ಡು ವಿನಾಯ್,ವಿನ್ಸೆಂಟ್ (1901-1978 ) ೧೯೫೫
ಅಸಂಸಂ-ಜೀವ ರಸಾಯನಶಾಸ್ತ್ರ-ಗಂಧಕ ಹೊಂದಿದ ವಿಟಮಿನ್ ಹಾಗೂ ಚೋದನಿಕೆಗಳ (Hormones) ಮೇಲೆ ಸಂಶೋಧನೆ ನಡೆಸಿದಾತ.
ಇಲಿನಾಯ್‍ನಲ್ಲಿ ರಸಾಯನಶಾಸ್ತ್ರದ ವಿದ್ಯಾರ್ಥಿಯಾಗಿದ್ದ ವಿನ್ಸೆಂಟ್, ಅಸಂಸಂ ಹಾಗೂ ಬ್ರಿಟನ್‍ಗಳಲ್ಲಿ ಸಂಶೋಧನೆ ಪ್ರಾರಂಭಿಸಿ ನಂತರ, ಜೀವ ರಸಾಯನಶಾಸ್ತ್ರದತ್ತ ವಾಲಿದನು. 1938 ರಿಂದ ಕಾರ್ನೆಲ್ ಮೆಡಿಕಲ್ ಸ್ಕೂಲ್‍ನ ಮುಖ್ಯಸ್ಥನಾದ ನಂತರ, ವಿನ್ಸೆಂಟ್ ಸಂಶೋಧನೆಗಳೆಲ್ಲವೂ ಗಂಧಕದ ಸುತ್ತ ಗಿರಕಿ ಹೊಡೆದವು. 1920ರಲ್ಲಿ ವಿನ್ಸೆಂಟ್ ಇನ್ಸುಲಿನ್ ಚೋದನಿಕೆಯ ಮೇಲೆ ಅಧ್ಯಯನ ನಡೆಸಿದಾಗ ಅದರಲ್ಲಿ ಗಂಧಕದ ಇರುವಿನ ಪ್ರಾಮುಖ್ಯತೆ ಅರಿವಿಗೆ ಬಂದಿತು. 1941ರಲ್ಲಿ ವಿನ್ಸೆಂಟ್ ಯಕೃತ್ತಿನಿಂದ ವಿಟಮಿನ್-ಹೆಚ್‍ನ್ನು ಪ್ರತ್ಯೇಕಿಸಿ, ಅದು ಬೆಳವಣಿಗೆಯನ್ನು ನಿರ್ಧರಿಸುವ ಬಯೋಟಿನ್‍ನ್ನು ಹೋಲುತ್ತದೆಯೆಂದು ತೋರಿಸಿದನು. 1936ರಲ್ಲಿ ಎಫ್.ಕೋಗ್ಲ್, 250ಕೆ.ಜಿ. ಒಣಗಿದ ಬಾತುಕೋಳಿಯ ಮೊಟ್ಟೆಗಳಿಂದ 1 ಮಿಲಿಗ್ರಾಂ ಬಯೋಟಿನನ್ನು ಪ್ರತ್ಯೇಕಿಸಿದನು. 1942ರಲ್ಲಿ ವಿನ್ಸೆಂಟ್ ಬಯೋಟಿನ್‍ನ ಸಂಪೂರ್ಣ ರಚನೆಯನ್ನು ವಿವರಿಸಿದನು. ಮುಂದೆ ವಿನ್ಸೆಂಟ್ ಸಸ್ತನಿಗಳಲ್ಲಿ ಹೆರಿಗೆ ನೋವನ್ನು ಹಾಗೂ ಹಾ¯ಲ ಸ್ರವಿಕೆಯನ್ನು ಪ್ರಚೋದಿಸುವ ಪಿಟ್ಯುಟರಿ ಜೋದನಿಕೆಗಳಾದ ಆಕ್ಸಿಟಾಸಿನ್ ಹಾಗೂ ವ್ಯಾಸೋಸ್ರಿಸಿನ್ ಬಗ್ಗೆ ಅಧ್ಯಯನ ನಡೆಸಿ, 1953ರಲ್ಲಿ ಅಸೆಟಾಸಿನ್ ಸಂಶ್ಲೇಷಿಸಿದನು. 8 ಅಮೈನೋ ಆಮ್ಲಗಳನ್ನು ಹೊಂದಿದ, ಅಕ್ಸಿಟಾಸಿನ್ ಮಾನವನಿಂದ ಸಂಶ್ಲೇಷಿಸಲ್ಪಟ್ಟ ಮೊದಲ ಸಕ್ರಿಯ ಪಾಲಿಪೆಪ್ಟೈಡ್ ಎಂದು ಗುರುತಿಸಲ್ಪಟ್ಟಿದೆ. ವಿನ್ಸೆಂಟ್‍ನ ನಿರ್ದಿಷ್ಟ ಸಾಧನೆ ಹಾಗೂ ಜೀವ ರಸಾಯನಶಾಸ್ತ್ರದಲ್ಲಿನ ಪರಿಶ್ರಮವನ್ನು ಗುರುತಿಸಿ 1955ರಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/6/2020