ಆರ್ಚರ್ , (ಜಾನ್ ಪೋರ್ಟರ್) ಮಾರ್ಟಿನ್ ೧೯೫೨
ಬ್ರಿಟನ್-ಜೀವ ರಸಾಯನಶಾಸ್ತ್ರ-ಹಾಳೆ ವರ್ಣಾಲೇಖ ವಿಧಾನದ (Paper Chromatography) ಸಹ ಅನಾವರಣಕಾರ.
ಮಾರ್ಟಿನ್, 1932ರಲ್ಲಿ ಕೇಂಬ್ರಿಜ್‍ನಿಂದ ಜೀವಶಾಸ್ತ್ರದಲ್ಲಿ ಪದವಿ ಪಡೆದು, 1938ರಲ್ಲಿ ವಿಟಮಿನ್‍ಗಳ ಮೇಲೆ ಸಂಪ್ರಂಬಂಧ ಮಂಡಿಸಿ, ಡಾಕ್ಟರೇಟ್, ಪಡೆದನು. ಲೀಡ್ಸ್‍ನ ವೂಲ್ ಇಂಡಸ್ಟ್ರೀಸ್ ರಿಸರ್ಚ್ ಅಸೋಸಿ0iÉುೀಷನ್ ಸೇರಿ, ಅಲ್ಲಿ ಅರ್.ಎಲ್.ಎಮ್.ಸೈಂಜೆ ಜೊತೆಗೂಡಿ, ಸಂಕೀರ್ಣ ಅಮೈನೋ ಆಮ್ಲಗಳ ಬೇರ್ಪಡಿಸಿಕೆಗೆ ಯತ್ನಿಸತೊಡಗಿದನು. ಇಲ್ಲಿ ವಿಭಜೀಕರಣ ವರ್ಣಾಲೇಖ ವಿಧಾನವನ್ನು ಅಭಿವೃದ್ದಿಗೊಳಿಸಿದನು. ಇದು ಅಮೈನೋ ಆಮ್ಲಗಳನ್ನು ಘಟಕಗಳಾಗಿ ಪ್ರತ್ಯೇಕಿಸುವ ಅತ್ಯಂತ ಸರಳತಮ ಕ್ರಾಂತಿಕಾರಕ ಹೆಜ್ಜೆಯಾಯಿತು. 1948ರಿಂದ ಮೆಡಿಕಲ್ ರಿಸರ್ಚ್ ಕೌನ್ಸಿಲ್‍ನ ಸಿಬ್ಬಂದಿಯಾದ ಮಾರ್ಟಿನ್ 1953ರಿಂದ ಅನಿಲ-ದ್ರವ ವರ್ಣಾಲೇಖ ವಿಧಾನ ಕುರಿತು ಸಂಶೋಧನೆ ನಡೆಸಿದನು. ಮಾರ್ಟಿನ್ ಹಾಗೂ ಸೈಂಜ್, 1952ರ ನೊಬೆಲ್ ಪ್ರಶಸ್ತಿ ಪಡೆದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 1/31/2020