ್ 1934ರಲ್ಲಿ ಪ್ರಕಟಿಸಿದನು. ರಾಸಾಯನಿಕ ಕ್ರಿಯೆಗಳನ್ನು ಕುರಿತು ನಡೆಸಿದ ಸಂಶೋಧನೆಗಳಿಗಾಗಿ ಸೆಮೆನೊವ್ 1956ರ ನೊಬೆಲ್ ಪ್ರಶಸ್ತಿ ಗಳಿಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/18/2020