ಎಡ್ವಿನ್ ,ಮ್ಯಾಟಿಸನ್ ಮೆಕ್‍ಮಿಲನ್ (1908--) ೧೯೫೧
ಅಸಂಸಂ-ಭೌತಶಾಸ್ತ್ರ- ಪಾರಯುರೇನಿಯಂ (Transuranium) ಧಾತುಗಳನ್ನು ಕುರಿತಾಗಿ ಸಂಶೋಧಿಸಿದಾತ.
ಎಡ್ವಿನ್ ಪೂರ್ವಿಕರು ಸ್ಕಾಟ್‍ಲ್ಯಾಂಡ್‍ನಿಂದ ಬಂದು ಅಸಂಸಂದಲ್ಲಿ ನೆಲೆಸಿದ್ದರು. ಈತನ ತಂದೆ ವೈದ್ಯನಾಗಿದ್ದನು. 18 ಸೆಪ್ಟೆಂಬರ್ 1907 ರಂದು ಕ್ಯಾಲಿಫೊರ್ನಿಯಾದ ರೆಡೆಂಡೋ ಬೀಚ್‍ನಲ್ಲಿ ಎಡ್ವಿನ್ ಜನಿಸಿದನು. 1928ರಲ್ಲಿ ಕ್ಯಾಲಿಪೆÇೀರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದನು. ಅಣ್ವಯಿಕ ದೂಲ ವಿಧಾನದಲ್ಲಿ ಪ್ರೊಟಾನ್‍ನ ಕಾಂತೀಯ ಭ್ರಾಮ್ಯತೆ ಅಳೆಯುವುದನ್ನು ಕುರಿತಾಗಿ ಸಂಪ್ರಬಂದ ವiಂಡಿಸಿ ಡಾಕ್ಟರೇಟ್ ಗಳಿಸಿದನು. ರಾಷ್ಟ್ರೀಯ ವಿಕಿರಣ ಪ್ರಯೋಗಾಲಯದಲ್ಲಿ ಕೆಲಸಕ್ಕೆ ಸೇರಿದ ಎಡ್ವಿನ್, ಬೈಜಿಕ ಕ್ರಿಯೆ ಹಾಗೂ ಅದರ ಉತ್ಪನ್ನಗಳ ಅಧ್ಯಯನದಲ್ಲಿ ಬಹು ಮುಖ್ಯ ಪ್ರಾಯೋಗಿಕ ಉಪಕರಣವಾದ ಸೈಕ್ಲೋಟ್ರಾನ್ ನಿರ್ಮಾಣದಲ್ಲಿ ಭಾಗಿಯಾದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ 1940ರಿಂದ 1945ರವರೆಗೆ ರಾಷ್ಟ್ರೀಯ ರಕ್ಷಣಾ ಸಂಶೋಧನೆಯಲ್ಲಿ ನಿಯೋಜಿತನಾದನು. 1945ರ ಅವಧಿಯಲ್ಲಿ ಪ್ರಾವಸ್ಥೆ ಸ್ಥಿರತೆ (Phase Stability) ಪರಿಕಲ್ಪನೆಯ ಮೇಲೆ ಸಿಂಕ್ರೋಟಾನ್ ಹಾಗೂ ಸಿಂಕ್ರೋಸೈಕ್ಲೋಟ್ರಾನ್ ನಿರ್ಮಿಸುವ ಯೋಚನೆಯನ್ನು ಎಡ್ವನ್ ವಿವರಿಸಿದನು. ಮುಂದೆ ಈ ಉಪಕರಣಗಳ ನಿರ್ಮಾಣವಾಗಿ ಹಲವಾರು ಹೊಸ ಸಂಶೋದನೆಗಳು ಜರುಗಿದವು. ಯುರೇನಿಯಂಮಾಂತರ ಧಾತುಗಳನ್ನು ಕುರಿತಾದ ಸಂಶೋಧನೆಗಳಿಗಾಗಿ ಎಡ್ವಿನ್ 1951ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/27/2020