ನಾರ್ಥ್ರಪ್ ಜಾನ್ ಹೊವರ್ಡ್ (1891-1987) ೧೯೪೬
ಅಸಂಸಂ -ಜೀವ ರಸಾಯನಶಾಸ್ತ್ರ- ಹಲವಾರು ಸ್ಫಟಿಕ ಕಿಣ್ವಗಳನ್ನು (Crystalline Enzymes) ಪಡೆದಾತ.
ನಾರ್ಥ್ರಪ್ ನ್ಯೂಯಾರ್ಕ್ ರಾಜ್ಯದ ಯಾಂಕರ್ಸ್ ಪಟ್ಟಣದಲ್ಲಿ ಜನಿಸಿದನು. ಈತನ ತಂದೆ ಕೊಲಂಬಿಯಾ ವಿಶ್ವ ವಿದ್ಯಾಲಯದಲ್ಲಿ ಬೋಧಕನಾಗಿದ್ದನು. ನಾರ್ಥ್ರಪ್ ಜನಿಸುವ ಕೆಲದಿನ ಮೊದಲು ಪ್ರಯೋಗಾಲಯದಲ್ಲಿ ನಡೆದ ಅಪಘಾತದಲ್ಲಿ ಆತ ಮೃತನಾದನು. ನಾರ್ಥ್ರಪ್ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆದು, 1916ರಿಂದ ರಾಕ್ಫೆಲರ್ ಸಂಸ್ಥೆಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿದನು. ಮೊದಲ ಜಾಗತಿಕ ಯುದ್ಧದ ಸಮಯದಲ್ಲಿ ಆಲ್ಕೋಹಾಲ್‍ನಿಂದ ಭೂರಿ ಪ್ರಮಾಣದಲ್ಲಿ (Mass Quantity) ಅಸಿಟೋನ್ ತಯಾರಿಸಲು ಬೇಕಾಗುವ ಸೂಕ್ತವಾದ ಹುದುಗಿಕೆಯನ್ನು ಕಂಡು ಹಿಡಿಯಲು ನಾರ್ಥ್ರಪ್ ಯತ್ನಿಸಿದನು. ಇದರ ಮುಂದುವರಿಕೆಯಾಗಿ ಜೀವಿಗಳಲ್ಲಿನ ಪಚನಕ್ರಿಯೆ ಉಸಿರಾಟ, ಚಯಾಪಚಯ , ಕಿಣ್ವಗಳ ಪರಿಚಯ ನಾರ್ಥ್ರಪ್’ಗೆ ಒದಗಿತು. ಜೀವಿಗಳಲ್ಲಿನ ರಾಸಾಯನಿಕ ಕ್ರಿಯೆಗಳ ವೇಗ ನಿಯಂತ್ರಿಸುವ , ವರ್ಧಿಸುವ ಮಧ್ಯವರ್ತಿಗಳಿಗೆ ಕಿಣ್ವಗಳೆಂದು ಕರೆಯುತ್ತಾರೆ. ಈ ಕಿಣ್ವಗಳು ಆ ಕಾಲಕ್ಕೆ ಬಹು ನಿಗೂಢ ರಾಸಾಯನಿಕಗಳಾಗಿದ್ದವು. ಇವುಗಳ ರಾಚನಿಕ ಸ್ವರೂಪವಾಗಲಿ, ಗುಣಧರ್ಮಗಳಾಗಲಿ ತಿಳಿದಿರಲಿಲ್ಲ. ಜರ್ಮನಿಯ ಖ್ಯಾತ ಜೀವರಸಾಯನಶಾಸ್ತ್ರಜ್ಞ ,ನೊಬೆಲ್ ಪ್ರಶಸ್ತಿ ವಿಜೇತ ವಿಲ್ ಷ್ಟೆಟೆರ್ ತನ್ನ ಪ್ರಯೋಗಗಳಿಂದ ಕಿಣ್ವಗಳು, ಪ್ರೋಟಿನ್‍ಗಳಲ್ಲವೆಂದು ಹೇಳಿದ್ದನು. 1926ರಲ್ಲಿ ಬಿ.ಸುಮ್ನೆರ್ ಕಿಣ್ವವೊಂದನ್ನು ಹರಳುಗಟ್ಟಿಸಿ ಅದೊಂದು ಪ್ರೊಟೀನ್ ಎಂದು ತೋರಿಸಿದ್ದನು. ಆದರೆ ಈ ಸಂಶೋಧನೆಯ ಮೌಲಿಕತೆ ವಿಜ್ಞಾನಿಗಳಿಗೆ ಸ್ಪಷ್ಟವಾಗಿರಲಿಲ್ಲ. ನಾರ್ಥ್ರಪ್ ಇದರ ಪ್ರಾಮುಖ್ಯತೆಯ ಅರಿವಾಯಿತು. ಬಿ. ಸುಮ್ನೆರ್ ವಿಧಾನದಲ್ಲೇ ಈತ ಜಠರದ ಪೆಪ್ಸಿನ್ ಸೇರಿದಂತೆ ಹಲವಾರು ಕಿಣ್ವಗಳನ್ನು ಹರಳುಗಟ್ಟಿಸಿದನು. ಇವುಗಳಲ್ಲಿ ಪಚನಕಾರಿಗಳಾದ ಟ್ರೈಫಿûನ್ ಹಾಗೂ ಪೆಪ್ಸಿನ್ ಮುಖ್ಯವಾದವು. ರೈಬೋ ನ್ಯೂಕ್ಲಿಯಸ್ ಹಾಗೂ ಆಕ್ಸಿರೈಬೋಸ್ ಸಹ ಪಡೆದನು. ಇದು ಕಿಣ್ವಗಳ ಬಗೆಗಿದ್ದ ನಿಗೂಢತೆಯನ್ನು ಒಡೆದು, ಹಲವಾರು ಹೊಸ ಸಂಶೋಧನೆಗಳಿಗೆ ಬಾಗಿಲು ತೆರೆಯಿತು. 1938ರಲ್ಲಿ ನಾತ್ರ್ರಪ್ ಬ್ಯಾಕ್ಟೀರಿಯಾಕ್ಕೆ ತಾಗುವ ವೈರಸ್‍ನ್ನು ಪ್ರತ್ಯೇಕಿಸಿ,. ಅದು ಸಹ ಒಂದು ಬಗೆಯ ಪ್ರೊಟೀನ್ ಎಂದು ಖಚಿತಪಡಿಸಿದನು. ನಾರ್ಥ್ರಪ್ ಸುಮ್ನೆರ್ ಹಾಗೂ ಸ್ಟ್ಯಾನ್ಲಿಯ ಜೊತೆಗೆ 1946ರ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019