ವೀಲ್ಯಾಂಟ್ ,ಹೀನ್ರಿಕ್ ಒಟ್ಟೋ (1877-1957) ೧೯೨೭
ಜರ್ಮನಿ-ಸಾವಯವ ರಸಾಯನಶಾಸ್ತ್ರ- ಕೊಲೆಸ್ಟರಾಲ್ ಹಾಗೂ ಇತರ ಸ್ಟೆರಾಯಿಡ್‍ಗಳ ರಾಚನಿಕ ಅಧ್ಯಯನ (Structural Study) ನಡೆಸಿದಾತ.
ವೀಲ್ಯಾಂಟ್ ತಂದೆ ಬಂಗಾರ ಸಂಸ್ಕರಣೆಯ ಪರಿಣಿತನಾಗಿದ್ದನು. 4 ಜೂನ್ 1877 ರಂದು ವೀಲ್ಯಾಂಟ್ ಜನನವಾಯಿತು. ವೀಲ್ಯಾಂಟ್ ಸ್ಟುಟ್‍ಬರ್ಗ್, ಮ್ಯೂನಿಕ್ ಬರ್ಲಿನ್‍ಗಳಲ್ಲಿ ವಿದ್ಯಾಭ್ಯಾಸ ಮಾಡಿದನು. ಬೇಯರ್ ಪ್ರಯೋಗಶಾಲೆ ಸೇರಿ, ಸಂಶೋಧನೆ ಕೈಗೊಂಡು 1901ರಲ್ಲಿ ಡಾಕ್ಟರೇಟ್ ಗಳಿಸಿದನು. 1913ರಲ್ಲಿ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಪ್ರಯೋಗಾಲಯದಲ್ಲಿ ಉಪನ್ಯಾಸಕನಾದನು. 1917ರಲ್ಲಿ ತಾಂತ್ರಿಕ ಕಾಲೇಜಿಗೆ ವರ್ಗಾವಣೆಗೊಂಡನು. 1917-18ರ ಅವಧಿಯಲ್ಲಿ ಬರ್ಲಿನ್ ಡೆಹ್ಲೆಮನ್‍ನ ಕೈಸರ್ ವಿಲ್‍ಹೆಲ್ಮ್ ಸಂಸ್ಥೆಯಲ್ಲಿ ರಕ್ಷಣಾ ಇಲಾಖೆಯ ಪರವಾಗಿ ಕೆಲಸ ಮಾಡಿದನು. 1925ರಲ್ಲಿ ಮ್ಯೂನಿಕ್‍ನಲ್ಲಿ ವಿಲ್‍ಷ್ಟೆಟೆರ್’ನಿಂದ ತೆರವಾದ ಹುದ್ದೆಯನ್ನು ಅಲಂಕರಿಸಿದನು. ಆರಂಭದಲ್ಲಿ ಸಾರಜನಕ ಸಾವಯವ ವಸ್ತುಗಳ ಅಧ್ಯಯನ ನಡೆಸಿದನು. 1911ರಲ್ಲಿ ಮೊದಲ ಬಾರಿಗೆ ಸಾರಜನಕ ಮುಕ್ತ ಸಾವಯವಗಳನ್ನು ಪಡೆದನು. ನೈಸರ್ಗಿಕ ರಾಸಾಯನಿಕಗಳು, ಅಲ್ಕಾಯಿಡ್, ಚಿಟ್ಟೆಗಳ ರೆಕ್ಕೆಗಳ ಬಣ್ಣ ,ಸ್ಟೆರಾಯಿಡ್ ರಾಸಾಯನಿಕ ಶಾಸ್ತ್ರ ಹೀಗೆ ಹಲವು ಹತ್ತಾರು ವೀಲ್ಯಾಂಟ್ ಅಧ್ಯಯನದ ವಸ್ತುಗಳಾಗಿದ್ದವು. ಎಲ್ಲಾ ಪಿತ್ತರಸಗಳನ್ನು ಕೊಲಾನಿಕ್ ಆಮ್ಲವಾಗಿ ಪರಿವರ್ತಿಸಬಹುದೆಂದು ವೀಲ್ಯಾಂಟ್ ತೋರಿಸಿದನು. ಕೊಲೆಸ್ಟರಾಲ್‍ನಿಂದಲೂ ಇದೇ ಆಮ್ಲ ಪಡೆದನು. ಇದರಿಂದ ಪಿತ್ತರಸ ಹಾಗೂ ಕೊಲೆಸ್ಟರಾಲ್‍ಗಳು ಒಂದೇ ರಾಚನಿಕ ಸ್ವರೂಪದವೆಂದು ತಿಳಿಯಿತು. ಇದರ ಮೂಲ ಸ್ಟೆರಾಯಿಡ್ ರಚನೆಯನ್ನು ವೀಲ್ಯಾಂಟ್ ಸೂಚಿಸಿದನು. ಇದು ತಪ್ಪೆಂದು ನಂತರ ತಿಳಿಯಿತು. ಇದಾದ ಮೇಲೆ 1932ರಲ್ಲಿ ಇದರ ಸರಿಯಾದ ರಾಚನಿಕ ಸ್ವರೂಪ ಘೋಷಿಸಿದನು ವೀಲ್ಯಾಂಟ್ ಹಾವಿನ ವಿಷ, ಅದರ ಪರಿಣಾಮಗಳ ಅಧ್ಯಯನ ನಡೆಸಿದ್ದನು. ಮಾರ್ಫೈನ್. ಸ್ಟ್ರೆಖ್‍ನೈನ್‍ನಂತಹ ನೈಸರ್ಗಿಕ ರಾಸಾಯನಿಕಗಳ ಶುದ್ದೀಕರಣ ಸ್ಟೆರಾಯಿಡ್‍ಗಳ ಶುದ್ದೀಕರಣದಲ್ಲಿ ವೀಲ್ಯಾಂಟ್‍ದು ವಿಶ್ವ ವಿಖ್ಯಾತ ಹೆಸರು ಪಿತ್ತರಸ ಆಮ್ಲ ಹಾಗೂ ಅದರ ಸಂಬಂಧಿ ರಾಸಾಯನಿಕಗಳಲ್ಲಿನ ಸಂಶೋಧನೆಗಳಿಗಾಗಿ ವೀಲ್ಯಾಂಡ್ 1927ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/15/2019