অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಾನ್, ಒಟ್ಟೋ

ಹಾನ್, ಒಟ್ಟೋ

ಹಾನ್, ಒಟ್ಟೋ (1875-1968)

ಜರ್ಮನಿ-ವಿಕಿರಣ ರಸಾಯನಶಾಸ್ತ್ರ-
ಹಾನ್ ವಾಸ್ತುಶಿಲ್ಪಿಯಾಗಲು ಬಯಸಿದ್ದನು. ಆದರೆ ಅವನಿಗೆ ರಸಾಯನಶಾಸ್ತ್ರದೆಡೆ ಇದ್ದ ಸೆಳೆತ ಅದಕ್ಕಿಂತಲೂ ಪ್ರಬಲವಾಗಿದ್ದಿತು,  1904ರಲ್ಲಿ ಅರು ತಿಂಗಳುಗಳ ಕಾಲ ಲಂಡನ್‍ನಲ್ಲಿದ್ದ ಹಾನ್. ರಾಮ್ಸೆಯ ಮಾರ್ಗದರ್ಶನದಲ್ಲಿ ವಿಕಿರಣ ರಸಾಯನಶಾಸ್ತ್ರದಲ್ಲಿ ಪ್ರಥವi ಹೆಜ್ಜೆಗಳನ್ನಿರಿಸಿದನು. 1905ರಲ್ಲಿ ಹಾನ್, ಮಾಂಟ್ರಿಯಲ್‍ನಲ್ಲಿ ರುದರ್’ಫೋರ್ಡ್ ಜೊತೆಗೆ ಹಲವಾರು ಸಂಶೋಧನೆ ಕೈಗೊಂಡಿದ್ದನು. 1906ರಲ್ಲಿ ಹಾನ್, ಬರ್ಲಿನ್‍ನಲ್ಲಿ ನೌಕರಿಗೆ ಸೇರಿದನು.  ಇಲ್ಲಿ ಲಿಸಾ ಮೀಟನರ್’ ಈತನಿಗೆ ಸಹೋದ್ಯೋಗಿಯಾಗಿದ್ದಳು.  ಇಲ್ಲಿ ಸರ್ವ ಪುರುಷ ಪ್ರಯೋಗಾಲಯಗಳಿಗೆ, ಸ್ತ್ರೀಯಾಗಿದ್ದ ಲಿಸಾ ಮೀಟನರ್’ಗೆ ಪ್ರವೇಶವಿರಲಿಲ್ಲವಲ್ಲದೆ ಪ್ರತ್ಯೇಕ ವಿಕಿರಣ ಶಾಸ್ತ್ರದ ವಿಭಾಗವೂ ಇರಲಿಲ್ಲ.  ಮುಂದಿನ ಕೆಲ ದಿನಗಳಲ್ಲಿ ಹೊಸ ವಿಭಾಗದ ಪ್ರಾರಂಭದೊಡನೆ ಹಾನ್ ಸಮಸ್ಯೆ ಪರಿಹಾರಗೊಂಡಿತು.  ಇಲ್ಲಿ ಹಾನ್ ರಸಾಯನಶಾಸ್ತ್ರದಲ್ಲಿ ಸಂಶೋಧನೆ ಪ್ರಾರಂಭಿಸಿದರೆ, ಲಿಸಾ ಮೀಟ್‍ನರ್ ಭೌತಶಾಸûಜ್ಞಳಾಗಿ ಅವನಿಗೆ ಬೆಂಬಲ ನೀಡಿದಳು.  ಇವರ ಸಹಚರ್ಯ ಮುಂದಿನ 30 ವರ್ಷಗಳವರೆಗೆ ಅವಿರತವಾಗಿ ಸಾಗಿತು. 1912ರಲ್ಲಿ ನ್ಯೂ ಕೈಸರ್ ವಿಲ್‍ಹೆಲ್ಮ್ ಸಂಸ್ಥೆ , ಬರ್ಲಿನ್-ದಹ್ಲೆಮ್‍ನಲ್ಲಿ  ಪ್ರಾರಂಭವಾಯಿತು. ಇಲ್ಲಿ ಹಾನ್ ರೇಡಿಯೋ ರಸಾಯನಶಾಸ್ತ್ರದ ಮುಖ್ಯಸ್ಥನಾಗಿ ನೇಮಕಗೊಂಡನು.  ಇಲ್ಲಿ ಹಾನ್ ಬಹು ಕ್ಷೀಣ ವಿಕಿರಣಶೀಲ, ಬೀಟ-ಉತ್ಸರ್ಜನೆ ಹೊಂದಿದ ಪೆÇಟ್ಯಾಶಿಯಂ ರುಬಿಡಿಯಂ ಮೇಲೆ ಅಧ್ಯಯನ ಪ್ರಾರಂಭಿಸಿದನು.  ಕಾಲಾನುಕ್ರಮದಲ್ಲಿ ಹಾನ್ ಸ್ಟ್ರಾನ್‍ಷಿಯಮ್‍ನ ಸಮಸ್ಥಾನಿಯಾದ (Isotope) ರುಬಿಡಿಯಂ ಶೈಥಿಲ್ಯ (Decay) ಹೊಂದಿರುವುದನ್ನು ಗುರುತಿಸಿ,ಈ ಮೂಲಕ ಹಲವಾರು ಖನಿಜ ನೀಕ್ಷೆಪಗಳ ಅವಧಿಯನ್ನು ನಿರ್ಧರಿಸಬಹುದೆಂದು ತೋರಿಸಿದನು.  ಪೆÇಟ್ಯಾಷಿಯಂ, ಶ್ಶೆಥಿಲ್ಯದಿಂದ ಆರ್ಗಾನ್‍ಗೆ ಪರಿವರ್ತನೆ ಹೊಂದುವುದನ್ನು ಹಾನ್ ಗುರುತಿಸಿದನು.  ಮೊದಲನೆ ಜಾಗತಿಕ ಯುದ್ದದಲ್ಲಿ ಹಾನ್ ವಿಷಾನಿಲಗಳ ಸಂಶೋಧನೆಗೆ ನಿಯೋಜಿತನಾದರೆ, ಲಿಸಾ ಮೀಟನರ್ ದಾದಿಯಾಗಿ ಕಾರ್ಯ ನಿರ್ವಹಿಸಿದಳು.  ಈ ಸಮಯದಲ್ಲಿ ದಕ್ಕುತ್ತಿದ್ದ ರಜಾ ಕಾಲದಲ್ಲಿ ಇವರಿಬ್ಬರೂ, ಪ್ರೋಟೋಆಕ್ವೀನಿಯಂ ಎಂಬ ವಿಕಿರಣಧಾತುವನ್ನು ಅನಾವರಣಗೊಳಿಸಿದರು. ಕೆಲವು ನಿಧಾನ ಗತಿಯ ನ್ಯೂಟ್ರಾನ್‍ಗಳನ್ನು ಅಣು  ಬೀಜಗಳಿಂದ ಸೆರೆಹಿಡಿದು. ಭಾರವಾದ ಧಾತುಗಳನ್ನು ಪಡೆಯಲು ಸಾಧ್ಯವೆಂದು ಎನ್ರಿಕೊ ಪರ್ಮಿ ತಿಳಿಸಿದ್ದನು.  ಇದರ ಬಗ್ಗೆ 1934ರಲ್ಲಿ ಹಾನ್‍ಆಸಕ್ತಿ ತಳೆದನು.  ಹಾನ್ , ಲಿಸಾ ಮೀಟ್‍ನರ್ ಮತ್ತು ಎಫ್ .ಸ್ಟ್ರಾಸ್‍ಮನ್ ಸೇರಿ, ಯುರೇನಿಯಂ ಮೇಲೆ ಈ ಕುರಿತು ಅಧ್ಯಯನ ಪ್ರಾರಂಭಿಸಿದರು. 1938ರಲ್ಲಿ ಯಹೂದಿ ವಿರೋಧಿ ಅಲೆ ಜರ್ಮನಿಯಲ್ಲಿ ಭುಗಿಲೆದ್ದಿತು. ಲಿಸಾ ಮೀಟನರ್ ಯಹೂದಿಯಾಗಿದ್ದುದರಿಂದ,. ಅದರ ಜ್ವಾಲೆ ಅವಳಿಗೆ ತೀವ್ರವಾಗಿ ತಾಗಿತು.  ಇದರಿಂದಾಗಿ, ಲಿಸಾ ಮೀಟನರ್, ಹಾನ್‍ನ ನೆರವಿನಿಂದ ಸ್ವೀಡನ್‍ಗೆ ಹೋಗಿ ನೆಲೆಸಿದಳು.  ಹಾನ್ , ತನ್ನ ಸಂಶೋಧನೆಯ ಪ್ರಯೋಗದ ಫಲಿತಾಂಶಗಳನ್ನು ಸ್ವೀಡನ್‍ನಲ್ಲಿದ್ದ ಲಿಸಾ ಮೀಟನರ್’ಗೆ ಕಳಿಸಿದನು. ಲಿಸಾ ಮೀಟನರ್ ತನ್ನ ಸಂಬಂಧಿ ಒಟ್ಟೋ ಫಿಷರ್’ನೊಂದಿಗೆ ಇವನ್ನು ವಿಶ್ಲೇಷಿಸಿ,ಬೈಜಿಕ ವಿದಳನ (Nuclear Fission) ಪ್ರಯೋಗಗಳಲ್ಲಿ ಘಟಿಸಿರುವುದು ನಿಜವಾದರೂ, ಹಾನ್ ಅವುಗಳಿಗೆ ನೀಡಿದ ವಿವರಣೆ ಅಪೂರ್ಣವೆಂದು ತೋರಿಸಿದಳು.  ಎರಡನೆ ಜಾಗತಿಕ ಯುದ್ದದಲ್ಲಿ ಜರ್ಮನಿ ಅಣ್ವಸ್ತ್ರ ತಯಾರಿಕೆಯ ಪ್ರಯತ್ನಕ್ಕಿಳಿಯಿತು.  ಹಾನ್ ಈ ಯೋಜನೆಯಿಂದ ಹೊರಗುಳಿದನು. ಎರಡನೇ ಜಾಗತಿಕ ಯುದ್ದದ ಅಂತ್ಯದಲ್ಲಿ ಜರ್ಮನಿ ಸೋತು , ಹಾನ್, ಲವೆ, ಹೈಸೆನ್‍ಬರ್ಗ್‍ನಂತಹ ಖ್ಯಾತರನ್ನು ಸೆರೆಹಿಡಿದು ಅಸಂಸಂಗಳಿಗೆ ಒಯ್ಯಲಾಯಿತು. ಹಾನ್ ಅಸಂಸಂದಲ್ಲಿ ಸೆರೆಯಲ್ಲಿರುವಾಗ, ಹಿರೋಷಿಮಾ, ನಾಗಸಾಕಿಗಳ ಮೇಲೆ ಅಣ್ವಸ್ತ್ರ ಪ್ರಯೋಗಗೊಂಡಿದ್ದು ತಿಳಿಯಿತು. ಸಾಮೂಹಿಕ ವಿನಾಶಕ ಅಸ್ತ್ರದ ಹಿನ್ನೆಲೆಯಲ್ಲಿ ತನ್ನದೂ ಪರೋಕ್ಷ ಪಾತ್ರವಿದೆಯೆಂದು ನೊಂದ ಹಾನ್ ಆತ್ಮಹತ್ಯೆಗೆ ಯತ್ನಿಸಿ ವಿಲನಾದನು.  ಎರಡನೇ ಜಾಗತಿಕ ಯುದ್ದದ  ನಂತರ ಹಾನ್, ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಶ್ರಮಿಸಿದನು. 1944ರಲ್ಲಿ ಹಾನ್ ವಿಕಿರಣ ರಸಾಯನಶಾಸ್ತ್ರದಲ್ಲಿನ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ದಕ್ಕಿತು.  ಹಾನ್, ಲಿಸಾ ಮೀಟನರ್ ಸ್ಮರಣೆಗಾಗಿ ಬರ್ಲಿನ್‍ನಲ್ಲಿ  ಹಾನ್ ಲಿಸಾ ಮೀಟನರ್ ಇನ್ನ್ಟಿಟಿಟ್ಯೂಟ್  ಅ¥sóï ನ್ಯೂಕ್ಲಿಯರ್ ರಿಸರ್ಚ್ ಪ್ರಾರಂಭಗೊಂಡಿದೆ.  ಜರ್ಮನಿಯ ಮೊದಲ ಬೈಜಿಕ ಶಕ್ತಿ ಚಾಲಿತ ಹಡಗಿಗೆ ಒಟ್ಟೋ ಹಾನ್ ಎಂದು ಹೆಸರಿಸಲಾಗಿದೆ.  ಇಂಟರ್ ನ್ಯಾಷನಲ್ ಯೂನಿಮನ್ ಆಫ್ ಪ್ಯೂರ್ ಅಂಡ್ ಅಪ್ಲೈಡ್ ಕೆಮಿಸ್ಟ್ರಿ 1994ರಲ್ಲಿ 108ನೇ ಧಾತುವಿಗೆ ಹಾನಿಯಂ ಎಂದು ಹೆಸರಿಸಿ, ಹಾನ್‍ಗೆ ಗೌರವ ಸಲ್ಲಿಸಿದೆ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 7/23/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate