ಹೆವಿಸೆ, ಗೈಯೊರ್ಜಿ –(1885-1966)
ಹಂಗರಿ-ಸ್ವಿಟ್ಸರ್ಲ್ಯಾಂಡ್-ರೇಡಿಯೋ ರಸಾಯನಶಾಸ್ತ್ರ- ವೈಶ್ಲೇಷಿಕ ವಿಧಾನಗಳಲ್ಲಿ ವಿಕಿರಣಪಟು ಟ್ರೇಲರ್ಗಳನ್ನು ಪರಿಚಯಿಸಿದಾತ.
ಹೆವಿಸ್, ಏಳು ದೇಶಗಳ ಒಂಬತ್ತು ಸಂಶೋಧನಾ ಕೇಂದ್ರಗಳಲ್ಲಿ ದುಡಿದ ಚಲನಶೀಲ ವ್ಯಕ್ತಿ. 1911ರಲ್ಲಿ ರುದರ್’ಫೋರ್ಡ್ ಜೊತೆಗೆ ಕೆಲಸ ಮಾಡಲು ಹೆವಿಸ್ ಮ್ಯಾಂಚೆಸ್ಟರ್‍ಗೆ ಹೋದನು. ಇಲ್ಲಿ ಹೆವಿಸ್, ರೇಡಿಯೋ ರಸಾಯನಶಾಸ್ತ್ರದಲ್ಲಿಆಸಕ್ತಿ ತಳೆದನು. ಮ್ಯಾಂಚೆಸ್ಟರ್‍ನಲ್ಲಿರುವಾಗ ಸಾಧಾರಣ ಸೀಸ ಮತ್ತು ರೇಡಿಯಂ-ಡಿ ಯನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲವೆಂದು ಹೆವಿಸ್‍ಗೆ ತಿಳಿಯಿತು. ರೇಡಿಯಂ-ಡಿ ಸೀಸದ ಸಮಸ್ಥಾನಿ (Isotope) ಆಗಿರುವ್ಯದರಿಂದ ಅದರ ಪ್ರತ್ಯೆಕತೆ ಅಸಾಧ್ಯವೆಂದು ಅವನಿಗೆ ಮನದಟ್ಟಾಯಿತು. ರೇಡಿಯಂ-ಡಿ ವಿಕಿರಣಶೀಲ ಧಾತು ಅತ್ಯಲ್ಪ ಪ್ರಮಾಣದಲ್ಲಿ ಸೀಸವಿದ್ದಾಗ ಸಾಂಪ್ರದಾಯಿಕ ವಿಧಾನಗಳಿಂದ ಅದನ್ನು ಪತ್ತೆ ಹಚ್ಚುವುದು ಕ್ಲಿಷ್ಟಕರ ಹಾಗೂ ಹಲವೊಮ್ಮೆ ಅಸಾಧ್ಯ. ಇಂತಹ ಸಂದರ್ಭದಲ್ಲಿ ಸೀಸದೊಂದಿಗೆ, ರೇಡಿಯಂ-ಡಿಯನ್ನು ಮಿಶ್ರಗೊಳಿಸಿದರೆ ರೇಡಿಯೋ ವಿಕಿರಣದ ಸಾಧ್ಯತೆಯಿಂದ ಅದರ ಕುರುಹನ್ನು ಪಡೆಯಬಹುದು. ಸೀಸದ ಸಲ್ಪೈಡ್ ಮತ್ತು ಸೀಸದ ಕ್ರೋಮೇಟ್ ನೀರಿನಲ್ಲಿ ಗುರುತಿಸಲಾಗದಷ್ಟು ಅಲ್ಪ ಮಟ್ಟದಲ್ಲಿ ಕರಗುತ್ತವೆ. ಹೆವಿಸ್ ಮತ್ತು ಎಫ್.ಎ. ಪನೆತ್, ಇವಕ್ಕೆ ರೇಡಿಯಂ-ಡಿ ಮಿಶ್ರಗೊಳಿಸಿ, ಅವು ನೀರಿನಲ್ಲಿ ಕರಗುವ ಸೂಕ್ಷ್ಮ ಪ್ರಮಾಣವನ್ನು ನಿರ್ಧರಿಸಿದರು. 1934ರಲ್ಲಿ ಗೋಲ್ಡ್’ಷಿಪ್ ನೀರಿನ ವಿನಿಮಯ ಪ್ರಮಾಣ ಅಳೆಯಲು, ಡ್ಯುಟೋರಿಯಂ ಸಮಸ್ಥಾನಿ ಬಳಸಿ ಅದರಲ್ಲಿ ಯಶಸ್ಸನ್ನು ಕಂಡನು. ಹೆವಿಸ್, ರೇಡಿಯೋ ಫಾಸ್ಪೇಟ್ ಬಳಸಿ ಮಾನವನ ಅಂಗಾಂಶಗಳಲ್ಲಿ ಹೀರುವಿಕೆ ಹೇಗೆ ಜರುಗುತ್ತದೆಯೆಂದು ನಿರ್ಧರಿಸಿದನು. ರೇಡಿಯೋ ಸಮಸ್ಥಾನಿಗಳನ್ನು ಬಳಸಿ ನಾನಾ ಬಗೆಯ ಕ್ರಿಯಾ ವಿಶ್ಲೇಷಣೆ ನಡೆಸುವುದು ಈಗ ಅಂಗೀಕೃತ ವಿಧಾನವಾಗಿದೆ. 1922ರಲ್ಲಿ ಬೊಹ್ರ್, ಹೊಸದೊಂದು ಧಾತುವಿನ ಅಸ್ತಿತ್ವ ಸಾರಿ, ಅದನ್ನು ಝಿರ್ಕೋನಿಯಂ ಖನಿಜಗಳಲ್ಲಿ ಶೋಧಿಸಬೇಕೆಂದು ಹೆವಿಸ್‍ಗೆ ಸೂಚಿಸಿದನು. ಇದಕ್ಕಾಗಿ ಹೆವಿಸ್, ಮೋಸ್ಲೆಯ ಸಹಾಯ ಪಡೆದನು. ಮೋಸ್ಲೆ , ಕ್ಷ ಕಿರಣದ ವಿಧಾನಗಳಲ್ಲಿ ಪರಿಣಿತನಾಗಿದ್ದನು. ದೋಸ್ಲೆಯ ಸಹಾಯದಿಂದ, ಹೆವಿಸ್, 72 ಅಣು ಸಂಖ್ಯೆಯ ಹೊಸ ಧಾತುವಿನ ಅನಾವರಣಗೊಳಿಸಿದನು. ಈ ಧಾತುವನ್ನು ಹಾಷ್ನಿಯಂ ಎಂದು ಹೆಸರಿಸಲಾಗಿದೆ. 1943ರಲ್ಲಿ ಹೆವಿಸ್ ರೇಡಿಯಂ ಜಾಡು (Tracing)
ಹಿಡಿಯುವ ವಿಧಾನ ರೂಪಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 1/28/2020