ಅರ್ಟೂರಿ, ಇಲ್ಮರಿ ವಿರ್ಟನೆನ್ (1895-1973) – ೧೯೪೫
ಫಿನ್ಲೆಂಡ್-ರಸಾಯನಶಾಸ್ತ್ರ-ಹುದುಗುವಿಕೆ, ಕಿಣ್ವ ಕ್ರಿಯಾಶೀಲತೆ ಕುರಿತಾಗಿ ಸಂಶೋಧಿಸಿದಾತ.
ವಿರ್ಟನೆನ್ 15 ಜನವರಿ 1895ರಂದು ಹೆಲ್ಸಿಂಕಿಯಲ್ಲಿ ಜನಿಸಿದನು. ಹೆಲ್ಸಿಂಕಿ ವಿಶ್ವ ವಿದ್ಯಾಲಯದಿಂದ 1919ರಲ್ಲಿ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದನು. 1920ರಲ್ಲಿ ಝೂರಿಕ್‍ನಲ್ಲಿ ಜಿ.ವಿಗ್ನೆರ್ ಕೆಳಗೆ ಭೌತರಸಾಯನಶಾಸ್ತ್ರವನ್ನು, 1921ರಲ್ಲಿ ಸ್ಟಾಕ್‍ಹೋಂನಲ್ಲಿ ಬಾರ್ಥೆಲ್ ಮಾರ್ಗದರ್ಶನದಲ್ಲಿ ಬ್ಯಾಕ್ಟೀರಿಯಾಶಾಸ್ತ್ರ, ಕಿಣ್ವಶಾಸ್ತ್ರವನ್ನು (Enzymology) ) ಅಧ್ಯಯನ ಮಾಡಿದನು. 1923ರಿಂದ ಜೀವ ರಸಾಯನಶಾಸ್ತ್ರದಲ್ಲಿ ಆಸಕ್ತಿ ವಹಿಸಿದನು. 1931ರಲ್ಲಿ ಹೆಲ್ಸಿಂಕಿಯ ಜೀವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. ವಿರ್ಟನೆನ್, ಲ್ಯಾಕ್ಟಿಕ್ ಹಾಗೂ ಪ್ರೊಪಿಯಾನಿಕ್ ಆಮ್ಲಗಳ ಹುದುಗಿಕೆ, ಸಕ್ಕರೆಯ ¥sóÁಸ್ಪರೀಕರಣದಲ್ಲಿ ಕೊಝೈಮೇಸ್‍ಗಳ ಪ್ರಾಮುಖ್ಯತೆಯನ್ನು, ವಿವಾದಾತೀತವಾಗಿ ತೋರಿಸಿದನು. ವಿರ್ಟನೆನ್ ಹಾಗೂ ಸಂಗಡಿಗರು ಬ್ಯಾಕ್ಟೀರಿಯಾಗಳಿಂದಾಗುವ ವಿವಿಧ ಬಗೆಯ ಹುದುಗುವಿಕೆಯ (Fermentation) ಸ್ವರೂಪವನ್ನು ವಿವರಿಸಿದರು. ಫಾಸ್ಪೇಟ ಉಪಸ್ಥಿತಿಯಲ್ಲಿ ಕೊಲಿ ಬ್ಯಾಕ್ಟೀರಿಯಾಗಳಿಂದ ಡಯೂಕ್ಸೆಸೆಟನ್ ಗ್ಲಿಸರಿನ್ ಹಾಗೂ ಗ್ಲಿಸೆರಿಕ್ ಆಮ್ಲವಾಗಿ ಪರಿವರ್ತನೆ ಹೊಂದುವ ಸಂಪೂರ್ಣ ವಿವರವನ್ನು ಮೊದಲಿನಿಂದ ಕೊನೆಯವರೆಗೆ ರಾಸಾಯನಿಕವಾಗಿ ವಿವರಿಸಿದ ಕೀರ್ತಿ ವಿರ್ಟನೆನ್‍ಗೆ ದಕ್ಕಿತು. ಜೀವಕೋಶಗಳ ಕಿಣ್ವಕ ಕ್ರಿಯಾಶೀಲತೆ ಹಾಗೂ ಅವುಗಳ ಪ್ರೊಟೀನ್ ಅಂಶಗಳ ಮಧ್ಯದ ಸಂಬಂಧವನ್ನು ಅರಿಯಲು ವಿರ್ಟನೆನ್ ಯತ್ನಿಸಿದಟಿu. ಸಸ್ಯಗಳ ಬೇರುಗಳಲ್ಲಿ ಬ್ಯಾಕ್ಟಿರಿಯಾಗಳಿಂದ ಸಾರಜನಿಕ ಸ್ಥಿರೀಕರಣಗೊಳ್ಳುವ ಕ್ರಿಯೆಯನ್ನು ಅರಿಯುವ ನಿಟ್ಟಿನಲ್ಲಿ ವಿರ್ಟನೆನ್ ನಡೆಸಿದ ಸಂಶೋಧನೆಗಳು ಗಮನಾರ್ಹವಾಗಿವೆ. ವಿರ್ಟನೆನ್, ವಿವಿಧ ಸಸ್ಯಗಳಿಂದ ಹಲವಾರು ಅಮೈನೋ ಆಮ್ಲಗಳನ್ನು ಬೇರ್ಪಡಿಸಿದನು. ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಜೀವ ರಸಾಯನಶಾಸ್ತ್ರದ ತತ್ತ್ವಗಳು ವಿರ್ಟನೆನ್ ಹಾಗೂ ಸಂಗಡಿಗರ ಪರಿಶ್ರಮದ ಫಲವಾಗಿ ಈಗ ಬಳಕೆಗೆ ಬಂದಿವೆ. ಜಾನುವಾರುಗಳಿಗೆ ಬೇಕಾದ ಮೇವನ್ನು ಸಂಗ್ರಹಿಸುವ ಎಐವಿ ಎನ್ನುವ ವಿಧಾನವು ಸೈದ್ಧಾಂತಿಕವಾಗಿ ವಿರ್ಟನೆನ್‍ನಿಂದ ವಿವರಿಸಲ್ಪಟ್ಟಿವೆ. ಹೀಗೆ ಸಂರಕ್ಷಿಸಲ್ಪಟ್ಟ ಮೇವು ತಿನ್ನುವ ದನಗಳು ಉಷ್ಣ ಕಾಲದಲ್ಲಿ, ಹಸಿರು ಸಮೃದ್ದಿಯ ಕಾಲದಂತೆ ಹಯನನ್ನು ನೀಡಬಲ್ಲವು. ಹಯನು, ಹಯನುಗಳ ಉತ್ಪನ್ನ, ಸಂಸ್ಕರಣೆಯಲ್ಲಿ ವಿರ್ಟನೆನ್ ಬಹುದೊಡ್ಡ ಹೆಸರು. 1945ರಲ್ಲಿ ವಿರ್ಟನೆನ್, ರಾಸಾಯನಿಕ ಶಾಸ್ತ್ರದ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/17/2020