ಟಾಡ್, ಸರ್ ಅಲೆಗ್ಸಾಂಡರ್, ರಾಬರ್ಟಸ್ (1907--) ೧೯೫೭
ಬ್ರಿಟನ್- ಜೀವರಸಾಯನಶಾಸ್ತ್ರ-ನ್ಯೂಕ್ಲಿಯೋಟೈಡ್‍ಗಳ ಸಹ ಕಿಣ್ವಗಳನ್ನು (Coenzymes) ಸಂಶೋಧಿಸಿದಾತ.
1907 ಅಕ್ಟೋಬರ್ 2ರಂದು ಟಾಡ್ ಸ್ಕಾಟ್ಲೆಂಡಿನ ಗ್ಲಾಸ್ಗೋದಲ್ಲಿ ಜನಿಸಿದನು. ಗ್ಲಾಸ್ಗೋ ವಿಶ್ವವಿದ್ಯಾಲಯ ಸೇರಿ ಅಲ್ಲಿಂದ 1927ರಲ್ಲಿ ಪದವಿ ಗಳಿಸಿದನು. 1928-29ರಲ್ಲಿ ಗ್ಲಾಸ್ಗೋ, 1929-31ರವರೆಗೆ ಫ್ರಾಂಕ್’ಫರ್ಟ್, 1931ರಿಂದ 1934ರವರೆಗೆ ಎಡಿನ್‍ಬರೋ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳನ್ನು ನಡೆಸಿದನು. 1936ರಲ್ಲಿ ಲಿಸ್ಟರ್ ಇನ್ಸ್ಟಿಟ್ಯೂಟ್, 1937ರಲ್ಲಿ ಲಂಡನ್ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕನಾದನು. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯಗಳಲ್ಲಿ ನ್ಯೂಕ್ಲಿಯೋಟೈಡ್‍ಗಳು ಹಾಗೂ ಅವುಗಳ ಫಾಸ್ಪರೀಕರಣಗಳ ಬಗೆಗೆ ಅಧ್ಯಯನ ಪ್ರಾರಂಭಿಸಿದನು. 1944ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯ ಸೇರಿದ ಟಾಡ್ ಅಲ್ಲಿ ಈ ಸಂಶೋಧನೆಗಳನ್ನು ಮುಂದುವರೆಸಿ ತೀವ್ರಗೊಳಿಸಿದನು. 1942ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದನು. ಟಾಡ್ ಬಿ-1 ಮತ್ತು ಇ , ವಿಟಮಿನ್‍ಗಳ ರಾಚನಿಕ ಸ್ವರೂಪ ನಿರ್ಧರಿಸಿ, ಅವುಗಳನ್ನು ಸಂಶ್ಲೇಷಿಸಿದನು. ಕೀಟಗಳಲ್ಲಿನ ವರ್ಣ ದ್ರವ್ಯ , ಸಸ್ಯಗಳ ಅಲ್ಕಲಾಯಿಡ್, ಸಸ್ಯಗಳ ಬಣ್ಣಗಳಿಗೆ ಕಾರಣಗಳಾದ ಅಂತೋಸಯನಿನ್, ಕ್ವಿನೋನ್‍ಗಳ ರಚನೆಯ ಬಗೆಗೂ ಟಾಡ್ ಸಂಶೋಧಿಸಿದನು. ನ್ಯೂಕ್ಲಿಯರ್ ಆಮ್ಲಗಳು ಜೀವಿಗಳ ವಂಶಾನುಗತ ಗುಣಗಳನ್ನು ವರ್ಗಾಂತರಿಸಿ,ಅವುಗಳನ್ನು ಕ್ರೀಯಶೀಲಗೊಳಿಸುವಲ್ಲಿ ಅನನ್ಯ ಪಾತ್ರ ವಹಿಸುತ್ತವೆ. ಇವುಗಳ ಬಗೆಗೆ ಟಾಡ್ ನಡೆಸಿದ ಸಂಶೋಧನೆಗಳು ಜೀವ ರಸಾಯನಶಾಸ್ತ್ರಕ್ಕೆ ಅಪಾರ ಕೊಡುಗೆಯನ್ನಿತ್ತಿತ್ತು. ಜೀವಿಗಳಲ್ಲಿ ಶಕ್ತಿಯನ್ನು ಪ್ರೇರಿಸಿ, ಚಲಾವಣೆಗೊಳಿಸುವ ಅಡೆನೊಸಿನ್ ಡೈ ¥sóÁಸ್ಪೇಟ್ ಮತ್ತು ಅಡೆನೊಸಿನ್ ಟ್ರೈ¥sóÁಸ್ಪೇಟ್ ಹಾಗೂ ಯುರಿಡಿನ್ ಟ್ರೈ ಫಾಸ್ಪೇಟ್ ಹಾಗೂ ಫ್ಲೇವಿನ್ ಡೈನ್ಯೂಕ್ಲಿಯೋಡೈಡ್ ಮೊದಲಿಗೆ ಸಂಶ್ಲೇಷಿಸಿದ ಕೀರ್ತಿ ಟಾಡ್‍ಗೆ ಸಲ್ಲುತ್ತದೆ. ಇದಕ್ಕಾಗಿ ಹಾಗೂ ನ್ಯೂಕ್ಲಿಯೋಟೈಡ್‍ಗಳ ಸಹ –ಕಿಣ್ವಗಳ ಸಂಶೋಧನೆಗಾಗಿ ಟಾಡ್‍ಗೆ 1957ರ ನೊಬೆಲ್ ಪ್ರಶಸ್ತಿ ದಕ್ಕಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/4/2019