ಹಾರ್ಡೆನ್, ಸರ್ ಆರ್ಥರ್ (1865-1940)
ಬ್ರಿಟನ್-ಜೀವ ರಸಾಯನಶಾಸ್ತ್ರ-
ಹಾರ್ಡೆನ್ , ಮ್ಯಾಂಚೆಸ್ಟರ್ ಮತ್ತು ಎರ್ಲಾಂಜೆನ್‍ನಲ್ಲಿ ವಿದ್ಯಾಭ್ಯಾಸ ಪಡೆದು ಲಂಡನ್‍ನ ಲಿಸ್ಟರ್ ಸಂಸ್ಥೆಯಲ್ಲಿ ಕೊನೆಯವರೆಗೂ ದುಡಿದನು. ಬುಕ್‍ನೆರ್ ಕೋಶರಹಿತ ಯೀಸ್ಟನ ಆಹರಣದಿಂದ(Extract) ಸಕ್ಕರೆಗಳನ್ನು ಹುದುಗುಗೊಳಿಸಬಹುದೆಂದೂ, ಈ ಹುದುಗೊಳಿಕೆಯಲ್ಲಿ ಝೈಮೇಸ್ ಎನ್ನುವ ಕಿಣ್ವ (Enzyme) ಕ್ರಿಯಾಶೀಲವಾಗಿರುತ್ತದೆಯೆಂದು ತೋರಿಸಿದ್ದನು. ಹಾರ್ಡೆನ್,ಬುಕ್‍ನೆರ್‍ನ ಪ್ರಯೋಗಗಳನ್ನು ಮುಂದುವರೆಸಿ, ಝೈಮೆಸ್ ಒಂದೇ ಕಿಣ್ವವಾಗಿರದೆ, ಹಲವಾರು ಕಿಣ್ವಗಳ ಸಂಗಮವೆಂದು ತೋರಿಸಿದನು. ಸಕ್ಕರೆಯ ಆಲ್ಕೋಹಾಲ್ ಹುದುಗಿಕೆ, ಕೆಲವು ಹಂತಗಳಲ್ಲಿ ಜರುಗುತ್ತಿದ್ದು ಒಂದೊಂದು ಹಂತದಲ್ಲಿ ಝೈಮೆಸ್‍ನಲ್ಲಿರುವ ಒಂದೊಂದು ಕಿಣ್ವ ಪ್ರಭಾವ ಬೀರುತ್ತಿರುವುದೆಂದು ಸ್ಪಷ್ಟಗೊಳಿಸಿದನು. ಈ ಕ್ರಿಯೆಯ ಮಾಧ್ಯಮಿಕ ಉತ್ಪನ್ನಗಳಾಗಿ ಸಕ್ಕರೆಯ ¥sóÁಸ್ಪೇಟ್ ಗಳಿಂದ ತಯಾರಾಗುತ್ತವೆ. ಸ್ನಾಯುಗಳಲ್ಲಿ ಕಾರ್ಬೋಹೈಡ್ರೇಡ್‍ಗಳು ಲ್ಯಾಕ್ಟಿಕ್ ಆಮ್ಲವಾಗಿ ಹುದುಗಿಕೆಯಿಂದ ಪರಿವರ್ತನೆಗೊಳ್ಳುವುದೆಂದು ಹಾರ್ಡೆನ್ ಖಚಿತಗೊಳಿಸಿದನು. ಈ ಸಂಗತಿಗಳು ಜೀವ ರಸಾಯನಶಾಸ್ತ್ರಕ್ಕೆ ಭದ್ರ ಬುನಾದಿಯನ್ನು ಒದಗಿಸಿದವು. 1929ರ ನೊಬೆಲ್ ಪ್ರಶಸ್ತಿಯನ್ನು ಹ್ಯಾನ್ಸ್‍ಕಾರ್ಲ್‍ನೊಂದಿಗೆ ಹಾರ್ಡೆನ್ ಹಂಚಿಕೊಂಡನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019