ರಾಬಿನ್ಸನ್, ಸರ್ ರಾಬರ್ಟ್ (1886-1975) ೧೯೪೭
ಬ್ರಿಟನ್-ಸಾವಯವ ರಸಾಯನಶಾಸ್ತ್ರ- ಸಾವಯವ ರಸಾಯನಶಾಸ್ತ್ರದಲ್ಲಿ ಎಲೆಕ್ಟ್ರಾನಿಕ್ ಸಿದ್ಧಾಂತ ನೀಡಿದಾತ.
ರಾಬಿನ್ಸನ್, ವೈದ್ಯಕೀಯ ಉಪಕರಣ ತಯಾರಿಸುವ ಶ್ರೀಮಂತ ಕುಟುಂಬದಲ್ಲಿ ಜನಿಸಿದನು. ಚೇಂಬರ್ಸ್‍ನ್‍ನ ಸೈಕ್ಲೋಪೀಡಿಯಾ ಆಧರಿಸಿ ಬ್ಲೀಚಿಂಗ್ ಕೆಲಸ ಪ್ರಾರಂಭಿಸಬೇಕೆಂದು ಆತನ ತಂದೆ ಸೂಚಿಸಿದ್ದನು. ಗಣಿತದಲ್ಲಿ ಆಸಕ್ತಿಯಿದ್ದರೂ ತಂದೆಯ ಒತ್ತಾಯಕ್ಕೆ ರಾಬಿನ್ಸನ್ ಮಣಿದನು. ರಾಬಿನ್ಸನ್ ಮ್ಯಾಂಚೆಸ್ಟರ್‍ನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿ , ಸೇಂಟ್ ಅ್ಯಂಡ್ರೂಸ್ ,ಲಿವರ್ ಪೂಲ್, ಮ್ಯಾಂಚೆಸ್ಟರ್, ಲಂಡನ್ ಹಾಗೂ ಸಿಡ್ನಿಗಳಲ್ಲಿ ಪ್ರಾಧ್ಯಾಪಕನಾಗಿದ್ದನು. ಐಸಿಐ ಹಾಗೂ ಷೆಲ್ ಕಂಪನಿಗಳ ಸಂಪರ್ಕವೂ ರಾಬಿನ್ಸನ್‍ಗಿದ್ದಿತು. 700ಕ್ಕೂ ಅಧಿಕ ಲೇಖನಗಳನ್ನು ರಾಬಿನ್ಸನ್ ಪ್ರಕಟಿಸಿದನು. ಇದರಲ್ಲಿ ಇಪ್ಪತ್ತು ಲೇಖನಗಳು ರಾಬಿನ್ಸ್‍ನ್ 80 ವರ್ಷದವನಾದ ನಂತರ ಹೊರಬಂದಂತಹವು,. 32 ಏಕ ಸ್ವಾಮ್ಯಗಳೂ ರಾಬಿನ್ಸ್‍ನ್ ಮುಡಿಯಲ್ಲಿದ್ದವು. ನೈಸರ್ಗಿಕ ರಾಸಾಯನಿಕಗಳ ಬಗೆಗೆ ಅಧಿಕೃತವಾಣಿಯಾಗಿದ್ದ ರಾಬಿನ್ಸನ್ ಬ್ರೆಝಿಲಿಯನ್, ಅಂಥೊಸೈನಿನ್ಸ್ ಹಾಗೂ ಅಲ್ಕಲಾಯಿಡ್ಸ್‍ಗಳಲ್ಲಿ ತಜ್ಞನಾಗಿದ್ದನು. 1960ರವರೆಗೆ ರಾಸಾಯನಿಕ ಸಂಶ್ಲೇಷಣೆಗೆ ಅತ್ಯಾಧುನಿಕ ಯಂತ್ರ ಹಾಗೂ ವಿಧಾನಗಳು ಬರುವವರೆಗೆ ರಾಬಿನ್ಸ್‍ನ್ ಸಾಧನೆಗಳು ಉತ್ತುಂಗ ಶಿಖರದಲ್ಲಿದ್ದವು. ರಾಬಿನ್ಸನ್ ನೈಸರ್ಗಿಕ ರಾಸಾಯನಿಕಗಳ ರಾಚನಿಕ ಸ್ವರೂಪ ಹಾಗೂ ಅವುಗಳ ಕೃತಕ ಸಂಶ್ಲೇಷಣೆಯಲ್ಲಿ ಅನನ್ಯನಾಗಿದ್ದನು. ಮ್ಯಾಂಚೆಸ್ಟರ್‍ನಲ್ಲಿರುವಾಗ, ಆರ್ಥರ್ ಲ್ಯಾಪ್‍ವರ್ಥ್, ರಾಬಿನ್ಸನ್‍ನ ಗುರುವಾಗಿದ್ದನು. ಈತನಿಂದ ಸಾವಯವ ರಾಸಾಯನಿಕ ಕ್ರಿಯೆಗಳಿಗೆ ಎಲೆಕ್ಟ್ರಾನಿಕ್ಸ್ ಕ್ರಿಯೆಗಳ ಹಿನ್ನೆಲೆಗಳಲ್ಲಿ ವಿವರಣೆ ನೀಡುವುದನ್ನು ಕಲಿತನು. ಮೊದಲಿಗೆ ಆರ್ಥರ್ ಲ್ಯಾಪ್‍ವರ್ಥ್ ಜೊತೆಗೆ ನಂತರ ಸ್ವತಂತ್ರವಾಗಿ ಸಾವಯವ ರಾಸಾಯನಿಕಗಳ ಪ್ರತಿಕ್ರಿಯಾ ಸರಣಿಯನ್ನು ವಿವರಿಸಿದನು. ಇದಕ್ಕೆ ಹೊಂದುವ ಸಿದ್ಧಾಂತ ನೀಡಿದನು. ರಾಬಿನ್ಸನ್ ಚದುರಂಗದಾಟದಲ್ಲಿ ನಿಸ್ಸೀಮನೂ. ಪರ್ವತರೋಹಿಯೂ ಮೋಟಾರ್ ಬೈಕ್‍ಗಳ ವೇಗ ಸವಾರನೂ ಪ್ರವಾಸ ಪ್ರಿಯನೂ ಆಗಿದ್ದನು. 1947ರಲ್ಲಿ ರಾಬಿನ್ಸನ್ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/19/2020