ವಿಂಡೌಸ್ ಅಡಾಲ್ಫ್ (1876-1959) ೧೯೨೮
ಜರ್ಮನಿ-ಸಾವಯವ ರಸಾಯನಶಾಸ್ತ್ರ-ಸ್ಟೆರಾಯಿಡ್ ರಸಾಯನಶಾಸ್ತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದಾತ.
ವಿಂಡೌಸ್ ವೈದ್ಯಕೀಯ ಅಧ್ಯಯನ ಮಾಡಿದನಾದರೂ, ಇ.ಷಿಷ್ಕರ್‍ನ ಉಪನ್ಯಾಸಗಳ ಪ್ರಭಾವದಿಂದ ರಸಾಯನಶಾಸ್ತ್ರದತ್ತ ಹೊರಳಿದನು. 1915ರಲ್ಲಿ ಗಟ್ಟಿಂಜೆನ್‍ನಲ್ಲಿ ಪ್ರಾಧ್ಯಾಪಕನಾದನು. 1901ರಿಂದ ಷಿಷ್ಕರ್‍ನ ಮಾರ್ಗದಲ್ಲೇ ಸಾಗಿ, ನೈಸರ್ಗಿಕ ರಾಸಾಯನಿಕಗಳ ಅಧ್ಯಯನ ಪ್ರಾರಂಭಿಸಿ, ಸ್ಟಿರಾಯಿಡ್‍ಗಳ ಗಹನವಾದ ರಚನೆಯನ್ನು ತಿಳಿದನು. ವಿಟಮಿನ್-ಡಿಯ ವಿವಿಧ ಗುಂಪುಗಳು ವಿಟಮಿನ್-ಬಿ ವಿಂಡೌಸ್‍ನಿಂದ ಪರಿಪೂರ್ಣ ಪರಿಶೀಲನೆಗೆ ಒಳಗಾದವು. ಜೈವಜನಿತ ಅಮೈನ್ ಹಿಸ್ಟಮೈನ್‍ನ್ನು ಮೊದಲಿಗ ಪತ್ತೆ ಹಚ್ಚಿದ ಕೀರ್ತಿ ವಿಂಡೌಸ್ ಪಾಲಿಗಿದೆ. 1928ರಲ್ಲಿ ವಿಂಡೌಸ್ ನೊಬೆಲ್ ಪ್ರಶಸ್ತಿ ಪಡೆದನು
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 9/5/2019