ಜಿಯೋಕ್,ವಿಲಿಯಂ ಫ್ರಾನ್ಸಿಸ್ (1895-1982)
ಅಸಂಸಂ-ಭೌತರಸಾಯನಶಾ- ಅತಿ ನಿಮ್ನ ತಾಪಮಾನಗಳ ಅಧ್ಯಯನದ ಮುಂದಾಳು.
ಜಿಯೋಕ್ ,ವೈದ್ಯುತ್ ಇಂಜಿನಿಯರ್ ಆಗಬೇಕೆಂದು ಬಯಸಿದನು. ಅದು ಸಾಧ್ಯವಾಗದೆ ಬ್ಭೆರೆಯ ಶಿಕ್ಷಣ ಪಡೆದನು. ನಂತರ ಕೆಲಸಕ್ಕಾಗಿ ಅಲೆದನು. ಆದರೆ ಅವನು ಬಯಸಿದಂತಹ ನೌಕರಿ ಅವನಿಗೆ ದಕ್ಕಲಿಲ್ಲ. ಇದರಿಂದ ರಾಸಾಯನಿಕ ಕಾರ್ಖಾನೆ ಸೇರಿ ಕ್ರಮೇಣ ಅದರಲ್ಲಿ ಆಸಕ್ತಿ ಹೊಂದಿದನು. ಆದರೆ ಅಲ್ಪ ಕಾಲದಲ್ಲೇ ಆ ನೌಕರಿಅ ತೊರೆದು, ಬರ್ಕ್ಲೆಯಲ್ಲಿನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿ, ಮುಂದೆ ಅಲ್ಲಿಯೇ ಪ್ರಾಧ್ಯಾಪಕನಾದನು. 1925ರಲ್ಲಿ ಜಿಯೋಕ್ 1 ಕೆಲ್ವಿನ್‍ಗಿಂತಲೂ ಕಡಿಮೆ ತಾಪಮಾನಗಳಿಸಲು ವಿಕಾಂತೀಕರಣ (Demagnetisation) ವಿಧಾನ ಬಳಸಿದನು. ಇಂತಹ ಅತ್ಯಲ್ಪ ತಾಪಮಾನವನ್ನು ಗಳಿಸಲು ಈ ಹಿಂದೆ ಸಾಧ್ಯವಾಗಿರಲಿಲ್ಲ. ಈ ವಿಧಾನದಲ್ಲಿ ಅನುಕಾಂತತ್ವ (Paramagnetic) ಹೊಂದಿದ ವಸ್ತುವನ್ನು ಸಾಧ್ಯವಾದಷ್ಟು ಅಲ್ಪ ತಾಪಮಾನದಲ್ಲಿ ಕಾಯ್ದಿರಿಸಿಕೊಳ್ಳಲಾಗುತ್ತದೆ. ಇದನ್ನು ಪ್ರಬಲ ಕಾಂತಕ್ಷೇತ್ರದಿಂದ ಪ್ರೇರೇಪಿಸಿದಾಗ ಅದರಲ್ಲಿನ ಕಾಂತತ್ವದ ಅಣುಗಳು ಒಂದೇ ದಿಶೆಯಲ್ಲಿ ಪಂಜ್ತೀಕರಣಗೊಳ್ಳುತ್ತವೆ (Align). ಹೀಗೆ, ಅದು ಕಾಂತತ್ವ ಹೊಂದಿದಾಗ ಅದನ್ನು ಹಠಾತ್ತಾಗಿ ಕಾಂತಕ್ಷೇತ್ರದಿಂದ ಬಿಡುಗಡೆಗೊಳಿಸಬೇಕು. ಆಗ ಪಂಜ್ತೀಕರಣಗೊಂಡಿದ್ದ ಅಣುಗಳು ಯಾದೃಚ್ಛಿಕ (Random). ದಿಶೆಗೆ ತಿರುಗುತ್ತದೆ. ಇದಕ್ಕೆ ಚೈತನ್ಯ ಬೇಕು. ಈ ಚೈತನ್ಯವನ್ನು ಅನುಕಾಂತ ಸಾಮಗ್ರಿಯ ತಾಪಮಾನ ಒದಗಿಸುತ್ತದೆ. ಪರಿಣಾಮವಾಗಿ ಈ ಸಾಮಗ್ರಿಯ ತಾಪಮಾನ ಕುಸಿಯುತ್ತದೆ. ಈ ವಿಧಾನ ವ್ಯಾವಹಾರಿಕವಾಗಿ ಸುಲಭವಾಗಿದ್ದು ಆರ್ಥಿಕವಾಗಿ ಕೈಗೆಟುಕುವಂತಹದು. 1933ರಲ್ಲಿ ಜಿಯೋಕ್‍ನ ವಿಶೇಷ ಪರಿಶ್ರಮದಿಂದ, ನಡೆಸಿದ ಪ್ರಯೋಗಗಳಿಂದ 0.1.ಕೆಲ್ವಿನ್‍ನಷ್ಟು ಅಲ್ಪ ತಾಪಮಾನ ಗಳಿಸುವುದು ಸಾಧ್ಯವಾಯಿತು. ಜಿಯೋಕ್ ವಿಧಾನವನ್ನು ಪರಿಷ್ಕರಿಸಿ ಕೆಲ್ವಿನ್ ಸಹಸ್ರಾಂಶದಷ್ಟು ಅಲ್ಪ ತಾಪಮಾನವನ್ನು ಗಳಿಸುವುದು ಈಗ ಸಾಧ್ಯವಾಗಿದೆ. ಜಿಯೋಕ್‍ನ ಈ ಸಾಧನೆಗೆ 1994ರ ನೊಬೆಲ್ ಪ್ರಶಸ್ತಿ ನೀಡಲಾಯಿತು. 1929ರಲ್ಲಿ ಜಿಯೋಕ್ ವಾತಾವರಣದಲ್ಲಿರುವ ಆಮ್ಲಜನಕ ಅಮ್ಲಜನಕ -17 ಮತ್ತು 18ನ್ನು ಹೊಂದಿದೆಯೆಂದು ಅನಾವರಣಗೊಳಿಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/21/2020